For the best experience, open
https://m.suddione.com
on your mobile browser.
Advertisement

ಫೋಕ್ಸೋ ಕೇಸ್ : ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್

06:39 PM Jun 14, 2024 IST | suddionenews
ಫೋಕ್ಸೋ ಕೇಸ್   ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್
Advertisement

ಬೆಂಗಳೂರು: ಪೋಕ್ಸೋ ಕೇಸಿನಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆ ಇತ್ತು. ಆದರೆ ಯಡಿಯೂರಪ್ಪ ಅವರು ಖ ಕೇಸಿನಿಂದ ರಿಲ್ಯಾಕ್ಸ್ ಆಗಿದ್ದಾರೆ. ಬಿಎಸ್ವೈ ಅವರು ಜಾಮೀನುಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಬಂಧಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೋರ್ಟಗ ಸೂಚನೆ ನೀಡಿದೆ. ಈ ಮೂಲಕ ಕೇಸಲ್ಲಿ ಕೊಂಚ ರಿಲೀಫ್ ಸಿಕ್ಕಿದೆ.

Advertisement

ಯಡಿಯೂರಪ್ಪ ಅವರ ಬಗ್ಗೆ ಸೂಚನೆ ನೀಡಿರುವ ಕೋರ್ಟ್, ಯಡಿಯೂರಪ್ಪ ಮಾಜಿ ಸಿಎಂ. ಜೀವನದ ಸಂಧ್ಯಾಕಾಲದಲ್ಲಿ ಜೀವಿಸುತ್ತಾ ಇದ್ದಾರೆ. ಅವರ ಕಸ್ಟಡಿಯ ವಿಚಾರಣೆಯ ಅಗತ್ಯ ಕಾಣಿಸ್ತಾ ಇಲ್ಲ. ಆರೋಗ್ಯದ ಸಮಸ್ಯೆಗಳು ಇರುತ್ತವೆ. ಆರೋಪಿ ಓಡಿ ಹೋಗುವ ಅಂಶಗಳು ಇಲ್ಲೇನು ಕಾಣಿಸುತ್ತಿಲ್ಲ. ಎರಡು ವಾರಗಳ ಬಳಿಕ ಅರ್ಜಿಯ ವಿಚಾರಣೆ ನಡೆಯಲಿದೆ. ಅಲ್ಲಿಯ ತನಕ ಅರೆಸ್ಟ್ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಆದೇಶ ನೀಡಿದ್ದಾರೆ.

Advertisement

ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಅವರಿಗೆ ಜಾಮೀನು ನೀಡಲು ಎಜಿ ಶಶಿಕಿರಣ್ ಶೆಟ್ಟಿ ವಿರೋಧಿಸಿದರು. ನಾವು ಎರಡು ಬಾರಿ‌ ನೊಟೀಸ್ ಕೊಟ್ಟಿದ್ದೇವೆ. ಆದ್ರೂ ಆರೋಪಿ ವಿಚಾರಣೆಗೆ ಬಂದಿಲ್ಲ. ನಾವು ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ವರದಿ ಪಡೆದಿದ್ದೇವೆ. ವಿಡಿಯೋ ಸಾಕ್ಷಿಯ ಎಫ್ಎಸ್ಎಲ್ ವರದಿ ಸಹ ಪಡೆದಿದ್ದೇವೆ. ವಿಚಾರಣೆಗೆ ಹಾಜರಾಗಲು ನಾವು ನೊಟೀಸ್ ಕೊಟ್ಟ ಬಳಿಕ ಆರೋಪಿ ಡೆಲ್ಲಿಗೆ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಸದ್ಯಕ್ಕೆ ಅರೆಸ್ಟ್ ಮಾಡುವಂತೆ ಇಲ್ಲ, ಮುಂದಿನ ಅರ್ಜಿ ವಿಚಾರಣೆಯ ತನಕ ಯಥಾ ಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿದೆ.

Advertisement

Advertisement
Advertisement
Tags :
Advertisement