For the best experience, open
https://m.suddione.com
on your mobile browser.
Advertisement

ದಯವಿಟ್ಟು ಭಾರತ - ಆಸ್ಟ್ರೇಲಿಯಾ ಫೈನಲ್ ಪಂದ್ಯ ನೋಡಬೇಡಿ | ಅಮಿತಾಭ್ ಬಚ್ಚನ್ ಗೆ ಕ್ರಿಕೆಟ್ ಪ್ರೇಮಿಗಳ ಮನವಿ

05:54 AM Nov 18, 2023 IST | suddionenews
ದಯವಿಟ್ಟು ಭಾರತ   ಆಸ್ಟ್ರೇಲಿಯಾ ಫೈನಲ್ ಪಂದ್ಯ ನೋಡಬೇಡಿ   ಅಮಿತಾಭ್ ಬಚ್ಚನ್ ಗೆ ಕ್ರಿಕೆಟ್ ಪ್ರೇಮಿಗಳ ಮನವಿ
Advertisement

ಸುದ್ದಿಒನ್ : ಕ್ರಿಕೆಟ್ ಪ್ರೇಮಿಗಳು ತೀವ್ರ ಕಾತರದಿಂದ ಕಾಯುತ್ತಿರುವ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ(ನವೆಂಬರ್ 19) ಭಾರತ - ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ನ ಅಂತಿಮ ಪಂದ್ಯವನ್ನು ಆಡಲಿವೆ. ಈ ಪಂದ್ಯಕ್ಕೆ ಅತಿರಥ ಮಹಾರಥರು ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿರುವರು.

Advertisement

ಆದರೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರವರನ್ನು ಇಂತಹ ಮಹತ್ವದ ಪಂದ್ಯಕ್ಕೆ ಹೋಗಬೇಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ವಿಶ್ವಕಪ್ ಫೈನಲ್‌ಗೆ ಹೋಗಬೇಡಿ ಎಂದು  ಟ್ವಿಟ್ಟರ್ ಮೂಲಕ ಕಾಮೆಂಟ್‌ಗಳು ಹಾಕುತ್ತಿರುವುದು ಇದೀಗ ವೈರಲ್ ಆಗಿವೆ.

ಅಭಿಮಾನಿಗಳು ಹೀಗೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಬರಬೇಡಿ ಎನ್ನಲು ಕಾರಣವೇನೆಂದರೆ, ವಾಂಖೆಡೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತು. 70 ರನ್‌ಗಳಿಂದ ಗೆದ್ದು ಫೈನಲ್‌ಗೆ ತಲುಪಿತ್ತು. ಈ ಪಂದ್ಯದ ಕುರಿತು ಟೀಂ ಇಂಡಿಯಾ ಗೆಲುವಿನ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಗ್ ಬಿ, ನಾನು ನೋಡದಿದ್ದರೆ ಮ್ಯಾಚ್ ಗೆಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ನಾನು ಪಂದ್ಯವನ್ನು ನೋಡದಿದ್ದರೆ ಭಾರತ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಸೆಂಟಿಮೆಂಟ್ಸ್ ಅನ್ನು ಹೆಚ್ಚು ಫಾಲೋ ಮಾಡುವ ಕ್ರಿಕೆಟ್ ಅಭಿಮಾನಿಗಳು ಇದೀಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನೀವು ಪಂದ್ಯವನ್ನು ನೋಡದಿರುವ ಕಾರಣ ಟೀಂ ಇಂಡಿಯಾ ಸೆಮಿಸ್ ತಲುಪಿತ್ತು, ಆದ್ದರಿಂದ ಫೈನಲ್ ಪಂದ್ಯವನ್ನು ನೀವು ನೋಡದೆ ಹೋದರೆ ಕಪ್ ಕೂಡ ನಮ್ಮದೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Advertisement

ಬಿಗ್ ಬಿ ಟ್ವೀಟ್ ಗೆ ಪ್ರತ್ಯುತ್ತರವಾಗಿ ಈ ಬಾರಿ ತ್ಯಾಗ ಮಾಡಿ ಸಾರ್ ಎಂದು ಕಾಮೆಂಟ್ ಗಳ ಮಹಾಪೂರವೇ ಹರಿದು ಬರುತ್ತಿದೆ ಎಂದು ಒಬ್ಬರು ಫೈನಲ್ ಪಂದ್ಯಕ್ಕೆ ಬರಬೇಡಿ ಎಂದು ಕೇಳಿದರೆ, ಮತ್ತೊಬ್ಬರು ಮನೆಯಲ್ಲಿ ಟಿವಿ ನೋಡಬೇಡಿ ಎಂದು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿ ಫೈನಲ್ ಪಂದ್ಯದ ದಿನ ನಿಮ್ಮ ಮನೆಯ ಗೇಟ್‌ಗೆ ಬೀಗ ಹಾಕುತ್ತೀನಿ ಎಂದು  ಸಿಹಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಕಾಮೆಂಟ್ ಗಳನ್ನು ನೋಡಿದ ಬಿಗ್ ಬಿ ಇಷ್ಟೆಲ್ಲಾ ನೋಡಿ ಮ್ಯಾಚ್ ಗೆ ಬರಬೇಕಾ ? ಬೇಡವೇ ಎಂದು ಯೋಚಿಸುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಹಾಗೆ ಮಾಡಬೇಡಿ ಸಾರ್ ಎಂದು ಟೀಂ ಇಂಡಿಯಾ ಅಭಿಮಾನಿಗಳು ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಅಮಿತಾಭ್ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಹೋಗುತ್ತಾರಾ ಅಥವಾ ಅಭಿಮಾನಿಗಳ ಹಾರೈಕೆಯನ್ನು ಗಂಭೀರವಾಗಿ ಪರಿಗಣಿಸಿ ಮನೆಯಲ್ಲೇ ಇರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಈ ಪಂದ್ಯಕ್ಕೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ.‌ ಅಲ್ಲದೆ ಸಮಾರೋಪ ಸಮಾರಂಭವನ್ನು ಬಿಸಿಸಿಐ ಅದ್ಧೂರಿಯಾಗಿ ಆಯೋಜಿಸಲಿದೆ ಎಂದು ತಿಳಿದುಬಂದಿದೆ.

Tags :
Advertisement