Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಡೆಗೂ ಮಣಿದ ಸರ್ಕಾರ : ಪಿಎಸ್ಐ ಪರೀಕ್ಷೆ ಮುಂದೂಡಿಕೆ..!

12:48 PM Sep 12, 2024 IST | suddionenews
Advertisement

 

Advertisement

ಬೆಂಗಳೂರು: ಯುಪಿಎಸ್ಸಿ ಪರೀಕ್ಷೆಯ ದಿನವೇ ಪಿಎಸ್ಐ ಪರೀಕ್ಷೆಯನ್ನು ನಿಗದಿ ಮಾಡಲಾಗಿತ್ತು. ಇದರಿಂದ ಅಭ್ಯರ್ಥಿಗಳಿಗೆ ಕಷ್ಟವಾಗುತ್ತೆ ಎಂದು ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಆದರೆ ಪರೀಕ್ಷೆ ಮುಂದೂಡುವ ಪ್ರಮೇಯವೇ ಇಲ್ಲ ಎಂದು ಸರ್ಕಾರ ಹೇಳುತ್ತಲೇ ಬಂದಿತ್ತು. ನಿಗಧಿತ ಸಮಯಕ್ಕೇನೆ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಅಭ್ಯರ್ಥಿಗಳ ಮನವಿಗೆ ಸರ್ಕಾರ ಮಣಿದಿದೆ. ಪರೀಕ್ಷೆಯ ದಿನಾಂಕವನ್ನು ಮುಂದೂಡಿದೆ. ಈ ಬಗ್ಗೆ ಗೃಹ ಸಚುವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪಿಎಸ್ಐ ಪರೀಕ್ಷೆ ಮುಂದೂಡುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್ ಅವರು, ಒಂದು ಶನಿವಾರ ಸ್ಲಾಟ್ ನೀಡುವಂತೆ ಮನವಿ ಮಾಡಲಾಗಿದೆ. ಪಿಎಸ್ಐ ಪರೀಕ್ಷೆ 22ಕ್ಕೆ ನಿಗಧಿಯಾಗಿತ್ತು. ಆದರೆ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಲಾಗಿತ್ತು.

Advertisement

ಯುಪಿಎಸ್ಸಿ ಎಕ್ಸಾಂ ಕೂಡ ಅದೇ ದಿನ ನಡೆಯುತ್ತಿದೆ. ಹೀಗಾಗಿ ಮುಂದೂಡುವಂತೆ ಮನವಿ‌ ಮಾಡಿದ್ದರು. ಬಿಜೆಪಿಯ ಅಶ್ವತ್ಥ್ ನಾರಾಯಣ್ ಅವರು ಕೂಡ ಮನವಿ ಮಾಡಿದ್ದರು. KEA ಯವರು ಕೂಡ ಡಿಸೆಂಬರ್ ತನಕ ಯಾವುದೇ ಸ್ಲಾಟ್ ಇಲ್ಲ ಎಂದಿದ್ದರು. ಈ ವಿಚಾರವಾಗಿ ಶಿಕ್ಷಣ ಅಚಿವ ಮಧು ಬಂಗಾರಪ್ಪ ಬಳಿಯೂ ಮಾತನಾಡಿದೆ. ಒಂದು ಶನಿವಾರ ಸ್ಲಾಟ್ ನೀಡಿವಂತೆ ಮನವಿ ಮಾಡಲಾಗಿದೆ. ಸದ್ಯಕ್ಕೆ 402 ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿದೆ. ಇದೇ ತಿಂಗಳ 28ಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಪರೀಕ್ಷೆಯನ್ನು ಅದೇ ಸಮಯಕ್ಕೆ‌ ಮಾಡುವುದು ಬೇಡ ಎಂದು ಅಭ್ಯರ್ಥಿಗಳು ಸಾಕಷ್ಟು ಮನವಿ ಮಾಡಿದ್ದರು. ಇದೀಗ ಪರೀಕ್ಷೆ ಮುಂದೂಡಿಕೆಯಾಗಿದ್ದು, ಅಭ್ಯರ್ಥಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Advertisement
Tags :
bengaluruchitradurgaExamGovernmentpostponementPsisuddionesuddione newsಚಿತ್ರದುರ್ಗಪಿಎಸ್ಐ ಪರೀಕ್ಷೆಬೆಂಗಳೂರುಮುಂದೂಡಿಕೆಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article