5 ಕೋಟಿ ಹಣ ವಾಪಾಸ್ ಮಾಡಿದ ರಾಹುಲ್ ದ್ರಾವಿಡ್ : ಸಮಾನತೆಯ ಭಾವವೇ ಇದಕ್ಕೆ ಕಾರಣ..!
ಈಗಷ್ಟೇ ಟೀಂ ಇಂಡಿಯಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಭಾರತ ವಿಶ್ವಕಪ್ ಗೆದ್ದ ಖುಷಿಯಲ್ಲಿ ಬಿಸಿಸಿಐ ಕಡೆಯಿಂದ 125 ಕೋಟಿ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಇದನ್ನು ಆಟಗಾರರಿಗೆ, ಕೋಚ್ ಗಳಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲೂ ಟೀಂ ಇಂಡಿಯಾದ ಹೆಡ್ ಕೋಚ್ ಆಗಿದ್ದಂತ ರಾಹುಲ್ ದ್ರಾವಿಡ್ ಅವರಿಗೂ ಐದು ಕೋಟಿ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಆದರೆ ಆ ಐದು ಕೋಟಿ ಹಣವನ್ನು ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ.
ಟೀಂ ಇಂಡಿಯಾ ಜೊತೆಗೆ ನಿಂತ 42 ಆಟಗಾರರಿಗೆ ಈ 125 ಕೋಟಿ ಹಣದಲ್ಲಿ ಹಂಚಿಕೆ ಮಾಡಲಾಗಿದೆ. ಅದರಲ್ಲಿ 15 ಆಟಗಾರರಿಗೆ ತಲಾ ಐದು ಕೋಟಿ ಬಹುಮಾನ ನೀಡಲಾಗಿದೆ. ಅದರಲ್ಲಿ ರಾಹುಲ್ ದ್ರಾವಿಡ್ ಕೂಡ ಇದ್ದಾರೆ. ಇನ್ನುಳಿದಂತೆ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಕೋಚ್ ಸೇರಿದಂತೆ ಇತರೆ ಕೋಚ್ ಗಳಿಗೆ ತಲಾ 2.5 ಕೋಟಿ ಬಹುಮಾನವನ್ನು ಘೋಷಣೆ ಮಾಡಿದೆ. ಆದರೆ ರಾಹುಲ್ ದ್ರಾವಿಡ್ ಈ ಐದು ಕೋಟಿ ಹಣವನ್ನು ತಿರಸ್ಕಾರ ಮಾಡಿದ್ದಾರೆ. ಅದಕ್ಕೂ ಕಾರಣವೊಂದಿದೆ. ಈ ಕಾರಣದಿಂದ ರಾಹುಲ್ ದ್ರಾವಿಡ್ ಮತ್ತೊಮ್ಮೆ ಎಲ್ಲರಮನಸ್ಸು ಗೆದ್ದಿದ್ದಾರೆ.
ಬೌಲಿಂಗ್, ಬ್ಯಾಟಿಂಗ್, ಕೋಚ್ ಗಳಿಗೆ ತಲಾ 2.5 ಕೋಟಿ ನೀಡುತ್ತಿರುವ ಕಾರಣ ನನಗೂ ಐದು ಕೋಟಿ ಹಣ ಬೇಡ. ಅವರಿಗೆಲ್ಲಾ ನೀಡಿದಂತೆ ಬರೀ ಬಹುಮಾನದ ಹಣವನ್ನಷ್ಟೇ ನೀಡಿ ಎಂದಿದ್ದಾರಂತೆ. ರಾಹುಲ್ ದ್ರಾವಿಡ್ ಅವರ ಮಾತಿಗೆ ಗೌರವ ನೀಡಿ, ಬಿಸಿಸಿಐ ಎರಡೂವರೆ ಕೋಟಿ ಕೊಡಲು ಒಪ್ಪಿದೆ. ಈ ಹಿಂದೆ U-19 ಪಂದ್ಯದ ವೇಳೆಯೂ ಇದೇ ರೀತಿ ನಿರ್ಧಾರ ಮಾಡಿದ್ದರು. ಎಲ್ಲರಿಗೂ 25 ಲಕ್ಷ ನೀಡಿ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ನೀಡುವುದಕ್ಕೆ ಬಂದಾಗ ಬಿಸಿಸಿಐ ಬಳಿ 25 ಲಕ್ಷವನ್ನಷ್ಟೇ ಪಡೆದಿದ್ದರು.