Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆಗಸ್ಟ್ 12 ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹೋರಾಟ : ವಿಕಲಚೇತನ ನೌಕರರ ಸಂಘದ ಬೆಂಬಲ : ಬೀರಪ್ಪ ಅಂಡಗಿ ಚಿಲವಾಡಗಿ

02:37 PM Aug 09, 2024 IST | suddionenews
Advertisement

 

Advertisement

ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆ.12 ರ ಸೋಮವಾರ ಬೆಂಗಳೂರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ವಿಕಲಚೇತನ ನೌಕರರ ಸಂಘದ ಸಂಪೂರ್ಣವಾದ ಬೆಂಬಲವಿದೆ ಎಂದು ಸಂಘದ ರಾಜ್ಯಾಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.

ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳು ಹಲವಾರು ವರ್ಷಗಳ ಹಿಂದೆಯೇ ಈಡೇರಬೇಕಾಗಿತ್ತು.ಆದರೆ ಬೇಡಿಕೆಗಳು ಈಡೇರದ ಪರಿಣಾಮವಾಗಿ ಹೋರಾಟವನ್ನು ಹಮ್ಮಿಕೊಂಡಿದ್ದಾರೆ. ರಾಜ್ಯ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನ ಶಿಕ್ಷಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Advertisement

Advertisement
Tags :
AugustBeerappa andagi chilavadagibengaluruchitradurgaDisabled Employees UnionFreedom Parkprimary school teachersProtestsuddionesuddione newssupportಆಗಸ್ಟ್ಚಿತ್ರದುರ್ಗಪ್ರಾಥಮಿಕ ಶಾಲಾ ಶಿಕ್ಷಕರುಫ್ರೀಡಂ ಪಾರ್ಕ್ಬೀರಪ್ಪ ಅಂಡಗಿ ಚಿಲವಾಡಗಿಬೆಂಗಳೂರುಬೆಂಬಲವಿಕಲಚೇತನ ನೌಕರರ ಸಂಘಸುದ್ದಿಒನ್ಸುದ್ದಿಒನ್ ನ್ಯೂಸ್ಹೋರಾಟ
Advertisement
Next Article