For the best experience, open
https://m.suddione.com
on your mobile browser.
Advertisement

Pakistan : ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂದೂ ಜನಸಂಖ್ಯೆ :  ಕಡಿಮೆಯಾದ ಮುಸ್ಲಿಮರ ಸಂಖ್ಯೆ...!

05:22 PM Jul 21, 2024 IST | suddionenews
pakistan   ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂದೂ ಜನಸಂಖ್ಯೆ    ಕಡಿಮೆಯಾದ ಮುಸ್ಲಿಮರ ಸಂಖ್ಯೆ
Advertisement

Advertisement

Pakistan : ದಾಯಾದಿ ಸಹೋದರ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆ ಹೆಚ್ಚುತ್ತಿದೆ. ಹೆಚ್ಚಿನ ಮುಸ್ಲಿಮರು ವಾಸಿಸುವ ಪಾಕಿಸ್ತಾನದಲ್ಲಿ ಪ್ರಸ್ತುತ ಹಿಂದೂಗಳು ಅತಿದೊಡ್ಡ ಅಲ್ಪಸಂಖ್ಯಾತರಾಗಿದ್ದಾರೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆದ ಜನಗಣತಿ ಪ್ರಕಾರ ಈ ವಿಷಯ ಬಹಿರಂಗವಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 40 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. 2023ರ ವೇಳೆಗೆ ಪಾಕಿಸ್ತಾನದ ಒಟ್ಟು ಜನಸಂಖ್ಯೆ 24 ಕೋಟಿಯಿದೆ.

Pakistan‌ : ಸ್ವಾತಂತ್ರ್ಯದ ಸಮಯದಲ್ಲಿ, ದೇಶವು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಯಾಯಿತು. ಹೆಚ್ಚಿನ ಮುಸ್ಲಿಮರು ಪಾಕಿಸ್ತಾನಕ್ಕೆ ತೆರಳಿದರು. ಹೆಚ್ಚಿನ ಹಿಂದೂಗಳು ಭಾರತದಲ್ಲಿದ್ದಾರೆ. ಆದರೆ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎರಡೂ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

Advertisement

ಆದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ ಎಂದು ತಿಳಿದಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಲವು ಹಿಂಸಾಚಾರಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿರುವ ಪುರಾತನ ಹಿಂದೂ ದೇವಾಲಯಗಳನ್ನೂ ಧ್ವಂಸಗೊಳಿಸಲಾಗಿದೆ. ಆದರೆ, ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಜನಗಣತಿಯಲ್ಲಿ ಹಿಂದುಗಳ ಜನಸಂಖ್ಯೆ ಹಿಂದಿಗಿಂತಲೂ ಹೆಚ್ಚಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂ ಜನಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ವರ್ಷ ನಡೆಸಿದ ಜನಗಣತಿಯ ಪ್ರಕಾರ ಈ ಇಸ್ಲಾಮಿಕ್ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪಾಗಿದ್ದಾರೆ. 2017ರಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ 35 ಲಕ್ಷ. ಆದರೆ 2023ರ ವೇಳೆಗೆ ಆ ಸಂಖ್ಯೆ 38 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಜನಗಣತಿಯ ಅಧಿಕೃತ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯು 2017 ರಲ್ಲಿ 3.5 ಮಿಲಿಯನ್‌ನಿಂದ 2023 ರಲ್ಲಿ 3.8 ಮಿಲಿಯನ್‌ಗೆ ಏರಿಕೆಯಾಗಿದೆ. ಇದು ಇಸ್ಲಾಮಿಕ್ ರಾಷ್ಟ್ರದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ.

ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಜನಸಂಖ್ಯೆಯು ಪಾಕಿಸ್ತಾನದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದೇ ವೇಳೆ ಪಾಕಿಸ್ತಾನದಲ್ಲಿ ಕ್ರೈಸ್ತರ ಸಂಖ್ಯೆಯೂ ಅಗಾಧವಾಗಿ ಹೆಚ್ಚಿರುವುದು ಸರ್ಕಾರದ ಲೆಕ್ಕಾಚಾರದಿಂದ ಸ್ಪಷ್ಟವಾಗಿದೆ. ಈ ಹಿಂದೆ 2017ರಲ್ಲಿ ಪಾಕಿಸ್ತಾನದಲ್ಲಿ ಕ್ರೈಸ್ತರ ಸಂಖ್ಯೆ 26 ಲಕ್ಷ ಇತ್ತು. 2023ರ ವೇಳೆಗೆ ಆ ಸಂಖ್ಯೆ 33 ಲಕ್ಷಕ್ಕೆ ಏರಿಕೆಯಾಗಿದೆ. ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಇತ್ತೀಚೆಗೆ ಪಾಕಿಸ್ತಾನದಲ್ಲಿ ಕಳೆದ ವರ್ಷ ನಡೆಸಿದ 7 ನೇ ಜನಸಂಖ್ಯೆ ಮತ್ತು ಮನೆಗಳ ಜನಗಣತಿಯ ವಿವರಗಳನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಅಧಿಕೃತ ಪತ್ರಿಕೆ ಡಾನ್ ಇತ್ತೀಚೆಗೆ ಈ ವಿವರಗಳನ್ನು ಬಹಿರಂಗಪಡಿಸಿದೆ.

ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (PBS) ಗುರುವಾರ 7 ನೇ ಜನಸಂಖ್ಯೆ ಮತ್ತು ವಸತಿ ಗಣತಿ 2023 ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಈ ಅಂಕಿಅಂಶಗಳ ಪ್ರಕಾರ 2023ರ ವೇಳೆಗೆ ದೇಶದ ಒಟ್ಟು ಜನಸಂಖ್ಯೆ 24 ಕೋಟಿ ಆಗಿದೆ ಎಂದು ತಿಳಿದು ಬಂದಿದೆ.  2017 ಕ್ಕೆ ಹೋಲಿಸಿದರೆ 2023 ರವರೆಗೆ ಆ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆಯಾಗಿದೆ ಎಂದು ತೋರುತ್ತದೆ. 2017 ರಲ್ಲಿ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇಕಡಾ 96.47 ರಷ್ಟು ಮುಸ್ಲಿಮರು, ಅದಕ್ಕೆ ಹೋಲಿಸಿದರೆ 2023 ರಲ್ಲಿ 96.35 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿವೆ. 2017 ಕ್ಕೆ ಹೋಲಿಸಿದರೆ 2023 ರಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆದರೆ ಪಾಕಿಸ್ತಾನದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ, ಅವರ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.

Tags :
Advertisement