Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಮೇಶ್ವರಂ ಕೆಫೆ : ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

10:54 AM Mar 02, 2024 IST | suddionenews
Advertisement

ಬೆಂಗಳೂರು : ಇಂದಿರಾನಗರದಲ್ಲಿರುವ ರಾಮೇಶ್ವರಂ ಕೆಫೆ ಸ್ಪೋಟ ಸಿಲಿಕಾನ್ ಸಿಟಿ ಮಂದಿಯಲ್ಲಿ ಕೊಂಚ ಭಯದ ವಾತಾವರಣವನ್ನು ಉಂಟು ಮಾಡಿದೆ. ಸೇಫ್ ಬೆಂಗಳೂರು ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಆದರೂ ಈ ರೀತಿಯ ಬಾಂಬ್ ಬ್ಲಾಸ್ಟ್ ಘಟನೆಗಳ ಕೆಲವೊಂದು ಆತಂಕ ಸೃಷ್ಟಿ‌ ಮಾಡುತ್ತವೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ನಿನ್ನೆಯಿಂದಾನೂ ತನಿಖೆ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ.

Advertisement

'ಘಟನೆ ಸಂಬಂಧ ಬಹಳ ಸೀರಿಯಸ್ ಆಗಿ, ಆಳವಾಗಿ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹಳಷ್ಟು ಕುರುಹುಗಳು ಸಿಕ್ಕಿವೆ. ಸಿಸಿಟಿವಿಯಲ್ಲೂ ಸಾಕ್ಷ್ಯಗಳು ಸಿಕ್ಕಿವೆ. ಆತ ಸುಮಾರು 28 ಬಸ್ ಗಳು ಓಡಾಡಿವೆ. ಆತ ಬಸ್ ನಲ್ಲಿ ಬಂದಿದ್ದಾನೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಬಸ್ ಗಳಲ್ಲೂ ಸಿಸಿ ಕ್ಯಾಮೆರಾಗಳಿವೆ. ಯಾವುದೇ ಕಾರಣಕ್ಕೂ ಅಪರಾಧಿಯನ್ನು ತಪ್ಪಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ.

ಈ ಕೃತ್ಯ ಒಬ್ಬನಿಂದ ಮಾತ್ರ ನಡೆದಿದೆಯೋ ಅಥವಾ ಅವನ ಹಿಂದೆ ಬೇರೆ ಯಾರಾದರೂ ಇದ್ದಾರ ಎಂಬೆಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಹೊಟೇಲ್ ನವರು ಮೂರ್ನಾಲ್ಕು ಕಡೆ ಸಕ್ಸಸ್ ಆಗಿದ್ದಾರೆ ಎಂಬ ಕಾರಣಕ್ಕೂ ಹೀಗೆ ಮಾಡಿರಬಹುದು. ಸ್ಥಳಕ್ಕೆ ಹೋದಾಗ ಅಲ್ಲಿ ಕೆಲವರು ಈ ವಿಚಾರವಾಗಿ ಮಾತನಾಡಿದ್ದಾರೆ. ಹೀಗಾಗಿ ಎಲ್ಲಾ ಆಯಾಮದಿಂದಾನೂ ತನಿಖೆ ನಡೆಯುತ್ತಿದೆ. 2022ರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಅವರು ರಾಜೀನಾಮೆ ನೀಡಿದ್ರಾ..? ಅವರು ಎಲ್ಲದಕ್ಕೂ ರಾಜೀನಾಮೆ ಕೇಳ್ತಾರೆ. ಈ ಸಮಯದಲ್ಲಿ ಸಹಕಾರ ಕೋರಿದ್ದೇವೆ. ಇದು ರಾಜ್ಯದ ಮತ್ತು ಬೆಂಗಳೂರು ಸೇಫ್ಟಿಯ ಪ್ರಶ್ನೆ. ಹೀಗಾಗಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Advertisement

Advertisement
Tags :
bengaluruchitradurgaHome Minister ParameshwarRameswaram Cafesuddionesuddione newsಗೃಹ ಸಚಿವ ಪರಮೇಶ್ವರ್ಚಿತ್ರದುರ್ಗಬೆಂಗಳೂರುರಾಮೇಶ್ವರಂ ಕೆಫೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article