Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೆಂಗಲ್ ಚಂಡಮಾರುತ : ಕರ್ನಾಟಕಕ್ಕೂ ಬಾರೀ ಮಳೆಯ ಎಚ್ಚರಿಕೆ ನೀಡಿದ ಹವಮಾನ ಇಲಾಖೆ

06:55 PM Dec 01, 2024 IST | suddionenews
Advertisement

ಬೆಂಗಳೂರು: ಚಳಿಯನ್ನೇ ತಡೆದುಕೊಳ್ಳಲು ಆಗ್ತಿಲ್ಲ. ಹೀಗಿರುವಾಗ ಮಳೆಯ ವಾತಾವರಣ ಬೇರೆ ಹಿರಗೆ ಹೋಗುವುದಕ್ಕೇನೆ ಕಷ್ಟವಾದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ತಮಿಳುನಾಡಿನ ಪುದುಚೇರಿಗೆ ಪೆಂಗಲ್ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಆಗಿದೆ. ತಮಿಳುನಾಡು, ಚೆನ್ನೈ ಮಾತ್ರವಲ್ಲದೆ ಕರ್ನಾಟಕದ ಹಲವೆಡೆ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ‌. ರಾಜ್ಯದಲ್ಲಿ ಐದು ದಿನ ಅಂದ್ರೆ ಡಿಸೆಂಬರ್ 5ರವರೆಗೂ ಮೈಕೊರೆವ ಚಳಿ ಇರಲಿದೆ ಎಂದು ಹೇಳಲಾಗಿದೆ.

Advertisement

ಇದರ ಜೊತೆಗೆ ರಾಜ್ಯದಲ್ಲಿ ಹಲವೆಡೆ ಯೆಲ್ಲೋ ಹಾಗೂ ರೆಡ್ ಅಲರ್ಟ್ ಅನ್ನು ನೀಡಿದೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಮೂರು ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಡಿಸೆಂಬರ್ 3ಕ್ಕೆ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ವಿಪರೀತ ಗಾಳಿ ಸಮೇತ ಅತ್ಯಧಿಕ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಹಾಗೇ ಡಿಸೆಂಬರ್ 5ರಂದು ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಾನೇ ಮಳೆ ಶುರುವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಚಳಿಯ ಜೊತೆಗೆ ಮಳೆಯೂ ಆಗುತ್ತಿರುವ ಕಾರಣ, ವೀಕೆಂಡ್ ಆದ್ರೂ ಕೂಡ ಹೊರಗೆ ಬರಲು ಜನ ಚಿಂತಿಸುವಂತಾಗಿದೆ. ಶಾಪಿಂಗ್, ಸಿನಿಮಾ ಅಂತ ಓಡಾಡುತ್ತಿದ್ದ ಮಂದಿ ಬೆಚ್ಚಗೆ ಒದ್ದು ಮಲಗಿಕೊಳ್ಳುವ ಪ್ಲ್ಯಾನ್ ರೂಪಿಸಿದ್ದಾರೆ. ಇನ್ನು ಐದು ದಿನಗಳ ಕಾಲ ಇದೇ ರೀತಿ ಚಳಿ ಮಳೆ ಇದ್ದು, ಎಚ್ಚರಿಕೆಯಿಂದ ಇರಬೇಕಾಗಿದೆ.

Advertisement

Advertisement
Tags :
bengaluruchitradurgaHeavy rain in karnatakaMeteorological departmentPengal Cyclonesuddionesuddione newsಕರ್ನಾಟಕಚಿತ್ರದುರ್ಗಪೆಂಗಲ್ ಚಂಡಮಾರುತಬಾರೀ ಮಳೆಯ ಎಚ್ಚರಿಕೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹವಮಾನ ಇಲಾಖೆ
Advertisement
Next Article