For the best experience, open
https://m.suddione.com
on your mobile browser.
Advertisement

ವಿಕಲಚೇತನರು ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಬೇಕು:ಪಿ.ತಿಪ್ಪಣ್ಣ ಸಿರಸಗಿ

05:00 PM Dec 03, 2023 IST | suddionenews
ವಿಕಲಚೇತನರು ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಬೇಕು ಪಿ ತಿಪ್ಪಣ್ಣ ಸಿರಸಗಿ
Advertisement

ಸುದ್ದಿಒನ್, ಕೊಪ್ಪಳ :ವಿಕಲಚೇತನರು ತಮ್ಮಲ್ಲಿ ಇರುವ ಕೀಳು ಹಿರಿಮೆಯಿಂದ ಹೊರಬಂದು ವಿಶಾಲವಾದ ಮನೋಭಾವನೆಯನ್ನು ಬೆಳಸಿಕೊಳ್ಳುವುದರ ಜೊತೆಯಲ್ಲಿ ತಮ್ಮಲ್ಲಿ ಹೆಚ್ಚು ಆತ್ಮ ವಿಶ್ವಾಸ  ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Advertisement

ಅವರು ನಗರದ ತಾಲೂಕ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ವಿಲಚೇತನರ ದಿನಾಚರಣೆಯ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ವಿಕಲಚೇತನರಿಗೆ ಕೇವಲ ದೇಹದ ಒಂದು ಅಂಗ ಮಾತ್ರ ವಿಕಲತೆಗೆ ಒಳಗಾಗಿರುತ್ತದೆ.

ಆದರೆ ಮನಸ್ಸಿಗೆ ಅಂಗವಿಕಲತೆ ಆಗಿರುವುದಿಲ್ಲಾ.ಅಂಗವಿಕಲತೆಗೆ ಒಳಗಾದ ದೇಹದ ಭಾಗದ ಕಡೆಗೆ ಹೆಚ್ಚು ಗಮನವನ್ನು ಕೊಟ್ಟು ತಮ್ಮಲ್ಲಿ ಕೀಳು ಹಿರಿಮೆಯನ್ನು ಬೆಳೆಸಿಕೊಳ್ಳುವುದನ್ನು ಬಿಟ್ಟು ನಾವು ಕೂಡಾ ಸಾಮಾನ್ಯರಂತೆ ಸಾಧನೆ ಮಾಡಬಲ್ಲೇವೂ ಎಂಬ ತಮ್ಮಲ್ಲಿ ಹೆಚ್ಚು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.ವಿಕಲವೇತನರಿಗಾಗಿ ಸರಕಾರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ.ಇಂಥಹ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದರೆ ಕೇವಲ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ.

Advertisement

ವಿಕಲಚೇತನರ ಸಂಘ-ಸಂಸ್ಥೆಗಳು,ವಿಕಲಚೇತನರು ಸೇರಿಕೊಂಡಾಗ ಮಾತ್ರ ಯೋಜನೆಗಳು ಸಮರ್ಪಕವಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ದೊರಕುತ್ತವೆ ಎಂದು ಹೇಳಿದರು.
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕರಾದ ವಿಠ್ಠಲ್ ಜಾಗವಾದ ಮಾತನಾಡುತ್ತಾ,ಕ್ರೀಡಾ ಇಲಾಖೆಯಿಂದ ವಿಕಲಚೇತನರಿಗಾಗಿ ಅನೇಕ ರೀತಿಯ ಕಾರ್ಯಗಳಿದ್ದು,ಅದರ ಪ್ರಯೋಜನೆಯನ್ನು ಪ್ರತಿಯೊಬ್ಬ ವಿಕಲಚೇತನ ಪಡೆದುಕೊಳ್ಳಬೇಕು ಎಂದು ಆಹ್ವಾನ ನೀಡಿದರು.ವಿಕಲಚೇತನರ ಕ್ಷೇತ್ರದಲ್ಲಿ ಅವರ ಅಂಗವೈಲ್ಯತೆಯನ್ನು ಮೆಟ್ಟಿನಿಂತು ಸಾಧನೆ ಮಾಡಿದವರು ಅನೇಕರು ಇದ್ದಾರೆ.ಅಂಥವರನ್ನು ಆದರ್ಶವಾಗಟ್ಟುಕೊಂಡು  ಪ್ರತಿಯೊಬ್ಬ ವಿಕಲಚೇತನರು ಸಾಧನೆ ಮಾಡಬೇಕು ಎಂದು ಹೇಳಿದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತನಾಡಿ,ಪ್ರತಿ ವರ್ಷ ವಿಕಲಚೇತನರ ಕ್ಷೇತ್ರದಲ್ಲಿ ನೀಡುವ ವೈಯಕ್ತಿ ಹಾಗೂ ಸಂಘ-ಸಂಸ್ಥೆಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯು ಜಿಲ್ಲೆಗೆ ದೊರೆಯದಿರುವುದು ಅಲ್ಲದೇ ಜನಪ್ರತಿನಿಧಿಗಳು ಯಾರು ಈ ಕಾರ್ಯಕ್ರಮಕ್ಕೆ ನೋವಿನ ಸಂಗತಿಯಾಗಿದೆ.

ಇದಕ್ಕೆ ಕಾರಣ ರಾಜಕೀಯ ಕ್ಷೇತ್ರದಲ್ಲಿ ವಿಕಲಚೇತನರಿಗೆ ಮೀಸಲಾತಿ ಇಲ್ಲದಿರುವುದು.ರಾಜ್ಯದಲ್ಲಿ ಸುಮಾರು 30 ಲಕ್ಷ ವಿಕಲಚೇತನರಿದ್ದಾರೆ.ವಿವಿಧ ಕ್ಷೇತ್ರಗಳಿಗೆ ಯಾವ ರೀತಿಯಲ್ಲಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುತ್ತಾರೆ.

ಅದೇ ರೀತಿಯಲ್ಲಿ ವಿಕಲಚೇತನರು ಕೂಡಾ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಾಗುತ್ತದೆ.ವಿಕಲಚೇತನರಿಗೆ ಕೌಶಲ್ಯ ಆಧಾರಿತ ತರಬೇತಿ ಕೇಂದ್ರವನ್ನು ಪ್ರಾರಂಭಿಸಬೇಕು,ವಿಕಲಚೇತನರಿಗೆ ನೀಡುವ ಮಾಶಾಸನವನ್ನು ಹೆಚ್ಚಳ ಮಾಡಬೇಕು,ಗ್ರಾಮೀಣ ಪುರ್ನವಸತಿ ಸ್ವಯಂ ಸೇವಕರನ್ನು ಖಾಯಂಯಾತಿ ಮಾಡಬೇಕು.ಎಲ್ಲಾ ಇಲಾಖೆಯ ಕಟ್ಟಡಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬುದನ್ನು ಸೇರಿದಂತೆ ಅನೇಕ ವಿಷಯಗಳ ಕುರಿತು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಶ್ರೀದೇವಿ.ಎಸ್.ಎನ್ ವಹಿಸಿದ್ದರು.
ಸಮೂಹ ಸಂಸ್ಥೆಯ ನಿರ್ದೇಶಕರಾದ ಬಿ.ಹಂಪಣ್ಣ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಿಕಲಚೇತನ ಒಕ್ಕೂಟದ ರಾಜ್ಯ ಪ್ರತಿನಿಧಿ ವಿರುಪಾಕ್ಷಿ ತಳಕಲ್,ವಿಕಲಚೇತನರ ಒಕ್ಕೂಟದ ಗೌರವಾಧ್ಯಕ್ಷರಾದ ಪ್ರತಾಪ ನವಲಿಹಿರೇಮಠ,ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜಿನ ಪೂಜಾರ,ಆರ್.ಪಿ.ಡಿ.ಯ ರಾಜ್ಯಾಧ್ಯಕ್ಷರಾದ ಮಂಜುನಾಥ ಹೊಸಕೇರಾ,ಸಿದ್ದಲಿಂಗಯ್ಯಾ ಗೊರ್ಲೆಕೊಪ್ಪ,ಈರಣ್ಣ ಕರೆಕುರಿ,ಬಸವನಗೌಡ,ಮುಬಾರಕ ಸೇರಿದಂತೆ ಅನೇಕರು ಹಾಜರಿದ್ದರು.

Tags :
Advertisement