ಪಿಪಿಇ ಕಿಟ್ ಹಗರಣ: ಬಿಎಸ್ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು..!
ಬೆಂಗಳೂರು: ಕೊರೊನಾ ಹಗಣರದ ಬಗ್ಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಪಿಪಿಇ ಕಿಟ್ ಬಗ್ಗೆ ಕೇಳಿ ಬಂದ ಹಗರಣದ ಬಗ್ಗೆ ವರದಿ ನೀಡಲಾಗಿದೆ. ಈ ವರದಿಯನ್ನು ಜಸ್ಟೀಸ್ ಕುನ್ಹಾ ಆಯೋಗದಿಂದ ಪರಿಶೀಲನೆ ಮಾಡಿದ್ದು, ಬಿಎಸ್ವೈ ಹಾಗೂ ಶ್ರೀರಾಮು ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಲು ಶಿಫಾರಸು ಮಾಡಿದೆ. 2020 ಖರೀದಿ ಸಂಬಂಧ ತನಿಖೆಯಾಗಬೇಕು ಎಂಬ ಬಗ್ಗೆ ಆಗ್ರಹ ಕೇಳಿ ಬರ್ತಾ ಇದೆ.
ಆದರೆ ಕೋವಿಡ್ ಕಾಲದ ಪೂರ್ಣ ಪ್ತಮಾಣದ ವರದಿಯನ್ನು ಈಗ ಸಲ್ಲಿಕೆ ಮಾಡಿಲ್ಲ. ಡಾ.ಸುಧಾಕರ್ ಅವಧಿಯ ಕಡತಗಳ ಪರಿಶೀಲನೆ ಇನ್ನು ಕೂಡ ಬಾಕಿ ಇದೆ. ಯಡಿಯೂರಪ್ಪ ಅವರ ಅವಧಿಯಲ್ಲಿ ಶ್ರೀರಾಮುಲು ಅವರು ಸಚಿವರಾಗಿದ್ದಾಗ ಏನೆಲ್ಲಾ ಆಯ್ತು ಎಂಬುದರ ವರದಿ ಮಾತ್ರ ರೆಡಿಯಾಗಿದೆ. ಈ ಮೂಲಕ ಬಿಎಸ್ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸು ಮಾಡಲಾಗಿದೆ. ಜಸ್ಟೀಸ್ ಜಾನ್ ಡಿ ಮೈಕಲ್ ಕುನ್ಹಾ ಆಯೋಗ ಶಿಫಾರಸು ಮಾಡಿದೆ.
ವರದಿಯಲ್ಲಿ, ಸ್ಥಳೀಯ ಕಂಪನಿಗಳಿಂದ 446 ರೂಪಾಯಿಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಚೀನಾ ಕಂಪನಿಗಳಿಂದ 2117 ರೂಪಾಯಿಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ. ಅದೇ .ಅದರಿಯ, ಅದೇ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ಚೀನಾ ಕಂಪನಿಗಳಿಂದ ಅಂದಿನ ಸರ್ಕಾರ ಖರೀದಿ ಮಾಡಿತ್ತು. ಪಿಪಿಇ ಕಿಟ್ ಖರೀದಿ ವೇಳೆ ದರದಲ್ಲು ಭಾರೀ ವ್ಯತ್ಯಾಸವಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ಅನಗತ್ಯವಾಗಿ ಲಾಭ ಮಾಡಿಕೊಡಲಾಗಿತ್ತು ಎಂಬ ಆರೋಪವೂ ಇದೆ. ಹೀಗಾಗಿ ಸರ್ಕಾರ ಈ ಕೇಸನ್ನು ಎಸ್ಐಟಿಯನ್ನು ರಚಿಸಿ ಅದಕ್ಕೆ ನೀಡಿದೆ.