For the best experience, open
https://m.suddione.com
on your mobile browser.
Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಸುವಂತೆ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಬೀರಪ್ಪ ಅಂಡಗಿ ದೂರು

12:27 PM Oct 21, 2023 IST | suddionenews
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಸುವಂತೆ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಬೀರಪ್ಪ ಅಂಡಗಿ ದೂರು
Advertisement

Advertisement

ಸುದ್ದಿಒನ್, ಕೊಪ್ಪಳ, ಅಕ್ಟೋಬರ್.21 : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗೆ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನೂಗ್ಲಿ ಅವರಿಗೆ ಬೆಂಗಳೂರಿನ ಸಂಘದ ಕಚೇರಿಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.

ಈ ಸಮಯದಲ್ಲಿ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಮಾತನಾಡಿ,ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಈ ಮೊದಲು ನಿಯಯಮಗಳ ಪ್ರಕಾರದಂತೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡುವುದರ ಮೂಲಕ ಚುನಾವಣಾ ವೇಳೆ ಪಟ್ಟಿಯನ್ನು ಪ್ರಕಟಿಸಿ,ಅದರಂತೆ ನಾಮಪತ್ರ  ಸಲ್ಲಿಕೆ,ನಾಮಪತ್ರ ಪರಿಶೀಲನೆ,ನಾಮಪತ್ರ ಹಿಂಪಡೆಯಲು ಅವಕಾಶ ಕೊನೆಯಲ್ಲಿ ಚುನಾವಣೆ ನಡೆಸಲಾಗಿತ್ತು.

Advertisement

ಈ ಒಂದು ಚುನಾವಣೆಯಲ್ಲಿ ನಾನು ಕೂಡಾ ಸ್ಪರ್ಧೇ ಮಾಡುವುದರ ಮೂಲಕ ನಿರ್ದೇಶಕನಾಗಿ ಆಯ್ಕೆಯಾದೆ.ತದನಂತರ ನಡೆದ ತಾಲೂಕ ಘಟಕದ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕ ಅಧ್ಯಕ್ಷರಾಗಿ ಪ್ರಾಣೇಶ ಪೂಜಾರ ಹಾಗೂ ಕಾರ್ಯದರ್ಶಿಯಾಗಿ ಕೊಟ್ರಪ್ಪ ಗಡಗಿ ನಿಯಮಗಳ ಪ್ರಕಾರ ಆಯ್ಕೆಯಾಗಿದ್ದಾರೆ.

ಆದರೆ ಪ್ರಸ್ತುತವಾಗಿ ತಾಲೂಕ ಅಧ್ಯಕ್ಷರಾಗಿ ಕೊಟ್ರಪ್ಪ ಗಡಗಿ ಹಾಗೂ ಕಾರ್ಯದರ್ಶಿಯಾಗಿ ಮಹೇಶ ಟಂಕಸಾಲಿ ಎಂದು ಸಂಘದ ಪತ್ರದಲ್ಲಿ ಇದೆ.ಅಲ್ಲದೇ ಅನೇಕ ಮನವಿ ಪತ್ರಗಳಲ್ಲಿ ಕೂಡಾ ಇದೆ.ಆದರೆ ಇವರು ಆಯ್ಕೆಯಾಗಬೇಕಾದರೆ ನಿಯಮಗಳ ಪ್ರಕಾರ ಹಿಂದೆ ಅಧ್ಯಕ್ಷರಾಗಿ ಇದ್ದ ಪ್ರಾಣೇಶ ಪೂಜಾರ ರಾಜೀನಾಮೆ ಕೊಡಬೇಕು,ರಾಜೀನಾಮೆ ಅಂಗೀಕಾರವಾಗಬೇಕು,ರಾಜೀನಾಮೆ ಕೊಟ್ಟ ವಿಷಯದ ಕುರಿತು ಎಲ್ಲಾ ನಿರ್ದೇಶಕರ ಗಮನಕ್ಕೆ ತರಬೇಕು.ತದ ನಂತರ ನಿಯಮಗಳ ಪ್ರಕಾರ ಚುನಾವಣೆಯ ಪ್ರಕ್ರೀಯೆಯ ಮೂಲಕ ಆಯ್ಕೆಯಾಗಬೇಕು.

ಆದರೆ ಈ ಯಾವ ನಿಯಮಗಳನ್ನು ಪಾಲಿಸದೆ ಎಕಾಏಕಿ ಪದಾಧಿಕಾರಿಗಳಾಗಿ ಆಯ್ಕೆಯಾಗಲು ಹೇಗೆ ಸಾಧ್ಯ. ನಾನು ಕೂಡಾ ಸಂಘದ ನಿರ್ದೇಶಕನಾಗಿದ್ದು,ನನ್ನ ಗಮನಕ್ಕೆ ತರದೆ ತಮ್ಮ ತಂಡ ಒಳ ಒಪ್ಪಂದದಂತೆ ಹುದ್ದೆಗಳನ್ನು ಬದಲಾವಣೆ ಮಾಡಿಕೊಳ್ಳುವುದು ನಿಯಮಬಾಹಿರವಾಗಿದೆ.

ನಿಯಮಗಳ ಪ್ರಕಾರ ಚುನಾವಣೆ ನಡೆಸಿದ್ದರೆ ನಾನು ಕೂಡಾ ಸ್ಪರ್ದೇ ಮಾಡುತ್ತಿದ್ದೆ.ಆದರೆ ನಾನು ಸ್ಪರ್ಧೇ ಮಾಡಬಾರದು ಎಂಬ ದುರುದ್ದೇಶದಿಂದ ವಾಮಮಾರ್ಗದ ಮೂಲಕ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ನನಗೆ ಅವಕಾಶ ವಂಚಿತರಾಗಿ ಮಾಡಿದ್ದಾರೆ.
ಆದ್ದರಿಂದ ನಿಯಮಗಳ ಪ್ರಕಾರ ಆಯ್ಕೆಯಾಗದ ಪದಾಧಿಕಾರಿಗಳನ್ನು ಅಸಿಂಧುಗೊಳಿಸುವುದರ ಮೂಲಕ ಮರು ಚುನಾವಣೆ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನೂಗ್ಲಿ ಮಾತನಾಡಿ,ಸಂಘದ ನಿಯಮಗಳ ಪ್ರಕಾರ ಯಾವುದೇ ಹುದ್ದೆಗಳು ಖಾಲಿಯಾದಲ್ಲಿ ಆ ಹುದ್ದೆಗಳ ಕುರಿತು ಆ ಸಂಘದ ನಿರ್ದೇಶಕರಿಗೆ ನೋಟಿಸ್ ಮೂಲಕ ಮಾಹಿತಿ ನೀಡಬೇಕು ಜೊತೆಯಲ್ಲಿ ಆ ಹುದ್ದೆಗಳಿಗೆ ಚುನಾವಣೆಯ ಪ್ರಕ್ರೀಯೆಯ ಮೂಲಕ ಆಯ್ಕೆ ಮಾಡಬೇಕು.ಪರಸ್ಪರವಾಗಿ ಹುದ್ದೆಗಳನ್ನು ಬದಲಾವಣೆ ಮಾಡಿಕೊಳ್ಳುವುದು ನಿಯಮಬಾಹಿರವಾಗಿದೆ. ಕೂಡಲೇ ದಿನಾಂಕ ನಿಗದಿ ಮಾಡಿ ಚುನಾವಣೆಯ ಮೂಲಕ ತಾಲೂಕ ಅಧ್ಯಕ್ಷರನ್ನು ಹಾಗೂ ಕಾರ್ಯದರ್ಶಿಯ ಹುದ್ದೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.

Tags :
Advertisement