For the best experience, open
https://m.suddione.com
on your mobile browser.
Advertisement

PM Modi: ಇವರು ನನ್ನನ್ನು ಜೀವಂತ ಸಮಾಧಿ ಮಾಡುತ್ತಾರೆ : ಪ್ರಧಾನಿ ನರೇಂದ್ರ ಮೋದಿ

04:02 PM May 10, 2024 IST | suddionenews
pm modi  ಇವರು ನನ್ನನ್ನು ಜೀವಂತ ಸಮಾಧಿ ಮಾಡುತ್ತಾರೆ   ಪ್ರಧಾನಿ ನರೇಂದ್ರ ಮೋದಿ
Advertisement

ಸುದ್ದಿಒನ್ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೆ ಶಿವಸೇನೆಯನ್ನಯ (ಯುಬಿಟಿ) ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು. ಇವರು ನನ್ನ ಸಮಾಧಿಯನ್ನು ಅಗೆಯಲು ಹೊರಟಿದ್ದಾರೆ. ನನ್ನನ್ನು ನಾಶ ಮಾಡುತ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಅವರ ರಾಜಕೀಯ ದುರುದ್ದೇಶ ಎಷ್ಟು ಕೆಟ್ಟದಾಗಿದೆ. ದೇಶದ ತಾಯಂದಿರು ಮತ್ತು ಸಹೋದರಿಯರ ಶ್ರೀರಕ್ಷೆ ನನ್ನ ಮೇಲೆ ಇರುವವರಿಗೂ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಮೋದಿಯನ್ನು ಸಮಾಧಿ ಮಾಡುತ್ತೇವೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಜನರು ತಮ್ಮ ನೆಚ್ಚಿನ ಪದಗಳನ್ನು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸುತ್ತಾರೆ. ನಕಲಿ ಶಿವಸೇನೆ ಸದಸ್ಯರು ತಮ್ಮೊಂದಿಗೆ ಬಾಂಬ್ ಸ್ಫೋಟದ ಅಪರಾಧಿಗಳನ್ನು ಪ್ರಚಾರಕ್ಕೆ ಕರೆದೊಯ್ಯಲು ಪ್ರಾರಂಭಿಸಿದ್ದಾರೆ. ಮೇವು ಹಗರಣದ ಆರೋಪಿಯೊಬ್ಬನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬಿಹಾರ ಸುತ್ತಾಡುತ್ತಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ನಾನು ಕಾಂಗ್ರೆಸ್ ರಾಜಮನೆತನದಂತಹ ದೊಡ್ಡ ಕುಟುಂಬದಿಂದ ಬಂದವನಲ್ಲ, ಆದರೆ ನಾನು ಬಡತನದಲ್ಲಿ ಬೆಳೆದಿದ್ದೇನೆ. ಎಷ್ಟು ಕಷ್ಟಗಳು ಬಂದಿವೆ ಎಂಬುದು ನನಗೆ ಗೊತ್ತು. ನಿಮ್ಮ ಜೀವನದಲ್ಲೂ ಕಷ್ಟಗಳ ಪರ್ವತಗಳಿವೆ. ಅನೇಕ ಬುಡಕಟ್ಟು ಕುಟುಂಬಗಳಿಗೆ ಶಾಶ್ವತ ಮನೆಗಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಇನ್ನೂ ಕೆಲವು ಹಳ್ಳಿಗಳಿಗೆ ವಿದ್ಯುತ್‌ ಸಿಕ್ಕಿಲ್ಲ. ಅವರೆಲ್ಲರಿಗೂ ನಾನು ಸೇವೆ ಸಲ್ಲಿಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಪ್ರತಿ ಬಡವರಿಗೆ, ಮನೆ, ಪ್ರತಿ ಕುಟುಂಬಕ್ಕೆ ನೀರಿನ ಸೌಲಭ್ಯ ಮತ್ತು ಪ್ರತಿ ಹಳ್ಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಂದೂರಬಾರ್‌ನ ಸುಮಾರು 1.25 ಲಕ್ಷ ಬಡವರಿಗೆ ಶಾಶ್ವತ ಮನೆಗಳನ್ನು ಒದಗಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 4 ಕೋಟಿ ಪಕ್ಕಾ ಮನೆಗಳನ್ನು ನೀಡಲಾಗಿದ್ದು, ಮೂರನೇ ಅವಧಿಯಲ್ಲಿ ಇನ್ನೂ 3 ಕೋಟಿ ಮನೆಗಳನ್ನು ನೀಡಲಾಗುವುದು ಎಂದರು.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಿ ಮೋದಿ, 'ಎನ್‌ಡಿಎ ಸರ್ಕಾರವು ಮಹಾರಾಷ್ಟ್ರದ 20,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರತಿ ಮನೆಗೆ ನೀರು ನೀಡಿದೆ. ಇದು ನಂದೂರ್‌ಬಾರ್‌ನ 111 ಹಳ್ಳಿಗಳನ್ನು ಸಹ ಒಳಗೊಂಡಿದೆ. ಇದು ಇದೀಗ ಟ್ರೇಲರ್ ಆಗಿದೆ, ಮತ್ತು ಇನ್ನೂ ಮಾಡಲು ಸಾಕಷ್ಟು ಇದೆ. ಹೀಗಾಗಿ ಮತ್ತೊಮ್ಮೆ ಅವಕಾಶ ಕೊಡಿ ಎಂದು ಪ್ರಧಾನಿ ಮೋದಿ ಮತದಾರರಿಗೆ ಮನವಿ ಮಾಡಿದರು.

Tags :
Advertisement