Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

12:43 PM Mar 29, 2024 IST | suddionenews
Advertisement

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್ ವಿರುದ್ಧ ದೂರು ನೀಡಿದ್ದ ಡಾ.ಪ್ರಯಾಗ್ ಮತ್ತು ಅವರ ಟೀಂ ಸಾಕ್ಷಿ ಕಲೆ ಹಾಕಿದೆ‌.

Advertisement

 

ಲೈಸೆನ್ಸ್ ಪಡೆಯದೆ ಪ್ರತಾಪ್ ಡ್ರೋನ್ ಹಾರಿಸಿದ್ದಾರೆ ಎಂದು ಆರ್ಟಿಐ ನೀಡಿದ ದಾಖಲೆ ಹೇಳುತ್ತಿದೆ. ಈ ಸಂಬಂಧ ಡಾ.ಪ್ರಯಾಗ್ ಆರ್ಟಿಐನಲ್ಲಿ ಮಾಹಿತಿ ಕೇಳಿದ್ದರು. ಆರ್ಟಿಐ ದಾಖಲೆ ಒದಗಿಸಿದ್ದು, ಪ್ರತಾಪ್ ಯಾವುದೇ ಲೈಸೆನ್ಸ್ ಪಡೆದಿಲ್ಲ ಎಂದೇ ಹೇಳಲಾಗಿದೆ. ಪ್ರತಾಪ್ ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸುತ್ತಿದ್ದಾರೆ ಎಂದು ಪರಮೇಶ್ವರ್ ಎಂಬುವವರು ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಾರಾಟ ಮಾಡುವುದಲ್ಲದೆ ಮಾರಾಟ ಕೂಡ ಮಾಡುತ್ತಿದ್ದಾರೆಂದು ದೂರು ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಡಾ. ಪ್ರಯಾಗ್ ಅಂಡ್ ಟೀಂ ದಾಖಲೆ ಕಲೆ ಹಾಕಲು ಆರ್ಟಿಐ ಮೊರೆ ಹೋಗಿತ್ತು.

Advertisement

 

ಆರ್ಟಿಐ ನೀಡಿದ ಮಾಹಿತಿಯಲ್ಲಿ ಪ್ರತಾಪ್ ಯಾವುದೇ ರೀತಿಯ ಲೈಸೆನ್ಸ್ ಪಡೆದಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ಲೈಸೆನ್ಸ್ ಪಡೆಯದೆ ಈ ರೀತಿ ಡ್ರೋನ್ ಮಾರಾಟವೆಲ್ಲ ಅಪರಾಧವಾಗುತ್ತದೆ. ಪ್ರತಾಪ್ ಡ್ರೋನ್ ವಿಚಾರವಾಗಿಯೇ ದೊಡ್ಡಮಟ್ಟದ ಕನಸು ಕಟ್ಟಿಕೊಂಡಿದ್ದರು. ಬಿಗ್ ಬಾಸ್ ಗೆ ಬಂದಿದ್ದು ಕೂಡ ಡ್ರೋನ್ ವಿಚಾರದಲ್ಲಿ ಸದ್ದು ಮಾಡಿ, ಫೇಮಸ್ ಆಗಿದ್ದರು. ಆದರೆ ಈಗ ಡ್ರೋನ್ ಹಾರಿಸುವುದಕ್ಕೂ ಮತ್ತು ಮಾರಾಟ ಮಾಡುವುದಕ್ಕೂ ಲೈಸೆನ್ಸ್ ನ ಅಗತ್ಯವಿದೆ. ಅದನ್ನು ಪಡೆದರೆ ಅಧಿಕೃತವಾಗಿ ಹಾರಾಟ ಮಾಡಬಹುದು.

Advertisement
Tags :
bangaloredrone pratapdrone without getting a licensePratapsuddioneWitnesses exposedಡ್ರೋನ್ ಪ್ರತಾಪ್ಬೆಂಗಳೂರುಲೈಸೆನ್ಸ್ಸಾಕ್ಷಿಗಳು ಬಹಿರಂಗಸುದ್ದಿಒನ್
Advertisement
Next Article