ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ : ಎಸ್ಐಟಿ ಮುಂದೆ ಹಾಜರಾಗುವುದು ಉತ್ತಮ ಎಂದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಇನ್ನು ಪತ್ತೆಯಾಗಿಲ್ಲ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಎದುರಾದಾಗ, ಆರೋಪಿ ಆಗಿದ್ದವನು ಆರೋಪವನ್ನು ಎದುರಿಸಬೇಕು. ಕಾನೂನು ಹೋರಾಟವನ್ನು ಮಾಡಬೇಕು ಎಂದಿದ್ದಾರೆ.
ಆರೋಪವೆಂಬುದು ಬಂದ ನಂತರ ಆರೋಪಿ ಆಗಿರುವ ಹಿನ್ನೆಲೆಯಲ್ಲಿ ಬಂದುಎಸ್ಐಟಿಯನ್ನು ಎದುರಿಸಬೇಕಾಗಿರುವುದು ಸೂಕ್ತ. ಆದರೆ ನನಗೆ ವೈಯಕ್ತಿಕವಾಗಿ ಯಾವುದೇ ಸಂಪರ್ಕವಿಲ್ಲ. ಅದಂತೂ ಸ್ಪಷ್ಟ. ಅವರ ಸಂಪರ್ಕದಲ್ಲಿ ನಾನು ಕೂಡ ಇಲ್ಲ. ಕುಮಾರಸ್ವಾಮಿ ಅವರು ಮೊದಲೇ ಹೇಳಿದಂತೆ ಉಪ್ಪು ತಿಂದವನು ನೀರು ಕುಡಿಯಲೇಬೇಕು. ಅಷ್ಟೇ ಅಲ್ಲ ವಿಡಿಯೋದಲ್ಲಿರುವ ಹೆಣ್ಣು ಮಕ್ಕಳ ಮುಖದಲವನ್ನು ಬ್ಲರ್ ಮಾಡದೆ ರಿಲೀಸ್ ಮಾಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿದವರು ಯಾರು..? ಇಲ್ಲಿ ವಿಡಿಯೋ ಬಿಡುಗಡೆ ಮಾಡಿದರ ಬಗ್ಗೆ ತನಿಖೆಯೇ ಆಗುತ್ತಿಲ್ಲ. ಇದು ನ್ಯಾಷನಲ್ ಸುದ್ದಿ. ಇದಕ್ಕೆ ಉತ್ತರಿಸಲೇಬೇಕು. ಎಲ್ಲದರ ಬಗ್ಗೆಯೂ ತನಿಖೆಯಾಗಬೇಕು. ಇದಕ್ಕೆಲ್ಲ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಶಿವರಾನೇಗೌಡರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶಿವರಾನೇಗೌಡರ ಮಾತುಗಳನ್ನು ಕೇಳಿದ ಜನಕ್ಕೆ ಎಂಥಾ ರಾಜಕಾರಣಿ ಎಂಬುದು ಗೊತ್ತಾಗಿದೆ. ವಿಷಯಾಧಾರಿತ ಮಾಡಿ ಗೊತ್ತಿರದ ಹಾಗೆ ಒಬ್ಬ ಮಾಜಿ ಪ್ರಧಾನಿಯ ಹಾಗೂ ರಾಜ್ಯದ ಹಿರಿಯ ಮುತ್ಸದ್ಧಿಯ ಸಾವು ಬಯಸುವ ಅವರೊಬ್ಬ ಸಂಸ್ಕೃತಿಹೀನ ವ್ಯಕ್ತಿ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೇವಲ ತಮ್ಮ ಮಗನ ಭವಿಷ್ಯದ ಮಾತ್ರ ಚಿಂತೆ ಇದೆ ಎಂಬುದಾಗಿಯೂ ಅವರು ಹೇಳಿದ್ದಾರೆ. ನಮ್ಮ ತಂದೆ ಯಾವತ್ತಿಗೂ ಆ ರೀತಿ ಯೋಚಿಸಿಲ್ಲ ಲ. ಬೇರೆಯವರ ಹಾಗೇ ಕುಮಾರಸ್ವಾಮಿ ಅವರು ಹೊಂದಾಣಿಕೆ ರಾಜಕಾರಣ ಮಾಡಿದ್ದರೆ, ಇಷ್ಟೊತ್ತಿಗೆ ನಾನು ಯಾವುದೋ ಉನ್ನತ ಸ್ಥಾನದಲ್ಲಿ ಇರುತ್ತಿದ್ದೆ ಎಂದಿದ್ದಾರೆ.