For the best experience, open
https://m.suddione.com
on your mobile browser.
Advertisement

Padma Awards 2024: ರಾಜ್ಯದ ಇಬ್ಬರು ಸೇರಿದಂತೆ 34 ಮಂದಿಗೆ  ಪದ್ಮಶ್ರೀ ಪ್ರಶಸ್ತಿ : ಕೇಂದ್ರ ಪ್ರಕಟ

10:26 PM Jan 25, 2024 IST | suddionenews
padma awards 2024  ರಾಜ್ಯದ ಇಬ್ಬರು ಸೇರಿದಂತೆ 34 ಮಂದಿಗೆ  ಪದ್ಮಶ್ರೀ ಪ್ರಶಸ್ತಿ   ಕೇಂದ್ರ ಪ್ರಕಟ
Advertisement

ಸುದ್ದಿಒನ್ : ಗಣರಾಜ್ಯೋತ್ಸವದಂದು ಈ ವರ್ಷ ನೀಡಲಾಗುವ ಪದ್ಮ ಪ್ರಶಸ್ತಿಗಳ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ರಾಜ್ಯದ ಇಬ್ಬರು ಸೇರಿದಂತೆ ಒಟ್ಟು 34 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

Advertisement
Advertisement

ನಮ್ಮ ರಾಜ್ಯದ ಸಾಮಾಜಿಕ ಕಾರ್ಯಕರ್ತೆ ಪ್ರೇಮ ಧನರಾಜ್‌ (Prema Dhanraj) ಮತ್ತು ಬುಡಕಟ್ಟು ಸಮುದಾಯದ ಮೈಸೂರಿನ ಜೇನುಕುರುಬ ಸೋಮಣ್ಣನವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ಒಲಿದಿದೆ.

Advertisement

ಪದ್ಮ ಪ್ರಶಸ್ತಿಗಳು ಭಾರತ ರತ್ನದ ನಂತರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ ಮತ್ತು ಇವುಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ. ಪದ್ಮ ಪ್ರಶಸ್ತಿಯನ್ನು ಭಾರತ ಸರ್ಕಾರವು 1954 ರಲ್ಲಿ ಪ್ರಾರಂಭಿಸಿತು. 1955 ರಲ್ಲಿ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಎಂದು ಹೆಸರಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಭಾರತದ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

Advertisement
Advertisement

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ:

• ಪಾರ್ವತಿ ಬರುವಾ
• ಜಗೇಶ್ವರ್ ಯಾದವ್
• ಚಾಮಿ ಮುರ್ಮು
• ಗುರ್ವಿಂದರ್ ಸಿಂಗ್
• ಸತ್ಯನಾರಾಯಣ ಬೇಲೇರಿ
• ಸಂಗಮಿಮಾ
• ಹೇಮಚಂದ್ ಮಾಂಝಿ
• ಯಾನುಂಗ್ ಜಮೊಹ್ ಲೆಗೊ
• ಸೋಮಣ್ಣ
• ಸರ್ಬೇಶ್ವರ್ ಬಸುಮತರಿ
• ಪ್ರೇಮಾ ಧನರಾಜ್
• ಉದಯ್ ವಿಶ್ವನಾಥ್ ದೇಶಪಾಂಡೆ
• ಯಾಜ್ದಿ ಮನೇಕ್ಷಾ ಇಟಾಲಿಯಾ
• ಶಾಂತಿ ದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್
• ರತನ್ ಕಹಾರ್
• ಅಶೋಕ್ ಕುಮಾರ್ ಬಿಸ್ವಾಸ್
• ಬಾಲಕೃಷ್ಣನ್ ಸದನಂ ಪುಥಿಯಾ ವೀಟಿಲ್
• ಉಮಾ ಮಹೇಶ್ವರಿ ಡಿ.
• ಗೋಪಿನಾಥ್ ಸ್ವೈನ್
• ಸ್ಮೃತಿ ರೇಖಾ ಚಕ್ಮಾ
• ಓಂಪ್ರಕಾಶ್ ಶರ್ಮಾ
• ನಾರಾಯಣನ್ ಇ.ಪಿ.
• ಭಗತ್ ಪಧನ್
• ಸನಾತನ ರುದ್ರ ಪಾಲ್
• ಬದ್ರಪ್ಪನ್ ಎಂ
• ಜೋರ್ಡಾನ್ ಲೆಪ್ಚಾ
• ಮಚಿಹಾನ್ ಸಾಸಾ
• ಗಡ್ಡಂ ಸಮ್ಮಯ್ಯ
• ಜಂಕಿಲಾಲ್
• ದಾಸರಿ ಕೊಂಡಪ್ಪ
• ಬಾಬು ರಾಮ್ ಯಾದವ್
• ನೇಪಾಳ ಚಂದ್ರ ಸೂತ್ರಧರ್

ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement
Tags :
Advertisement