Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

07:38 AM May 19, 2024 IST | suddionenews
Advertisement

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌ ಗುರಿಯನ್ನು ರೀಚ್ ಮಾಡಲು ಸಿಎಸ್ಕೆ ತಿಣುಕಾಡಿತು ನೋಡಿ, ಆರ್ಸಿಬಿ ಫ್ಯಾನ್ಸ್ ಹರ್ಷೋದ್ಘಾರ ನಿಲ್ಲಲೇ ಇಲ್ಲ. ಫೈನಲಿ ಆರ್ಸಿಬಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.

Advertisement

 

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ 29 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​ ಜತೆಗೆ 3 ಫೋರ್​ ಸಿಡಿಸಿದ್ರು. ಬರೋಬ್ಬರಿ 47 ರನ್​ ಸಿಡಿಸಿದರು. ಫಾಫ್​ ಡುಪ್ಲೆಸಿಸ್​​​ 39 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 54 ರನ್​​ ಚಚ್ಚಿದ್ರು. ಆದ್ರೆ, ರಜತ್​ ಪಾಟಿದಾರ್​ ಹೊಡೆತಕ್ಕೆ ಬೈ ಮಿಸ್​ ಆಗಿ ರನ್​ ಔಟ್​ ಆಗಿದ್ದಾರೆ. ಈ ಮೂಲಕ ಚೆನ್ನೈಗೆ 219 ರನ್ ಗಳ ಟಾರ್ಗೆಟ್ ನೀಡಲಾಗಿತ್ತು.

Advertisement

ಚೆನ್ನೈ ಅದರ ಬೆನ್ನತ್ತಿ ಆಟವಾಡಲು ಶುರು ಮಾಡಿತ್ತು. ಚೆನ್ನೈ ಸೂಪರ್​ ಕಿಂಗ್ಸ್​ ಪರ ಓಪನರ್​ ಆಗಿ ಬಂದ ರುತುರಾಜ್​ ಗಾಯಕ್ವಾಡ್​​ ಡಕೌಟ್​ ಆದ್ರು. ರಾಚಿನ್​ ರವೀಂದ್ರ ತಾನು ಆಡಿದ 37 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 61 ರನ್​​ ಸಿಡಿಸಿ ವಿಕೆಟ್​ ಒಪ್ಪಿಸಿದ. ರಹಾನೆ 33, ಜಡೇಜಾ 42, ಎಂ.ಎಸ್​​ ಧೋನಿ 25 ರನ್​ ಹೊಡೆದ್ರು. ಚೆನ್ನೈ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 191 ರನ್​​ ಗಳಿಸಿದೆ. ಆರ್​​ಸಿಬಿ ಚೆನ್ನೈ ವಿರುದ್ಧ 27 ರನ್​ನಿಂದ ಗೆದ್ದು ಪ್ಲೇ ಆಫ್​ಗೆ ಕ್ವಾಲಿಫೈ ಆಗಿದೆ.

Advertisement
Tags :
bengaluruchitradurgarcbsuddionesuddione newsಗ್ರ್ಯಾಂಡ್ ಎಂಟ್ರಿಚಿತ್ರದುರ್ಗಫೈನಲಿ ಪ್ಲೇ ಆಫ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article