For the best experience, open
https://m.suddione.com
on your mobile browser.
Advertisement

ಟಮೋಟೋ ಬೆಲೆ ಕೇಳಿನೆ ಜನ ಸುಸ್ತು : ಈರುಳ್ಳಿ ಕೂಡ ರೇಟ್ ಆಗಿದೆ..!

06:27 AM Jun 18, 2024 IST | suddionenews
ಟಮೋಟೋ ಬೆಲೆ ಕೇಳಿನೆ ಜನ ಸುಸ್ತು   ಈರುಳ್ಳಿ ಕೂಡ ರೇಟ್ ಆಗಿದೆ
Advertisement

ಬೆಂಗಳೂರು: ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು.‌ ಈಗ ಮುಂಗಾರು ಮಳೆ ಚುರುಕುಗೊಂಡಿದೆ.‌ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಹೀಗಿರುವಾಗ ಮಾರುಕಟ್ಟೆಯಲ್ಲಿ ಟಮೋಟೋ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ಟಮೋಟೋ ತೆಗೆದುಕೊಳ್ಳುವುದಕ್ಕೆ ಹೋದವರು ಶಾಕ್ ಆಗಿ 200-300 ಗ್ರಾಂ ತರುವಂತೆ ಆಗಿದೆ. ಟಮೋಟೋ ಬೆಲೆ ಕೇಳಿಯೇ ಶಾಕ್ ಆಗಿದ್ದಾರೆ.

Advertisement

ಒಂದು ಕೆಜಿ ಟಮೋಟೋ ಬೆಲೆ 100 ದಾಟಿದೆ. ಮಳೆ ಬರುತ್ತಿರುವ ಕಾರಣ ಟಮೋಟೋ ಬೆಳೆ ಕೈಗೆ ಸಿಗುತ್ತಿಲ್ಲ. ಹೀಗಾಗಿಯೇ ಟಮೋಟೋ ಬೆಲೆ ಹೆಚ್ಚಳವಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರ ಜೊತೆಗೆ ಈರುಳ್ಳಿ ಬೆಲೆಯೂ ಕೆಜಿಗೆ 60 ರೂಪಾಯಿ ಆಗಿದೆ.

ಒಂದು ಕಡೆ ತೈಲ ಬೆಲೆ ಏರಿಕೆಯನ್ನೇ ಜನ ಸಹಿಸುವುದಕ್ಕೆ ಆಗುತ್ತಿಲ್ಲ. ಹೀಗಿರುವಾಗ ಈಗ ತರಕಾರಿ ಬೆಲೆಯೂ ಏರಿಕೆಯಾದರೆ ಮಧ್ಯಮವರ್ಗದ ಜನ ಬದುಕಯವುದಾದರು ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಬರೀ ಟಮೋಟೋ, ಈರುಳ್ಳಿ ಮಾತ್ರವಲ್ಲ ಎಲ್ಲಾ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ. ಇದು ಗ್ರಾಹಕರ ಜೇಬಿಗೆ ಒಡೆತ ಬಿದ್ದಿದೆ.

Advertisement

Tags :
Advertisement