Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

Petrol, Diesel Prices: ವಾಹನ ಸವಾರರಿಗೆ ಶಾಕ್ :  ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ

07:33 AM Jun 16, 2024 IST | suddionenews
Advertisement

ಸುದ್ದಿಒನ್, ಬೆಂಗಳೂರು : ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಈ ಹಿಂದೆ 100 ರೂಪಾಯಿಗಿಂತಲೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಚುನಾವಣೆಗೂ ಮೊದಲು ನಿರ್ಧಾರ ಕೈಗೊಂಡಿತ್ತು. ಆದರೆ, ಚುನಾವಣೆ ಮುಗಿದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂಬ ಅನುಮಾನ ಹಲವರಲ್ಲಿದೆ. ಆದರೆ ಇತ್ತೀಚೆಗೆ ಪೆಟ್ರೋಲಿಯಂ ಸಚಿವರು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಲೆ ಏರಿಕೆ ಸಾಧ್ಯತೆ ಇಲ್ಲ ಎಂದು ಘೋಷಿಸಿದ್ದಾರೆ.

Advertisement

ಆದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 3 ರೂ., ಡೀಸೆಲ್ ಗೆ 3.20 ರೂ. ನಷ್ಟು ಹೆಚ್ಚಾಗಿದೆ.  ಇದರಿಂದ ವಾಹನ ಸವಾರರಿಗೆ ಹೊರೆಯಾಗಲಿದೆ. ಈ ಏರಿಕೆಯಾದ ಬೆಲೆಗಳು ಇಂದಿನಿಂದಲೇ (ಶನಿವಾರ) ಜಾರಿಗೆ ಬಂದಿವೆ. ಪ್ರಸ್ತುತ ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.102.85 ತಲುಪಿದ್ದರೆ, ಲೀಟರ್ ಡೀಸೆಲ್ ಬೆಲೆ ರೂ.88.93 ತಲುಪಿದೆ.

ಜೂನ್ 15 ರಂದು, ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ.  ಕರ್ನಾಟಕ ಮಾರಾಟ ತೆರಿಗೆಯನ್ನು (ಕೆಎಸ್‌ಟಿ) ಪೆಟ್ರೋಲ್‌ ಮೇಲೆ ಶೇ 25.92 ರಿಂದ ಶೇ 29.84 ಕ್ಕೆ ಮತ್ತು ಡೀಸೆಲ್‌ ಮೇಲೆ ಶೇ 18.4 ರಿಂದ ಶೇ 14.3 ರಿಂದ ಶೇ 18.4 ಕ್ಕೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆಯಲ್ಲಿ ತಿಳಿಸಿದೆ. ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ​​ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.86 ರೂ ಆಗಿದ್ದರೆ, ಡೀಸೆಲ್ ಬೆಲೆ 88.94 ರೂ. ಹೆಚ್ಚಿದ ಬೆಲೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಹಣಕಾಸು ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

Advertisement

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ 50,000 ರಿಂದ 60,000 ಕೋಟಿ ರೂ. ಗಳನ್ನು ಮೀಸಲಿಡಬೇಕಾಗಿದೆ. ಆದ್ದರಿಂದ ಇಂಧನ ಬೆಲೆ ಏರಿಕೆಯಿಂದಾಗಿ ಈ ಹಣಕಾಸು ವರ್ಷದಲ್ಲಿ ಸುಮಾರು 2,500-ರೂ.2,800 ಕೋಟಿ ಸಂಗ್ರಹಿಸಬಹುದು ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Tags :
bengaluruchitradurgaDieseldiesel pricePetrolPetrol and diesel pricepetrol pricesuddionesuddione newsಚಿತ್ರದುರ್ಗಡೀಸೆಲ್ಡೀಸೆಲ್ ಬೆಲೆಪೆಟ್ರೋಲ್ಪೆಟ್ರೋಲ್ ಬೆಲೆಬೆಂಗಳೂರುಭಾರೀ ಏರಿಕೆವಾಹನ ಸವಾರರಿಗೆ ಶಾಕ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article