Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

28 ಕ್ಷೇತ್ರದಲ್ಲೂ ಸಚಿವರನ್ನೇ ನಿಲ್ಲಿಸುವ ಪ್ಯ್ಲಾನ್ ಕಾಂಗ್ರೆಸ್ ನದ್ದು : ರೇಣುಕಾಚಾರ್ಯ ಕಿಡಿ

09:17 PM Feb 10, 2024 IST | suddionenews
Advertisement

ದಾವಣಗೆರೆ: ಲೋಕಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ನಡೆಸಿದೆ. ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಬೇಕೆಂಬ ಅಂದಾಜಿನ ಲೆಕ್ಕಚಾರವೂ ಮೂರು ಪಕ್ಷಗಳಲ್ಲೂ ನಡೆದಿದೆ. ಆದರೆ ಯಾವುದನ್ನು ಅಧಿಕೃತವಾಗಿ ಹೊರಗೆ ಹಾಕಿಲ್ಲ. ಇದೀಗ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ವಿಚಾರಕ್ಕೆ ಎಂ ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, 28 ಕ್ಷೇತ್ರಗಳಲ್ಲಿ ನಿಲ್ಲುವುದಕ್ಕೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಚಿವರನ್ನೇ ನಿಲ್ಲಿಸುವ ಪ್ಲ್ಯಾನ್ ಮಾಡಿದೆ ಕಾಂಗ್ರೆಸ್. ಕಾಂಗ್ರೆಸ್ ನವರು ನೀಡಿದ ಎಲ್ಲಾ ಗ್ಯಾರಂಟಿಗಳು ಫೇಲ್ಯೂರ್ ಆಗಿವೆ. ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಒಂಭತ್ತು ತಿಂಗಳಾದರೂ ಕಾಂಗ್ರೆಸ್ ಇನ್ನು ಟೇಕಾಫ್ ಆಗಿಲ್ಲ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಬರ ಪರಿಹಾರ ನೀಡುವಲ್ಲೂ ಸರ್ಕಾರ ವಿಫಲವಾಗಿದೆ. ಪ್ರತಿಭಟನೆಗಳನ್ನು ಮಾಡಿ ಅವರ ದುರಾಡಳಿತವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಹಿಂದೆ ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್​ ಆರೋಪ ಮಾಡಿದ್ದರು. ಅದೇ ಕೆಂಪಣ್ಣ ಕಾಂಗ್ರೆಸ್ ವಿರುದ್ಧ ಕಮಿಷನ್​ ಆರೋಪ ಮಾಡಿದ್ದಾರೆ. ಈಗ ಆರೋಪ ಬಂದಿದೆಯಲ್ಲ, ಹೊಣೆ ಹೊತ್ತು ರಾಜೀನಾಮೆ ನೀಡಿ. ಗುತ್ತಿಗೆದಾರರು ಆರೋಪ ಮಾಡಿದ್ರೂ ಸ್ಪಷ್ಟವಾದ ಉತ್ತರ‌ ನೀಡುತ್ತಿಲ್ಲ. ಕಾಂಗ್ರೆಸ್ ವೈಫಲ್ಯ ಮುಚ್ಚಿ ಹಾಕಲು ಈ ರೀತಿ ಮಾತನಾಡುತ್ತಿದ್ದಾರೆ. ದೇಶ ವಿಭಜನೆ ಮಾತಾಡಿದರೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಅಂತಾ ಮಾತ್ರ. ಈಶ್ವರಪ್ಪ ಹಿಂದುತ್ವವಾದಿ, ಅದ್ದರಿಂದ ಇರೋದನ್ನೇ ಹೇಳಿದ್ದಾರೆ. ದೇಶ ವಿಭಜನೆ ಮಾಡಬೇಕು ಅಂದರೆ ಯಾರು ಸುಮ್ಮನೆ ಇರುತ್ತಾರೆ ಎಂದು ಈಶ್ವರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

Advertisement
Tags :
28 ಕ್ಷೇತ್ರdavanagereRenukacharyaಕಾಂಗ್ರೆಸ್ದಾವಣಗೆರೆಪ್ಯ್ಲಾನ್ರೇಣುಕಾಚಾರ್ಯ
Advertisement
Next Article