Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪವಿತ್ರಾ ಗೌಡ ಮನೆ ತೆಗೆದುಕೊಳ್ಳಲು 2 ಕೋಟಿ ಕೊಟ್ಟಿರುವ ಮೃತ ನಿರ್ಮಾಪಕ ಸೌಂದರ್ಯ ಜಗದೀಶ್..!

03:24 PM Jun 24, 2024 IST | suddionenews
Advertisement

 

Advertisement

ಬೆಂಗಳೂರು: ಅತ್ತ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್.. ಇತ್ತ ರೇಣುಕಾಸ್ವಾಮಿ ಕೊಲೆ ಕೇಸ್. ಎರಡು ತನಿಖೆಯ ಹಂತದಲ್ಲಿಯೇ ಇದೆ. ಇದೀಗ ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ನಡುವೆ ಕೋಟಿ ಕೋಟಿ ವ್ಯವಹಾರವಾಗಿರುವುದು ತಿಳಿದು ಬಂದಿದೆ. ಪವಿತ್ರಾ ಗೌಡ ಮನೆ ತೆಗೆದುಕೊಳ್ಳುವುದಕ್ಕೆ ಸೌಂದರ್ಯ ಜಗದೀಶ್ ಎರಡು ಕೋಟಿ ಹಣ ನೀಡಿದ್ದಾರೆ. ಹಣ ಕೊಟ್ಟ ಮರುದಿನವೇ ಪವಿತ್ರಾ ಗೌಡ ರಾಜರಾಜೇಶ್ವರಿ ನಗರದಲ್ಲಿ ಮನೆ ಖರೀದಿ ಮಾಡಿದ್ದಾರೆ.

2017 ಹಾಗೂ 2018ರಲ್ಲಿ ಹಣದ ವ್ಯವಹಾರ ನಡೆದಿದೆ. ಮೊದಲ ಬಾರಿಗೆ 2017ರ ನವೆಂಬರ್ 13ರಂದು ಸೌಂದರ್ಯ ಜಗದೀಶ್ ಅಕೌಂಟಿನಿಂದ ಪವಿತ್ರಾ ಗೌಡಗೆ 1 ಕೋಟಿ ರೂಪಾಯಿ ಹಣ ರವಾನೆಯಾಗಿದೆ. ಬಳಿಕ 2018ರ ಜನವರಿ 23ರಂದು ಮತ್ತೆ ಒಂದು ಕೋಟಿ ಟ್ರಾನ್ಸ್ ಫರ್ ಆಗಿದೆ. ಜನವರಿ 24ರಂದು ಅಂದರೆ ಹಣ ರವಾನೆಯಾದ ಮಾರನೇ ದಿನವೇ ರಾಜರಾಜೇಶ್ವರಿ ನಗರದಲ್ಲಿ ಪವಿತ್ರಾ ಗೌಡ ಮನೆ ತೆಗೆದುಕೊಂಡಿದ್ದಾರೆ.

Advertisement

ಸೌಂದರ್ಯ ಜಗದೀಶ್ ಸಿನಿಮಾ ನಿರ್ಮಾಣದ ಜೊತೆಗೆ ಉದ್ಯಮಿಯು ಆಗಿದ್ದರು. ಬೆಂಗಳೂರಿನ ಯಶವಂತಪುರದಲ್ಲಿ ಜೆಟ್ ಲ್ಯಾಗ್ ಪಬ್ ಮಾಲೀಕರು ಕೂಡ ಆಗಿದ್ದರು. ಇತ್ತಿಚೆಗೆ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಸಾಲದ ಸುಳಿಗೆ ಸಿಲುಕಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತಿದೆ. ಪಾಲುದಾರರಿಂದ ಮೋಸವಾಗಿದೆ ಎಂದು ಸೌಂದರ್ಯ ಜಗದೀಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪವಿತ್ರಾ ಗೌಡಗೆ ಎರಡು ಕೋಟಿ ಹಣ ಕೊಟ್ಟಿರುವುದನ್ನು ಪಾಲುದಾರರಾದ ಸುರೇಶ್ ಪೊಲೀಸರಿಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

Advertisement
Tags :
bengaluruchitradurgacroresPavitra Gowdaproducer Soundarya Jagadishsuddionesuddione newsಕೋಟಿಚಿತ್ರದುರ್ಗನಿರ್ಮಾಪಕ ಸೌಂದರ್ಯ ಜಗದೀಶ್ಪವಿತ್ರಾ ಗೌಡಬೆಂಗಳೂರುಮೃತಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article