ಪ್ರಜ್ವಲ್ ರೇವಣ್ಣ ಕೇಸ್ : ತುರ್ತು ಸುದ್ದಿಗೋಷ್ಠಿ ನಡೆಸಿ 15 ಪ್ರಶ್ನೆ ಕೇಳಿದ ಕುಮಾರಸ್ವಾಮಿ
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬರೀ ಹಾಸನ ಅಷ್ಟೇ ಅಲ್ಲ, ಎಲ್ಲೆಲ್ಲಿ ಪೆನ್ ಡ್ರೈವ್ ಹಂಚಿದ್ದಾರೆ ಗೊತ್ತಾ..? ನಾನು ಯಾರಿಗೂ ರಕ್ಷಣೆ ಕೊಡಲ್ಲ ಎಂದು ಒಂದಷ್ಟು ಪ್ರೂಫ್ ತೋರಿಸಿದ್ದಾರೆ.
ಇದೇ ವೇಳೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
1. ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾಕೆಯೇ ದೂರು ಕೊಟ್ಟಿದ್ದೇಗೆ..?
2. ಆಕೆ ಕಡೆಯಿಂದ ಪ್ರಜ್ವಲ್ ವಿರುದ್ಧ ದೂರು ಕೊಡಿಸಿದ್ದು ಯಾರು..?
3. ಕಿಡ್ನ್ಯಾಪ್ ಆಗಿದ್ದ ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದ್ರಿ..?
4. ಕಿಡ್ನ್ಯಾಪ್ ಸಂತ್ರಸ್ತೆ ಸಿಕ್ಕ ತೋಟದ ಮನೆಯಲ್ಲಿ ಮಹಜರಾಗಿದ್ಯಾ..?
5. ಸಂತ್ರಸ್ತೆಯನ್ನು ಜಡ್ಜ್ ಮುಂದೆ ಹಾಜರು ಪಡಿಸಿಲ್ಲ ಯಾಕೆ..?
6. ನಿಮಗೆ ಬೇಕಾದ ರೀತಿಯಲ್ಲಿ ರೇವಣ್ಣ ಹೇಳಿಕೆ ನೀಡಬೇಕಾ..?
7. ಕಾರ್ತಿಕ್ ಗೌಡ ವಿಡಿಯೋ ಮಾಡಿ ಹಂಚಿದ್ದು ಯಾರು..?
8. ಕಾರ್ತಿಗ್ ಗೌಡನನ್ನು ಈವರೆಗೂ ಯಾಕೆ ಹುಡುಕಿಲ್ಲ..?
9. ಎಸ್ಐಟಿ ತನಿಖೆ ಕೇವಲ ಪ್ರಜ್ವಲ್, ರೇವಣ್ಣ ವಿರುದ್ಧವಷ್ಟೇನಾ..?
10. ಕಾರ್ತಿಕ್ ಗೌಡ ಎಲ್ಲಿದ್ದಾನೆ..? ಯಾಕೆ ಆತನಿಗೆ ರಕ್ಷಣೆ..?
11. ಕಾರ್ತಿಕ್ ಗೌಡನನ್ನು ರಕ್ಷಣೆ ಮಾಡ್ತಿರೋದು ಯಾಕೆ..?
12. 25 ಸಾವಿರ ಪೆನ್ ಡ್ರೈವ್ ಬಿಟ್ಟವರ ಮೇಲೆ ಕ್ರಮವಿಲ್ಲ ಯಾಕೆ..?
13. ಐದು ಜನರ ಮೇಲೆ ಕಂಪ್ಲೈಂಟ್ ಕೊಟ್ಟರು ಕ್ರಮವಿಲ್ಲ ಯಾಕೆ..?
14. ವಿಡಿಯೋ ರಿಲೀಸ್ ಮಾಡಿದವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ..?