Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಜ್ವಲ್ ರೇವಣ್ಣ ಅರೆಸ್ಟ್ : ಜಾಮೀನು ಸಿಗುತ್ತಾ..? ಇಲ್ವಾ..? ವಕೀಲರು ಹೇಳಿದ್ದೇನು..?

12:56 PM May 31, 2024 IST | suddionenews
Advertisement

 

Advertisement

 

ಬೆಂಗಳೂರು: ಪ್ರಜ್ವಲ್ ರೇವಣ್ಣ ಇಂದು ಅರೆಸ್ಟ್ ಆಗಿದ್ದು, ಬೇಲ್ ಸಿಗುತ್ತಾ ಇಲ್ವಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಕೀಲ ಅರುಣ್ ಅವರು ಈಗಾಗಲೇ ಪ್ರಜ್ವಲ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮದವರ ಬಳಿ ಮಾಹಿತಿ ಹಂಚಿಕೊಂಡಿದ್ದು, ಬೇಲ್ ಆರ್ ನಾನ್ ಬೇಲ್ ಬಗ್ಗೆ ಮಾತನಾಡಿದ್ದಾರೆ.

Advertisement

ಸದ್ಯ ಈಗ ಪ್ರಜ್ವಲ್ ರೇವಣ್ಣ ಅವರನ್ನು ಹೊಳೆನರಸೀಪುರ ಠಾಣೆಯಲ್ಲಿ ರಿಜಿಸ್ಟರ್ ಆದ ಕೇಸ್ ಮೇಲೆ ಅರೆಸ್ಟ್ ಮಾಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ ಮಾಡುವುದು ಬೇಡ. ನಾವೂ ಕಾನೂನು ಹೋರಾಟ ಮಾಡುತ್ತೇವೆ‌. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತದೆ‌. ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕುತ್ತೇವೆ. ಸದ್ಯಕ್ಕೆ ಬೇಲೆ ಅಪ್ಲಿಕೇಷನ್ ಪೆಂಡಿಂಗ್ ನಲ್ಲಿ ಇದೆ. ಅದರ ಬಗ್ಗೆ ಮಾತನಾಡುವುದಿಲ್ಲ. ತನಿಖೆಗೆ ಸಹಕಾರ ಕೊಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾತನಾಡಿ, ಹೌದು ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಭೇಟಿ ಮಾಡಿದ್ದೀನಿ. ಈ ವೇಳೆ ರಾತ್ರಿ ಬಂದಿದ್ದೀನಿ, ತನಿಖೆಗೆ ಸಹಕಾರ ನೀಡುತ್ತೇನೆ. ಸ್ವಯಂ ಪ್ರೇರಿತವಾಗಿಯೇ ಸೆರಂಡರ್ ಆಗಿದ್ದೀನಿ ಎಂದಿದ್ದಾರೆ. ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಸದ್ಯ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ಕೇಸ್ ಸಂಬಂಧ ನಾನಾ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ನಲ್ಲಿರುವ ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆಯರಿಗೇನಾದರೂ ಬೆದರಿಕೆ ಹಾಕಿದ್ದಾರಾ ಹೇಗೆ ಎಂದು ನಾನಾ ಆಯಾಮದಿಂದ ತನಿಖೆ ನಡೆಸುತ್ತಿದ್ದಾರೆ.

Advertisement
Tags :
arrestbailbengaluruchitradurgaprajwal revannasuddionesuddione newsಅರೆಸ್ಟ್ಚಿತ್ರದುರ್ಗಜಾಮೀನುಪ್ರಜ್ವಲ್ ರೇವಣ್ಣಬೆಂಗಳೂರುವಕೀಲರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article