ಪೆನ್ ಡ್ರೈವ್ ಲೀಕ್ ಮಾಡಿದ್ದು ಪ್ರಜ್ವಲ್ ರೇವಣ್ಣ ಕಾರು ಡ್ರೈವರ್..? ದೇವರಾಜೇಗೌಡ ಹೇಳಿದ್ದೇನು..?
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಈಗಾಗಲೇ ಸಾಕಷ್ಟು ಜನರ ಕೈಗೆ ಸಿಕ್ಕಿದೆ. ಮೂರು ಸಾವಿರಕ್ಕೂ ಹೆಚ್ಚು ವಿಡಿಯೋಗಳು ಇವೆ ಎನ್ನಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೂ ವಹಿಸಿದೆ. ತನಿಖೆ ಕೂಡ ನಡೆಯುತ್ತಿದೆ. ಇದರ ನಡುವೆ ಈ ವಿಡಿಯೋಗಳು ಮೊದಲಿಗೆ ಸಿಕ್ಕಿದ್ಯಾರಿಗೆ..? ಲೀಕ್ ಆಗಿದ್ದು ಹೇಗೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಅದಕ್ಕೆಲ್ಲಾ ಉತ್ತರ ವಕೀಲ ದೇವರಾಜೇಗೌಡ ನೀಡಿದ್ದಾರೆ. ಈ ಮೊದಲು ಹೆಚ್ ಡಿ ರೇವಣ್ಣ ಅವರಿಗೆ ದೇವರಾಜೇಗೌಡ ಅವರು ಪೆನ್ ಡ್ರೈವ್ ವಿಚಾರವಾಗಿ ಎಚ್ಚರಿಕೆ ನೀಡಿದ್ದರು. ಎಲ್ಇಡಿ ಹಾಕಿ, ಅದರಲ್ಲಿ ವಿಡಿಯೋ ತೋರಿಸಲಾ. ಆಗ ಗೊತ್ತಾಗುತ್ತೆ ಯಾರು ಡರ್ಟಿ ಫೆಲೋ ಎಂದಿದ್ದರು.
ಪೆನ್ ಡ್ರೈವ್ ವಿಚಾರವಾಗಿಮಾತನಾಡಿರುವ ದೇವರಾಜೇಗೌಡ, ಈ ವಿಡಿಯೋ ವಿಚಾರ 2023ರಲ್ಲಿಯೇ ಬಂದಿತ್ತು. ಆದರೆ ಪ್ರಜ್ವಲ್ ರೇವಣ್ಣ ಕೋರ್ಟ್ ನಲ್ಲಿ ಸ್ಟೇ ತಂದಿದ್ದರು. ಅವರ ಕಾರು ಚಾಲಕನಾಗಿದ್ದ ಕಾರ್ತಿಕ್ ಮೇಲೂ ಸ್ಟೇ ತಂದಿದ್ದರು. ಕಾರ್ತಿಕ್ ನನ್ನ ಬಳಿ ಬಂದು ವಕಾಲತ್ತು ಹಾಕಿ ಎಂದಿದ್ದ, ಆ ವಿಡಿಯೋ ಇರಯವ ಪೆನ್ ಡ್ರೈವ್ ಕೂಡ ಕೊಟ್ಟಿದ್ದ. ಆ ವಿಡಿಯೋಗಳನ್ನು ನಾನು ನೋಡಿದ್ದೆ. ಸಾಕಷ್ಟು ವಿಡಿಯೋಗಳು ಅದರಲ್ಲಿ ಇತ್ತು. ಯಾರ್ಯಾರಿಗೆ ಈ ವಿಡಿಯೋ ಕೊಟ್ಟಿದ್ದೀಯಾ ಎಂದಾಗ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿದಂತೆ ಕಾಂಗ್ರೆಸ್ ಹಲವು ನಾಯಕರಿಗೆ ಕೊಟ್ಟಿದ್ದೀನಿ ಎಂದಿದ್ದ.
ಆದರೆ ಕಾಂಗ್ರೆಸ್ ಲೀಡರ್ ಎರಡು ತಿಂಗಳಾದರೂ ಏನು ಮಾಡಿರಲಿಲ್ಲ. ಇದನ್ನ ರಾಜಕೀಯವಾಗಿ ಯಾವಾಗ ಬಳಕೆ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಕಾರ್ತಿಕ್ ಹೇಳಿದ್ದ. ಈ ವಿಚಾರ ಮೋದಿ, ಅಮಿತಾ ಅವರಿಗೆ ಪತ್ರದ ಮುಖೇನ, ಮೇಲ್ ಮುಖೇನ ತಲುಪಿಸಲಾಗಿತ್ತು. ಆದರೆ ಮೇಲ್ ಸೆಮಡಮ್ ಆಗಿಲ್ಲ. ವಿಜಯೇಂದ್ರ ಅವರಿಗೂ ಪತ್ರದ ಮೂಲಕ ತಲುಪಿಸಿತ್ತಾದರೂ ಅವರಿಗೆ ಪತ್ತ ತಲುಪಿಲ್ಲ ಎಂದಿದ್ದಾರೆ.
ಕಾರ್ತಿಕ್ ಬಹಳ ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ. ಇತ್ತಿಚೆಗೆ ರೇವಣ್ಣ ಫ್ಯಾಮಿಲಿಗೂ ಕಾರ್ತಿಕ್ ಗೂ ಜಗಳ ನಡೆದಿತ್ತು. ತಮ್ಮ 13 ಎಕರೆ ಜಮೀನಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಕೂಡ ನೀಡಿದ್ದರು.