For the best experience, open
https://m.suddione.com
on your mobile browser.
Advertisement

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

03:19 PM May 03, 2024 IST | suddionenews
ತಂಪಾಯಿತು ಬೆಂಗಳೂರು   ಸುರಿಯುತ್ತಿದ್ದಾನೆ ವರುಣರಾಯ
Advertisement

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ ದರ್ಶನ ನೀಡಿದ್ದಾನೆ.

Advertisement
Advertisement

ಮಧ್ಯಾಹ್ನದಿಂದಾನೂ ಮೋಡ ಕವಿದ ವಾತಾವರಣವಿತ್ತು. 2 ಗಂಟೆಯಾಗುತ್ತಲೇ ಸಣ್ಣಗೆ ಶುರುವಾದ ಮಳೆ, ತಣ್ಣನೆಯ ಗಾಳಿಯೊಂದಿಗೆ ನಿಲ್ಲದೆ ಸುರಿಯುತ್ತಿದೆ. ಇದರಿಂದ ಬೆಂಗಳೂರಿನ ಮಂದಿ ಫುಲ್ ಖುಷಿಯಾಗಿದ್ದಾರೆ.

Advertisement

ಪ್ರತಿ ಸಲ ಮಳೆ ಬಂದಾಗಲೂ ಜನ ಇಷ್ಟೊಂದು ಖುಷಿ ಪಟ್ಟಿದ್ದು ಕಂಡಿಲ್ಲ. ಆದರೆ ಈ ಬಾರಿಯ ಬಿಸಿಲಿಗೆ ತಡೆಯಲಾರದೆ ಮಳೆಗಾಗಿ‌ ಕಾಯುತ್ತಿದ್ದರು. ಮೊದಲ ಮಳೆಯಿಂದಾಗಿ ಜನ ಅದ್ಬುತ ಕಂಡಂತೆ ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನಾಲ್ಕೈದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement
Advertisement

ಬೆಂಗಳೂರಿನ ಹಲವೆಡೆ ಮಳೆ ಒಂದೇ ಸಮನೆ ಸುರಿಯುತ್ತಿದೆ. ಮೆಜೆಸ್ಟಿಕ್, ಟೌನ್ ಹಾಲ್, ಮಾರ್ಜೆಟ್, ಹೆಬ್ಬಾಳ, ರಾಜಾಜಿನಗರ, ವಿಜಯನಗರ ಸೇರಿದಂತೆ ನಗರದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಒಣ ಹವೆ ಕಡಿಮೆಯಾಗಿ ತಂಪಾದ ವಾತಾವರಣ ನಿರ್ಮಾಣವಾದರೆ ಸಾಕು ಎನ್ನುತ್ತಿದ್ದಾರೆ ಜನಗಳು. ಇಂದಿನಿಂದ ಮಳೆ ಶುರುವಾಗಿರುವುದರಿಂದ ಮಳೆ ಬರಲಿದೆ ಎಂಬ ನಂಬಿಕೆ ಉಂಟಾಗಿದೆ.

ಇದ್ದಕ್ಕಿದ್ದ ಹಾಗೇ ಮಳೆ ಬಂದ ಕಾರಣ ವಾಹನ ಸವಾರರು ಕೊಂಚ ತಬ್ಬಿಬ್ಬಾದರೂ. ಕೆಲವರು ಮಳೆಯಲ್ಲಿಯೇ ನೆನೆದುಕೊಂಡು, ಆ ಮಳೆಯ ಎಂಜಾಯ್ ಮಾಡಿಕೊಂಡು ಮುಂದೆ ಸಾಗಿದ್ದಾರೆ. ಇನ್ನು ಕೆಲವರು ಮಳೆಯಿಂದ ಒಂದು ಕಡೆ ನಿಂತು ಬಿಟ್ಟಿದ್ದಾರೆ. ಒಟ್ನಲ್ಲಿ ಬಿಸಿ ಬಿಸಿ ವಾತಾವರಣ ತಂಪಾಯ್ತಲ್ಲ, ಜನ ಫುಲ್ ಖುಷಿಯಾಗಿದ್ದಾರೆ.

Advertisement
Tags :
Advertisement