Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

3 ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ | ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

08:14 PM Jun 09, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,  ಜೂ.09 : ದೇಶದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿ ನೇಮಕವಾಗಿರುವ ನರೇಂದ್ರ ಮೋದಿಯವರು ಇಂದು ಪ್ರಮಾಣ ವಚನ ಸ್ವೀಕಾರದ ಹಿನ್ನಲೆಯಲ್ಲಿ ಭಾನುವಾರ ಸಂಜೆ ಭಾರತೀಯ ಜನತಾ ಪಾರ್ಟಿಯವತಿಯಿಂದ ಜೆಸಿಆರ್ ಬಡಾವಣೆಯ ಗಣಪತಿ ಮತ್ತು ಅಂಜನೇಯ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಸಿಹಿಯನ್ನು ಹಂಚಿಕೆ ಮಾಡಿ ನಂತರ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜಿ.ಎಚ್,ತಿಪ್ಪಾರೆಡ್ಡಿ, ನೆಹರುರವರು ಮೂರು ಬಾರಿ ದೇಶದ ಪ್ರಧಾನ ಮಂತ್ರಿಗಳಾಗಿದ್ದರು ತದ ನಂತರ ಯಾರೂ ಸಹಾ ಮೂರು ಭಾರಿ ಪ್ರಧಾನ ಮಂತ್ರಿಗಳಾಗಿರಲಿಲ್ಲ ಆದರೆ ಈಗ ನರೇಂದ್ರ ಮೋದಿಯವರು ಸತತವಾಗಿ ಮೂರು ಬಾರಿ ಪ್ರಧಾನ ಮಂತ್ರಿಗಳಾಗುವುದರ ಮೂಲಕ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಕಳೆದ 10 ವರ್ಷ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾಗುವುದರ ಮೂಲಕ ದೇಶವನ್ನು ಉತ್ತಮವಾಗಿ ಅಭೀವೃದ್ದಿ ಮಾಡಿದ್ದಾರೆ.


ಮುಂದಿನ ದಿನಮಾನದಲ್ಲಿ ದೇಶ ಮೋದಿಯವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ದಿಯನ್ನು ಕಾಣಲಿದೆ. ಮೋದಿಯವರ ಪ್ರಮಾಣ ವಚನ ಸಮಯದಲ್ಲಿ ಪ್ರಪಂಚದ ವಿವಿಧ ದೇಶದ ನಾಯಕರು ಭಾಗವಹಿಸುವುದರ ಮೂಲಕ ಮೋದಿಯವರಿಗೆ ಬಲವನ್ನು ನೀಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ನಗರಸಭಾ ಸದಸ್ಯರಾದ ಶ್ರೀಮತಿ ರೋಹಿಣಿ, ಹರೀಶ್, ಕೃಷ್ಣಮೂರ್ತಿ, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ನಾಗೇಂದ್ರಪ್ಪ, ಮುರುಗೇಶ್, ರಮೇಶ್, ಸೋಮಣ್ಣ, ಆದರ್ಶ, ಕಲಾ, ವಿರೂಪಾಕ್ಷ, ಗೋಪಿ, ವೆಂಕಟೇಶ್, ಪ್ರದೀಪ್, ವೆಂಕಟೇಶ್ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Advertisement
Tags :
bengaluruCelebration of BJP workerschitradurgaoathpm narendra modiPrime Minister Narendra Modisuddionesuddione newsಚಿತ್ರದುರ್ಗಪ್ರಧಾನಿ ನರೇಂದ್ರ ಮೋದಿ‌ಪ್ರಮಾಣ ವಚನಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article