Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಗಾಳಿ ಸಹಿತ ಮಳೆ : ಆರೆಂಜ್ ಅಲರ್ಟ್ ಘೋಷಣೆ..!

01:51 PM Oct 14, 2024 IST | suddionenews
Advertisement

ಬೆಂಗಳೂರು: ದಸರಾ ಹಬ್ಬಕ್ಕೆಂದು ಮೂರ್ನಾಲ್ಕು ದಿನಗಳ ಕಾಲ ಊರು ಸೇರಿದ್ದವರಿಗೆ ಇಂದು ಬೆಳಗ್ಗೆಯಿಂದ ಟ್ರಾಫಿಕ್ ಕಿರಿಕಿರಿ, ಮಳೆಯ ಸಮಸ್ಯೆಯೇ ತಲೆದೂರಿದೆ. ಬೆಳಗ್ಗೆಯಿಂದಾನೂ ಕೆಲ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದ ಹೊರಗೆ ಹೋಗುವ ಜನರಿಗೆ ಜಿಟಿಜಿಟಿ ಮಳೆ ಅಡ್ಡಿಯಾಗುತ್ತಿದೆ. ಬೆಳಗ್ಗೆನೆ ಎಲ್ಲೆಡೆ ಕಲರ್ ಫುಲ್ ಕೊಡೆಗಳ ದರ್ಶನವೇ ಆಗಿತ್ತು. ಕಳೆದ ಮೂರ್ನಾಲ್ಕು ದಿನದಿಂದ ರಜೆ ಇದ್ದಿದ್ದರಿಂದ ಊರುಗಳಿಗೆ ತೆರಳಿದ್ದವರು ನಿನ್ನೆ ಸಂಜೆಯಿಂದಾನೂ ಪ್ರಯಾಣ ಮಾಡುತ್ತಲೇ ಇದ್ದಾರೆ. ಹೀಗಾಗಿ ಟ್ರಾಫಿಕ್ ನಲ್ಲಿ ಸಿಲುಕಿದವರು, ಗಾಡಿಗಳು ಮೂವ್ ಆಗುವುದಕ್ಕೇನೆ ಕಷ್ಟಪಟ್ಟಿವೆ.

Advertisement

ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಘೋಷಣೆ ಮಾಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ‌ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಅಕ್ಟೋಬರ್17ರವರೆಗೂ ಕರಾವಳಿ ಹಾಗೂ ಕರಾವಳಿ ಜಿಲ್ಲೆಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಗುಡುಗು ಮಿಂಚಿನ ಜೊತೆಗೆ ಜೋರಾದ ಮಳೆಯಾಗಲಿದೆ. ಹಾಗೇ ರಾಜ್ಯದ ದಕ್ಷಿಣ, ಉತ್ತರ ಒಳನಾಡು ಭಾಗದಲ್ಲಿ ಚದುರಿದ ಮಳೆಯಾಗಲಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದ್ದು, ಹಿರಗೆ ಹೋಗುವ ಜನರು ಎಚ್ಚರದಿಂದ ಇರಬೇಕು. ಆದರೆ ಈ ಸಮಯದಲ್ಲಿ ಮಳೆಯೇ ಹೆಚ್ಚು ಬೀಳುತ್ತಿರುವುದು ಕೆಲ ಭಾಗದ ರೈತರಿಗೆ ಸಂಕಷ್ಟ ಬಂದಂತೆ ಆಗಿದೆ‌. ಬೆಳೆ ಕೊಯ್ಲು ಕಟಾವಿಗೆ ಬಂದಿದ್ದು, ಮಳೆಯಿಂದಾಗಿ ಹಾಳಾಗುವ ಸಾಧ್ಯತೆ ಇದೆ.

Advertisement

Advertisement
Tags :
bengaluruchitradurgaOrange alertRainsuddionesuddione newsಆರೆಂಜ್ ಅಲರ್ಟ್ಗಾಳಿ ಮಳೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article