ರತನ್ ಟಾಟಾ ಆಸ್ತಿಯಲ್ಲಿ ನಾಯಿಗೂ ಪಾಲು : ಬಂದಿದ್ದೆಷ್ಟು ಗೊತ್ತಾ..?
ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇದೀಗ ಆಸ್ತಿ ವಿಚಾರ ಚರ್ಚೆಯಾಗುತ್ತಿದೆ. ವಿಶೇಷ ಅಂದ್ರೆ ಅವರ ನಾಯಿಗೂ ಆಸ್ತಿಯಲ್ಲಿ ಪಾಲು ಸಿಕ್ಕಿದೆ. ರತನ್ ಟಾಟಾ ಅವರು ಎಷ್ಟು ಶ್ವಾನ ಪ್ರಿಯರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿತ್ತು. ಶ್ವಾನಗಳ ಜೊತೆಗೂ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಅಷ್ಟೇ ಅಲ್ಲ ತಮ್ಮ ಸಾಕು ನಾಯಿಗೆ ಆರೋಗ್ಯ ಸರಿ ಇರಲಿಲ್ಲ ಅಂತ ಅವಾರ್ಡ್ ಒಂದನ್ನೇ ಬಿಟ್ಟಿದ್ದರು. ಇದೀಗ ಅವರ ವಿಲ್ ರಿವೀಲ್ ಆಗಿದ್ದು ತಮ್ಮ ಸಾಕುನಾಯಿಗೂ ಆಸ್ತಿ ಬರೆದಿದ್ದಾರೆ.
ಅವರ ಬಳಿ ಜರ್ಮನ್ ಶಿಫರ್ಡ್ ನಾಯಿ ಇತ್ತು. ಅದರ ಜೀವಮಾನದ ಹಾರೈಕೆಗಾಗಿ ರತನ್ ಟಾಟಾ ಅವರು ವಿಲ್ ಮಾಡಿದ್ದಾರೆ. ತಮ್ಮ 10 ಸಾವಿರ ಕೋಟಿ ಆಸ್ತಿಯಲ್ಲಿ ನಾಯಿಗೂ ಪಾಲು ಬರೆದಿದ್ದಾರೆ. ರತನ್ ಟಾಟಾ ಅವರು ಫೌಂಡೇಶನ್, ಜಿಮ್ಟಿ ಟಾಟಾ, ಸಹೋದರಿಯಾರಾದ ಶಿರೀಮ್ ಮತ್ತು ಡಿಯಾನಾ, ಮನೆಯ ಸಿಬ್ಬಂದಿಗಳು ಹಾಗೂ ಆಪ್ತ ಸ್ನೇಹಿತರಿಗೆ ಹಂಚಿದ್ದಾರೆ.
ರತನ್ ಟಾಟಾ ಎಷ್ಟು ಮಾನವೀಯತೆಯ ಗುಣ ಹೊಂದಿದ್ದರು ಎಂಬುದು ಅವರ ಒಡನಾಡಿಗಳಿಗೆ, ಸಿಬ್ಬಂದಿಗಳಿಗೆ ಚೆನ್ನಾಗಿಯೇ ಅರಿವಿದೆ. ಇದೀಗ ವಿಲ್ ನೋಡಿದ ಮೇಲೆ ಅದು ಮತ್ತೆ ಪ್ರೂವ್ ಆಗಿದೆ. ತಾವಿಲ್ಲದೆ ಹೋದರೂ ನಾಯಿಯನ್ನು ಎಲ್ಲರು ಚೆನ್ನಾಗಿ ನೋಡಿಕೊಳ್ಳಲಿ ಎಂಬುದೇ ಅವರ ಬಯಕೆಯಾಗಿದೆ. ಹೀಗಾಗಿ ನಾಯಿಯ ಹಾರೈಕೆ ಮಾಡಿದವರಿಗೆ ಅದರ ಪಾಲಿನ ಆಸ್ತಿ ಸೇರಲಿದೆ. ರತನ್ ಟಾಟಾ ಹೋದ ಮೇಲೆ ನಾಯಿಗಳು ಕೂಡ ಮಂಕಾಗಿವೆ. ನಾಯಿಗಳೇ ಹಾಗೇ ಸದಾ ಜೊತೆಗಿದ್ದ ಜೀವ ಕಾಣದೆ ಹೋದರೆ ಸೊರಗಿ ಹೋಗುತ್ತವೆ.