Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿವಮೊಗ್ಗ.. ಚಿಕ್ಕಮಗಳೂರು ಸೇರಿದಂತೆ ಇಂದು ಹಲವೆಡೆ ಮಳೆ : ಹೇಗಿದೆ ಹವಮಾನ ವರದಿ..?

01:17 PM Nov 18, 2024 IST | suddionenews
Advertisement

ಬೆಂಗಳೂರು: ಭೂಮಿಯ ಮೇಲಿನ ವಾತಾವರಣವಂತೂ ನಿರೀಕ್ಷೆಯನ್ನೇ ಮಾಡದ ರೀತಿ ಬದಲಾಗುತ್ತಿದೆ. ಈಗಾಗಲೇ ಹಿಂಗಾರು ಮಳೆ ಮುಗಿದಿದೆ. ಚಳಿಗಾಲ ಆರಂಭವಾಗಿದೆ. ಈ ಚಳಿಗಾಲದ ಸಮಯದಲ್ಲಿ ಬೆಳೆಗಳ ಕೊಯ್ಲಿನ ಕಡೆಗೆ ರೈತರು ಹೆಚ್ಚು ಗಮನ ನೀಡುತ್ತಾರೆ. ಆದರೆ ಈಗ ಮಳೆ ಬರುತ್ತಿರುವುದು ರೈತರಿಗೂ ಸಂಕಷ್ಟ ತಂದೊಡ್ಡಿದೆ.

Advertisement

ಇಂದಿನಿಂದ ರಾಜ್ಯದಲ್ಲಿ ಮಳೆಯಾಗಲಿದ್ದು, ನವೆಂಬರ್ 25ರವರೆಗೂ ಮಳೆ ಮುಂದುವರೆಯಲಿದೆ. ಅಲ್ಲಿ ಸ್ವಲ್ಪ ಗ್ಯಾಪ್ ಕೊಟ್ಟು ಡಿಸೆಂಬರ್ 3ರವರೆಗೂ ಮತ್ತೆ ಮಳೆಯಾಗಲಿದೆ. ಕೆಲವೊಂದು ಭಾಗದಲ್ಲಿ ಅದರಲ್ಲೂ ತುಮಕೂರು ಭಾಗದ ಜನ ರಾಗಿ ಬೆಳೆಯನ್ನೇ ಹೆಚ್ಚು ಬೆಳೆದಿದ್ದಾರೆ. ಹೊಲವೆಲ್ಲ ಒಣಗಿ ನಿಂತಿದೆ. ಹೀಗಿರುವಾಗ ಮಳೆ ಬಂದರೆ ರಾಗಿಯ ಕೊಯ್ಲು ಮಾಡುವುದೇಗೆ ಎಂಬ ಆತಂಕ ರೈತರದ್ದಾಗಿದೆ.

ಹವಮಾನ ಇಲಾಖೆ ಕೊಟ್ಟ ಮುನ್ಸೂಚನೆ ಪ್ರಕಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಇರಲಿದೆ. ಕರಾವಳಿಯ ದಕ್ಷಿಣ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ‌. ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದೆ. ಇನ್ನು ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವೇ ಮುಂದುವರೆಯಲಿದೆ. ಜೊತೆಗೆ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಗರಿಷ್ಠ ತಾಪಮಾನವೂ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ಇನ್ನೆರಡು ದಿನಗಳಲ್ಲಿ ರಾಜ್ಯದ ಹವಮಾನದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

Advertisement

Advertisement
Tags :
bengaluruchikkamagaluruchitradurgaRainShimogasuddionesuddione newsweather reportಚಿಕ್ಕಮಗಳೂರುಚಿತ್ರದುರ್ಗಬೆಂಗಳೂರುಶಿವಮೊಗ್ಗಸುದ್ದಿಒನ್ಸುದ್ದಿಒನ್ ನ್ಯೂಸ್ಹಲವೆಡೆ ಮಳೆಹವಮಾನ ವರದಿ
Advertisement
Next Article