Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸೂಲಿಬೆಲೆ ಪ್ರಚೋದನಕಾರಿ ಭಾಷಣ :  ಪರಿಶೀಲನೆ ಮಾಡುತ್ತೇವೆ ಎಂದ ಗೃಹ ಸಚಿವ ಪರಮೇಶ್ವರ್

09:40 PM Dec 14, 2023 IST | suddionenews
Advertisement

ಬೆಳಗಾವಿ: ಪರಿಷತ್ ಕಲಾಪದಲ್ಲಿ ಇಂದು ಚಕ್ರವರ್ತಿ ಸೂಲಿಬೆಲೆ ವಿಚಾರ ಚರ್ಚೆಗೆ ಬಂದಿದೆ. ಬಿಜೆಪಿ ಸದಸ್ಯ ತುಳಸಿ ಮುನಿರಾಜು ಗೌಡ, ಮಾತಿಗೆ ಗೃಹಸಚಿವ ಡಾ. ಜಿ ಪರಮೇಶ್ವರ್ ಗರಂ ಆಗಿ ಉತ್ತರಿಸಿದ್ದಾರೆ.

Advertisement

ಚಕ್ರವರ್ತಿ ಸೂಲಿಬೆಲೆಯಂತ ಯುವಕರ ಕಣ್ಮಣಿ ಮೇಲೆ ಗೂಂಡಾ ಕಾಯ್ದೆ ದಾಖಲು ಮಾಡಿದ್ದಾರೆ ತುಳಸಿ ಮುನಿರಾಜು ಗೌಡ ಪ್ರಶ್ನೆ ಕೇಳಿದ್ದರು. ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಲಾಗುತ್ತಿದೆ ಎಂದು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್, ಚಕ್ರವರ್ತಿ ಸೂಲಿಬೆಲೆ ಅವರ ಪ್ರಚೋದನಕಾರಿ ಭಾಷಣದಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎನ್ನುವುದಾದರೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಲಾಗುತ್ತಿದೆ. ಶಿವಮೊಗ್ಗ ಕೋಮುಗಲಭೆಯನ್ನು ಅದೊಂದು ಸಣ್ಣ ಘಟನೆ ಅಂತ ಸಚಿವರು ಹೇಳಿದ್ದರು.

Advertisement

ಚಕ್ರವರ್ತಿ ಸೂಲಿಬೆಲೆ ಮೇಲೆ ಕಮ್ಯುನಲ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಅಂತ ನೀವು ಹೇಳ್ತಾ ಇದ್ದೀರಾ? ನಾವು ಇನ್ನೂ ಕಮ್ಯುನಲ್ ಕೇಸ್ ಹಾಕಿಲ್ಲ. ನೀವು ಹೇಳಿದರೆ ಕಮ್ಯುನಲ್ ಆಕ್ಟ್ ಅಡಿ ಕೇಸ್ ಹಾಕ್ತೇವೆ ಎಂದಿದ್ದಾರೆ.

Advertisement
Tags :
bangaloreG. ParameshwaraHome Minister Parameshwarinvestigateprovocative speechಪರಿಶೀಲನೆಬೆಂಗಳೂರುಸಚಿವ ಪರಮೇಶ್ವರ್ಸೂಲಿಬೆಲೆ ಪ್ರಚೋದನಕಾರಿ ಭಾಷಣ
Advertisement
Next Article