Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ಧಾರೂಢ ಶ್ರೀಗಳ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ಮೋದಿ

04:26 PM Apr 17, 2024 IST | suddionenews
Advertisement

ಹುಬ್ಬಳ್ಳಿ: ಇಂದು ರಾಜ್ಯಾದ್ಯಂತ ಶ್ರೀರಾಮನವಮಿಯ ಸಂಭ್ರಮ ಮನೆ ಮಾಡಿದೆ. ಇದರ ಜೊತೆಗೆ ಇಂದು ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿಗಳ ಹುಟ್ಟುಹಬ್ಬ ಕೂಡ. ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ 188ನೇ ಹುಟ್ಟುಹಬ್ಬ. ಈ ಸುಸಂದರ್ಭಕ್ಕೆ ಪ್ರಧಾನಿ ಮೋದಿ ಅವರು ಶುಭಕೋರಿದ್ದಾರೆ.

Advertisement

'ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು. ಆಧ್ಯಾತ್ಮಿಕ ಪ್ರಬುದ್ಧತೆ, ಸಾಮಾಜಿಕ, ಸಾಮರಸ್ಯ ಮತ್ತು ವಂಚಿತರ ಸಬಲೀಕರಣಕ್ಕೆ ನೀಡಿದ ಕೊಡುಗೆಗಳಿಗೆ ಸ್ಮರಿಸಲಾಗುತ್ತದೆ. ಶ್ರೀ ಸಿದ್ಧಾರೂಢ ಸ್ವಮೀಜಿ ಅವರ ಜೀವನ ಮತ್ತು ಕಾರ್ಯಗಳು ಎಲ್ಲ ಜೀವಿಗಳ ಕಲ್ಯಾಣಕ್ಕೆ ಗಾಢವಾದ ಬದ್ಧತೆಗೆ ನಿದರ್ಶನವಾಗಿವೆ. ಅವರು ಯಾವಾಗಲೂ ಏಕತೆ ಮತ್ತು ದಯೆಯ ಮಹತ್ವವನ್ನು ಎತ್ತಿ ತೋರಿಸಿದರು. ಅವರ ಆದರ್ಶಗಳನ್ನು ಈಡೇರಿಸಲು ನಾವು ಸದಾ ಶ್ರಮಿಸುತ್ತೇವೆ' ಎಂದು ಟ್ವೀಟ್ ಮೂಲಕ ಶುಭಕೋರಿದ್ದಾರೆ.

 

Advertisement

ಶ್ರೀ ಸಿದ್ಧಾರೂಢರು 6 ವರ್ಷದವರಿದ್ದಾಗಲೇ ಮನೆಯನ್ನು ತೊರೆದು ದೇಶ ಸಂಚಾರಕ್ಕೆ ಹೊರಟರು. ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಗುರುಗಳಾದ ಪೂಜ್ಯಶ್ರೀ ಗಜದಂಡ ಶಿವಯೋಗಿಗಳು ಶ್ರೀ ಸಿದ್ಧಾರೂಢರಿಗೆ ಸಿದ್ಧಾರೂಢ ಭಾರತಿ ಎಂದು ನಾಮಕರಣ ಮಾಡಿದರು. ಮುಂದೆ ಶ್ರೀ ಸಿದ್ಧಾರೂಢರು ಹುಬ್ಬಳ್ಳಿಗೆ ಬಂದು ನೆಲಸಿದರು. ಹುಬ್ಬಳ್ಳಿಯಲ್ಲಿ ಮಠವನ್ನು ಕಟ್ಟಿ ನಿತ್ಯ ಮಠಕ್ಕೆ ಬರುವ ಭಕ್ತರಿಗೆ ಪ್ರವಚ ಹೇಳುತ್ತಾ ಅಧ್ಯಾತ್ಮದ ಪಥಕ್ಕೆ ಹಚ್ಚಿದರು. ಶ್ರೀ ಸಿದ್ಧಾರೂಢರು ಪವಾಡ ಪುರುಷರಾಗಿದ್ದು, ಇಂದಿಗೂ ಕೂಡ ಮಠದಲ್ಲಿ ಪವಾಡಗಳು ನಡೆಯುತ್ತವೆ ಎಂಬುವುದು ಭಕ್ತರ ನಂಬಿಕೆ.

Advertisement
Tags :
hubliprime minister modiSiddharuda shreeಪ್ರಧಾನಿ ಮೋದಿಸಿದ್ಧಾರೂಢ ಶ್ರೀಹುಟ್ಟುಹಬ್ಬಹುಬ್ಬಳ್ಳಿ
Advertisement
Next Article