Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಜ್ಯಾದ್ಯಂತ ಹೆಚ್ಚಾಯ್ತು ಪಾಸಿಟಿವ್ ಕೇಸ್ : ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣಗಳು

09:19 PM Dec 28, 2023 IST | suddionenews
Advertisement

ಸುದ್ದಿಒನ್, ಬೆಂಗಳೂರು, ಡಿಸೆಂಬರ್.28 : ಕೊರೊನಾ ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಪ್ರತಿದಿನ ಟೆಸ್ಟ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೆ ಇದೆ. ಸೋಂಕಿತರ ಸಂಖ್ಯೆಯಲ್ಲಿ ಕೆಲವೊಮ್ಮೆ ಜಾಸ್ತಿ, ಕೆಲವೊಮ್ಮೆ ಕಡಿಮೆಯಾಗುವಂತ ಏರಿಳಿತ ಕಾಣಿಸುತ್ತಲೆ ಇದೆ. ಪಾಸಿಟಿವ್ ಕೇಸ್ ನಲ್ಲಿ ನಿನ್ನೆಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದೆ. ಕಳೆದ 24 ಗಂಟೆಯಲ್ಲಿ ಸುಮಾರು 158 ಕೊರೊನಾ ಕೇಸ್ ದಾಖಲಾಗಿದೆ. ಈ ಮೂಲಕ 568 ಸಕ್ರಿಯ ಕೊರೊನಾ ಕೇಸ್ ಗಳು ಇದೆ.

Advertisement

ಕಳೆದ 24 ಗಂಟೆಯಲ್ಲಿ ಆರೋಗ್ಯ ಇಲಾಖೆ 6346 RTPCR ಟೆಸ್ಟ್ ಮಾಡಿದ್ದರೆ, 2004 RAT ಟೆಸ್ಟ್ ಮಾಡಿದೆ. ಈ ರೀತಿ ಟೆಸ್ಟ್ ಮಾಡಿದ್ದರ ಪರಿಣಾಮ 158 ಪಾಸಿಟಿವ್ ಕೇಸ್ ಗಳು ದೃಢಪಟ್ಟಿದೆ.

ಇಂದು ಯಾವುದೇ ಸಾವು ಕೊರೊನಾದಿಂದ ಸಂಭವಿಸಿಲ್ಲ. ಹೋಂ ಐಸೋಲೇಷನ್ ನಲ್ಲಿ 514 ಜನರಿದ್ದು, ಹಾಸ್ಪಿಟಲ್ ನಲ್ಲಿ 54 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 14 ಜನ ಐಸಿಯು ನಲ್ಲಿದ್ದಾರೆ. 69 ಜನ ಡಿಸ್ಚಾರ್ಜ್ ಆಗಿದ್ದಾರೆ.

Advertisement

Advertisement
Tags :
balladrybangalorechitradurgacorona viruscoviddavanagerefeaturedhealth bulletinlive updatesnew DelhisuddioneVijayanagaraಕರೋನ ವೈರಸ್ ಲೈವ್ ಅಪ್ಡೇಟ್ಕೋವಿಡ್ ವರದಿಚಿತ್ರದುರ್ಗದಾವಣಗೆರೆನವದೆಹಲಿಬಳ್ಳಾರಿಬೆಂಗಳೂರುವಿಜಯನಗರಸುದ್ದಿಒನ್
Advertisement
Next Article