For the best experience, open
https://m.suddione.com
on your mobile browser.
Advertisement

ರಾಜ್ಯಸಭಾ ಚುನಾವಣೆ : ಅಡ್ಡಮತದಾನ ಮಾಡಿದ ಎಸ್ ಟಿ ಸೋಮಶೇಖರ್

02:04 PM Feb 27, 2024 IST | suddionenews
ರಾಜ್ಯಸಭಾ ಚುನಾವಣೆ   ಅಡ್ಡಮತದಾನ ಮಾಡಿದ ಎಸ್ ಟಿ ಸೋಮಶೇಖರ್
Advertisement

Advertisement
Advertisement

ಬೆಂಗಳೂರು: ಇತ್ತಿಚೆಗೆ ಬಿಜೆಪಿಗಿಂತ ಕಾಂಗ್ರೆಸ್ ಕಡೆಗೆ ಹೆಚ್ಚು ಒಲವು ಹೊಂದಿದ್ದ ಎಸ್ ಟಿ ಸೋಮಶೇಖರ್ ವಿಚಾರದಲ್ಲಿ ಬಿಜೆಪಿ ನಾಯಕರಿಗೇನೆ ಹಲವು ಅನುಮಾನಗಳಿದ್ದವು. ಅದರಲ್ಲೂ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧವಾಗಿ ವೋಟ್ ಹಾಕಬಹುದು ಎಂಬ ಅನುಮಾನವಿತ್ತು. ಇದೀಗ ಅದೇ ಸತ್ಯವಾಗಿದೆ. ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡಮತದಾನ ಮಾಡಿದ್ದಾರೆ. ಈ ಸಂಬಂಧ ಎಲೆಕ್ಷನ್ ಏಜೆಂಟ್ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

Advertisement
Advertisement

ಮತ ಹಾಕಿದ ಬಳಿಕ ನನ್ನ ಆತ್ಮಸಾಕ್ಷಿಗೆ ತೃಪ್ತಿ ನೀಡುವಂತೆ ಮತ ಹಾಕಿದ್ದೀನಿ ಎಂದಿದ್ದಾರೆ. ಇದು ಬಿಜೆಪಿ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಎಸ್ ಟಿ ಸೋಮಶೇಖರ್ ಅವರ ನಡೆಗೆ ಬಿಜೆಪಿ ಪಾಳಯ ಕೆಂಡಾಮಂಡಲವಾಗಿದೆ.

Advertisement

ಇನ್ನು ಚುನಾವಣೆಯಲ್ಲಿ ಮತ ಹಾಕುವುದಕ್ಕೂ ಮೊದಲು ಎಸ್ ಟಿ ಸೋಮಶೇಖರ್ ಮಾತನಾಡಿದ್ದರು. ಅನುದಾನ ನೀಡುವಂತವರಿಗೆ ಆತ್ಮಸಾಕ್ಷಿಯಿಂದ ಮತ ಹಾಕುತ್ತೀನಿ. ಹನ್ನೊಂದು ವರ್ಷದಿಂದ ಎಲ್ಲರಿಗೂ ಹಾಕಿದ್ದೀನಿ. ರಾಜ್ಯಸಭೆಗೆ ಆಯ್ಕೆಯಾದವರು ಒಂದು ರೂಪಾಯಿ ಅನುದಾನ ನೀಡಿಲ್ಲ. ನೇರಾ ನೇರ ಹೇಳ್ತೀನಿ ಯತ್ನ ಸಾಕ್ಷಿಯಿಂದ ಮತ ಹಾಕ್ತೀನಿ. ಕಳೆದ ಬಾರಿ ನಿರ್ಮಲಾ ಸೀತರಾಮನ್ ಗೆ ಮತ ಹಾಕಿದ್ದೆ. ಆಮೇಲೆ ನಿರ್ಮಲಾ ಸೀತರಾಮನ್ ನನಗೆ ಅಪಾಯಿಟ್ಮೆಂಟ್ ಕೊಡಲೇ ಇಲ್ಲ. ನನಗೆ ಯಾರೂ ಪ್ರಾಮೀಸ್ ಮಾಡುತ್ತಾರೆ, ಅವರಿಗೆ ಮತ ಕೊಡುತ್ತೀನಿ. ನೆಪ ಹೇಳ್ತಿಲ್ಲ. ಐದಾರು ಸರಿ ವಿಒಟ್ ಹೇಳಿದಾಗೆ ಹಾಕಿದ್ದೀನಿ. ವೋಟ್ ಹಾಕಿಸೋ ಮೊದಲು ಪ್ರಾಮಿಸ್ ಮಾಡುತ್ತಾರೆ. ಐದು ಕೋಟಿ ಅನುದಾನ ಬರುತ್ತೆ ನಮಗೆ ಕೊಡುತ್ತಾರಾ..?. ಅಲ್ಲಿ ಹೋದಂತ ಸಂದರ್ಭದಲ್ಲಿ ಆತ್ಮಸಾಕ್ಷಿಯಾಗಿ ಮತ ಹಾಕುತ್ತೀನಿ ಎಂದು ಹೇಳಿದ್ದರು. ಇದೀಗ ಅಡ್ಡ ಮತದಾನ ಮಾಡಿದ್ದಾರೆ.

Advertisement
Tags :
Advertisement