Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸುದೀಪ್ ತಾಯಿ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಾಘವೇಂದ್ರ ರಾಜ್‍ಕುಮಾರ್

01:43 PM Oct 20, 2024 IST | suddionenews
Advertisement

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಇಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದಾರೆ. ಜೆಪಿ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಹಲವು ಗಣ್ಯರು ಸುದೀಪ್ ನಿವಾಸಕ್ಕೆ ಬಂದು ಅವರ ತಾಯಿಯ ಅಂತಿಮ ದರ್ಶನ ಪಡೆದಿದ್ದಾರೆ. ರಾಘವೆಂದ್ರ ರಾಜ್‍ಕುಮಾರ್ ಅವರು ತಮ್ಮ ಮಕ್ಕಳೊಂದಿಗೆ ಬಂದು ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಹಳೆಯ ನೆನಪುಗಳಿಗೆ ಜಾರಿದ್ದಾರೆ.

Advertisement

ಪಾರ್ವತಮ್ಮ ಅವರು ಹಾಗೂ ಸರೋಜಾ ಅವರು ಎಷ್ಟು ಆತ್ಮೀಯರಾಗಿದ್ದರು ಎಂಬುದನ್ನು ಮಾತನಾಡುತ್ತಾ, ರಾಘವೇಂದ್ರ ರಾಜ್‍ಕುಮಾರ್ ಅವರು ಭಾವುಕರಾಗಿದ್ದಾರೆ. ತಾಯಿಯ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬೇಡಿಕೊಂಡಿಕೊಂಡಿದ್ದಾರೆ.

'ಸುದೀಪ್ ಅವರ ತಾಯಿ, ನಮ್ಮ ತಾಯಿ ತುಂಬಾ ವರ್ಚಗಳಿಂದ ಸ್ನೇಹಿತರು. ತುಂಬಾ ವರ್ಷಗಳಿಂದ ಮನೆಗೆ ಬರ್ತಾ ಇದ್ರು, ಒಬ್ಬರಿಗೊಬ್ಬರು ನೋಡ್ತಾ ಇದ್ರು. ಸುದೀಪ್ ಅವರನ್ನ ನೆನೆಸಿಕೊಂಡರೆ ತುಂಬಾ ಕಷ್ಟವಾಗುತ್ತೆ‌. ತಾಯಿ ಇಲ್ಲದೆ ಇದ್ದರೆ, ತಾಯಿ ಕಳೆದುಕೊಂಡ್ರೆ ಎಷ್ಟು ದುಃಖವಾಗುತ್ತೆ ಅನ್ನೋದು ಅರ್ಥ ಆಗುತ್ತೆ. ಜೀವನ ಹೇಗಿರುತ್ತೆ ಎಂಬ ವೇದನೆ ನಾನು ಅನುಭವಿಸಿದ್ದೀನಿ. ಸುದೀಪದ ಅವರು ಈಗ ಆ ವೇದನೆ ಅನುಭವಿಸಬೇಕಲ್ಲ ಎಂಬ ನೋವಿದೆ. ಸುದೀಪ್ ಅವರ ತಾಯಿಯ ಆತ್ಮಕ್ಕೆ ಶಾಂತಿಸಿಗಲಿ ಎಂಬುದೇ ನನ್ನ ಪ್ರಾರ್ಥನೆ. ಸುದೀಪ್ ಅವರಿಗೆ ಈ ನೋವು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದೇ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

Advertisement

ಸುದೀಪದ ಅವರ ತಾಯಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುದೀಪ್ ಅವರಿಗೂ ಧೈರ್ಯ ತುಂಬಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವು ಕಡಿಮೆ ಏನು ಇರಲ್ಲ. ಅವರ ಅಭಿಮಾನಿಗಳು ಕೂಡ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Advertisement
Tags :
kiccha sudeepraghavendra rajkumarrelives old memoriesSudeep's motherರಾಘವೇಂದ್ರ ರಾಜ್‍ಕುಮಾರ್ಸುದೀಪ್
Advertisement
Next Article