For the best experience, open
https://m.suddione.com
on your mobile browser.
Advertisement

ಪೂರಿ ಜಗನ್ನಾಥ ರತ್ನ ಭಂಡಾರ ಓಪನ್ : ಏನೆಲ್ಲಾ ಆಭರಣಗಳಿದ್ದವು..?

05:51 PM Jul 14, 2024 IST | suddionenews
ಪೂರಿ ಜಗನ್ನಾಥ ರತ್ನ ಭಂಡಾರ ಓಪನ್   ಏನೆಲ್ಲಾ ಆಭರಣಗಳಿದ್ದವು
Advertisement

ಒಡಿಶಾದ ಪೂರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲನ್ನು ಇಂದು ಅಧಿಕಾರಿಗಳು ತೆರೆದಿದ್ದಾರೆ. ಮಧ್ಯಾಹ್ನ 1.28ರ ಸುಮಾರಿಗೆ ಶುಭ ಮುಹೂರ್ತದಲ್ಲಿ ಬಾಗಿಲನ್ನು ತೆರೆಯಲಾಗಿದೆ. ಈ ಮಾಹಿತಿಯನ್ನು ಒಡಿಶಾದ ಸಿಎಂ ಮೋಹನ್ ಚರಣ್ ಮಾಝಿ ಮಾಹಿತಿ ನೀಡಿದ್ದಾರೆ.

Advertisement

ರತ್ನ ಭಂಡಾರದ ಕೋಣೆಯ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಅದರೊಳಗೆ ವಜ್ರ, ವೈಡೂರ್ಯ ಆಭರಣಗಳು ಇದಾವೆ ಎಂಬ ಬಗ್ಗೆ ಮಾತುಗಳು ಇದ್ದವು. ಇಂದು ನಾಲ್ಕು ಬಾಗಿಲನ್ನು ತೆರೆಯಲಾಗಿದ್ದು, ಅಧಿಕಾರಿಗಳಿಂದ ರತ್ನ ಭಂಡಾರದ ಶೋಧ ಕಾರ್ಯ ನಡೆದಿದೆ. 16 ಜನರ ತಂಡ ಈ ರತ್ನ ಭಂಡಾರವನ್ನು ತೆರೆಯಲಾಗಿದೆ. ಈ ರತ್ನ ಭಂಡಾರದಲ್ಲಿ ಸಿಗುವ ವಸ್ತುಗಳನ್ನು ಪಡೆಯಲು ಮರ ಹಾಗೂ ಕಬ್ಬಿಣದಿಂದ ತಯಾರಾದ ಆರು ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಾಗಿದೆ.

ಪುರಿ ಜಗನ್ನಾಥ ದೇವಾಲಯದಲ್ಲಿ ಒಟ್ಟು ಮೂರು ರಹಸ್ಯ ಕೋಣೆಗಳಿವೆ. ಮೊದಲ ಕೋಣೆಯಲ್ಲಿ ದೇವರ ಆಭರಣಗಳು ಇದಾವೆ, ಎರಡನೇ ಕೋಣೆಯಲ್ಲಿ ವಜ್ರ ವೈಡೂರ್ಯ ಇದಾವೆ. ಮೂರನೇ ಕೋಣೆ ರತ್ನ ಭಂಡಾರದಲ್ಲಿ ನಾಗಬಂಧವೂ ಇದೆ ಎಂದೇ ಹೇಳಲಾಗುತ್ತಿತ್ತು. ಅದರಲ್ಲಿ ರಹಸ್ಯ ಸುರಂಗ ಮಾರ್ಗವೂ ಇದೆ ಎನ್ನಲಾಗಿತ್ತು. ಇದೀಗ ಅಧಿಕಾರಿಗಳು ಎಲ್ಲವನ್ನು ಶೋಧ ಮಾಡುತ್ತಿದ್ದಾರೆ.

Advertisement

ಕಳೆದ 46 ವರ್ಷದಿಂದ ರತ್ನ ಭಂಡಾರದಲ್ಲಿ ಸರ್ಪಗಳ ಕಾವಲು ಇದೆ ಎನ್ನಲಾಗಿದೆ. ಹೀಗಾಗಿಯೇ ಹಾವುಗಳನ್ನು ಹಿಡಿಯುವ ಪರಿಣಿತ ಹೊಂದಿರುವವರನ್ನೇ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಜೊತೆಗೆ ಇದ್ದು, ಔಷಧಿಯನ್ನು ಜೊತೆಗೆ ತೆಗೆದುಕೊಂಡು ಹೋಗಲಾಗಿದೆ. 2018ರಲ್ಲಿ ಒಡಿಶಾದ ಹೈಕೋರ್ಟ್ ಆದೇಶದ ಮೇರೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವು ರತ್ನ ಭಂಡಾರವನ್ನು ತೆಗೆಯಲು ಪ್ರಯತ್ನಿಸಿ ಫೇಲ್ ಆಗಿತ್ತು. ಇದೀಗ ಮತ್ತೊಮ್ಮೆ ರತ್ನ ಭಂಡಾರವನ್ನು ತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ರತ್ನ ಭಂಡಾರದಲ್ಲಿ ಚಿನ್ನಾಭರಣಗಳಿರುವ 15 ಪೆಟ್ಟಿಗೆ 9 ಅಡಿ ಅಗಲ ಮತ್ತು 3 ಅಡಿ ಎತ್ತರದ ಪೆಟ್ಟಿಗೆ, 128 ಕೆಜಿ ತೂಕದ 454 ಚಿನ್ನದ ಆಭರಣಗಳು, 221 ಕೆಜಿ ತೂಕದ 293 ಬೆಳ್ಳಿ ಆಭರಣಗಳು ಭಂಡಾರದಲ್ಲಿ ಸಿಕ್ಕಿವೆ. ಇನ್ನು 12,800 ಹೆಚ್ಚು ರತ್ನಖಚಿತ ಆಭರಣಗಳು, ಅಮೂಲ್ಯ ಹರಳುಗಳು, 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತು ಸಿಕ್ಕಿವೆಯಂತೆ.

Tags :
Advertisement