For the best experience, open
https://m.suddione.com
on your mobile browser.
Advertisement

ಫೆಬ್ರವರಿ ‌25 ರಂದು ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ : ವಸ್ತೃ ಸಂಹಿತೆ ಪಾಲಿಸಲು ಸೂಚನೆ

07:38 PM Feb 12, 2024 IST | suddionenews
ಫೆಬ್ರವರಿ ‌25 ರಂದು ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ   ವಸ್ತೃ ಸಂಹಿತೆ ಪಾಲಿಸಲು ಸೂಚನೆ
Advertisement

Advertisement

ಚಿತ್ರದುರ್ಗ, ಫೆ.12: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ ಹುದ್ದೆಗಳಿಗೆ ಇದೇ ಫೆ.25ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30ರವರೆಗೆ ರಾಜ್ಯದಾದ್ಯಂತ ಪರೀಕ್ಷೆ ನಡೆಯಲಿದೆ. ಸದರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಈ ಕೆಳಗಿನ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ತಿಳಿಸಿದೆ.

ಪುರುಷ ಮತ್ತು ಪುರುಷ ತೃತೀಯ ಲಿಂಗಿ ಅಭ್ಯರ್ಥಿಗಳು : ಅರ್ಧ ತೋಳಿನ ಶರ್ಟ್ಗಳನ್ನು ಧರಿಸುವುದು ಕಡ್ಡಾಯ, ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ ಧರಿಸುವುದು, ಜಿಪ್ ಹಾಗೂ ಜೀನ್ಸ್ ಪ್ಯಾಂಟ್, ದೊಡ್ಡ ಬಟನ್ ಶರ್ಟ್, ಹೆಚ್ಚು ಜೇಬುಗಳಿರುವ ಪ್ಯಾಂಟ್ ಧರಿಸುವಂತಿಲ್ಲ ಹಾಗೂ ಪರೀಕ್ಷಾ ಕೇಂದ್ರದೊಳಗೆ ಷೂಗಳನ್ನು ನಿಷೇಧಿಸಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು ಧರಿಸುವುದು ಮತ್ತು ಕುತ್ತಿಗೆ ಸುತ್ತಲೂ ಯಾವುದೇ ಲೋಹದ ಆಭರಣ ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

Advertisement

ಮಹಿಳಾ ಮತ್ತು ತೃತೀಯ ಲಿಂಗಿ ಮಹಿಳಾ ಅಭ್ಯರ್ಥಿಗಳಿಗೆ : ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು, ಅಥವಾ ಬಟನ್ ಹೊಂದಿರುವ ಬಟ್ಟೆ, ಹಾಗೂ ಪರೀಕ್ಷಾ ದಿನದಂದು ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್, ಎತ್ತರವಾದ ಹಾಗೂ ದಪ್ಪವಾದ ಅಡಿ ಭಾಗ ಹೊಂದಿರುವ ಹಿಮ್ಮಡಿ ಶೂ, ಚಪ್ಪಲಿ ಧರಿಸುವಂತಿಲ್ಲ. ಈ ಅಭ್ಯರ್ಥಿಗಳು ಮಂಗಳ ಸೂತ್ರ ಕಾಲುಂಗುರ ಹೊರತುಪಡಿಸಿ ಯಾವುದೇ ತರಹದ ಲೋಹದ ಆಭರಣಗಳನ್ನು ಧರಿಸುವಂತಿಲ್ಲ, ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags :
Advertisement