Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗ್ಯಾರಂಟಿಯಿಂದಾನೇ ಬೆಲೆ ಏರಿಕೆ : ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು..!

03:50 PM Jun 26, 2024 IST | suddionenews
Advertisement

ಬೆಂಗಳೂರು: ನಂದಿನಿ ಹಾಲಿನಲ್ಲಿ 50 ML ಹೆಚ್ಚಳ ಮಾಡಿ, ಅದಕ್ಕೆ ಪ್ರತಿಯಾಗಿ 2 ರೂಪಾಯಿ ಪಡೆಯುತ್ತಿದೆ. ಇದಕ್ಕೆ ಜನರಿಂದಾನೂ ವಿರೋಧವಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೆ ಬೆಲೆ ಏರಿಕೆ ಸಾಕಾಗಿ ಹೋಗಿದೆ. ಇದಕ್ಕೆ ವಿರೋಧ ಪಕ್ಷದವರಿಂದಾನೂ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಗ್ಯಾರಂಟಿಗಳಿಂದಾನೇ ಈ ರೀತಿ ಬೆಲೆ ಏರಿಕೆಯಾಗುತ್ತಿರುವುದು ಎಂಬ ಆರೋಪವನ್ನು ಮಾಡಿದ್ದಾರೆ.

Advertisement

ಕುಮಾರಸ್ವಾಮಿ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಮೊದಲು ಸರಿಯಾಗಿ ಓದಿಕೊಂಡು, ತಿಳಿದುಕೊಂಡು ಮಾತನಾಡಲಿ. ಬೆಲೆ ಏರಿಕೆ ಎಲ್ಲಿ ಆಗಿದೆ ಹೇಳಿ ನೋಡೋಣಾ. ಹೆಚ್ಚುವರಿಯಾಗಿ ಕೊಡುತ್ತಿರುವ ಹಾಲಿಗೆ ಹಣ ಪಡೆಯುತ್ತಿದ್ದೇವೆ. ಇದರ ಹೊರತಾಗಿ ಬೆಲೆ ಏರಿಕೆ ಎಲ್ಲಿ ಆಗಿದೆ. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತವೆ ಅಷ್ಟೇ ಎಂದಿದ್ದಾರೆ.

ಕಳೆದ ವರ್ಷ ಇದೇ ಸಂದರ್ಭದಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಾ ಇತ್ತು. ಈ ವರ್ಷ 99 ಲಕ್ಷ ಹಾಲು ಉತ್ಪಾದನೆಯಾಗುತ್ತಾ ಇದೆ. ರೈತರಿಂದ ಹಾಲು ಕೊಂಡುಕೊಳ್ಳಬೇಕು ಅಲ್ವಾ. ರೈತರಿಗೆ ನಾವೂ ಬೇಡ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆ ಹಾಲನ್ನು ಚೆಲ್ಲುವುದಕ್ಕೆ ಆಗುತ್ತಾ..? ಅದಕ್ಕೋಸ್ಕರ ಪಾಕೇಟ್ ನಲ್ಲಿಯೇ ಹಾಲನ್ನು ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಜನ ಆ ಹಾಲನ್ನು ತೆಗೆದುಕೊಳ್ಳಲೇಬೇಕು. ರೈತರ ಹಿತದೃಷ್ಠಿಯಿಂದಾನೇ ಈ ನಿರ್ಧಾರ ಮಾಡಿರುವುದು. ವಿರೋಧ ಪಕ್ಷದವರು ಸುಮ್ಮ ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಇನ್ನು ಹಾಲಿನ ಮೇಲೆ ಹೆಚ್ಚಿನ ದರ ಇಂದಿನಿಂದಾನೇ ಜಾರಿಯಾಗಿದೆ.

Advertisement

Advertisement
Tags :
bengaluruchitradurgaH D Kumaraswamyprice increaseSiddaramaiahsuddionesuddione newsಕುಮಾರಸ್ವಾಮಿಗ್ಯಾರಂಟಿಚಿತ್ರದುರ್ಗಬೆಂಗಳೂರುಬೆಲೆ ಏರಿಕೆಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article