Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಯೋಧ್ಯೆಯಲ್ಲಿ ರಮಾನಂದ ಸಂಪ್ರದಾಯದ ಪೂಜೆಗೆ ವಿರೋಧ : ಶಂಕರಚಾರ್ಯ ಪೀಠದ ವಾದವೇನು..?

12:12 PM Jan 11, 2024 IST | suddionenews
Advertisement

 

Advertisement

 

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಈ ದಿನಕ್ಕಾಗಿಯೇ ದೇಶದ ಕೋಟ್ಯಾಂತರ ಮಂದಿ ಕಾಯುತ್ತಿದ್ದಾರೆ. ರಾಮನ ಭಕ್ತರು ರಾಮನನ್ನು ಕಣ್ತುಂಬಿಕೊಳ್ಳಲು, ಅಯೋಧ್ಯೆಗೆ ಹೊರಡಲು ಸಜ್ಜಾಗುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದಾನೂ ಅಂದು ಅಯೋಧ್ಯೆಗೆ ಭಕ್ತರು ಬರುತ್ತಾರೆ. ರಾಮ್ ಲಲ್ಲಾ ಮೂರ್ತಿಯ ಪ್ರತಿಷ್ಟಾಪನೆಯಾಗಲಿದೆ. ರಮಾನಂದ ಸಂಪ್ರದಾಯದಂತೆ ರಾಮ್ ಲಲ್ಲಾ ಪ್ರತಿಷ್ಠಾಪನೆ ಮಾಡಲು, ರಾಮಜನ್ಮ ಭೂಮಿ ಟ್ರಸ್ಟ್ ನಿರ್ಧಾರ ಮಾಡಿದೆ. ಇದೀಗ ಇದಕ್ಕೆ ವಿರೋಧ ವ್ಯಕ್ತವಾಗಿದೆ.

Advertisement

ದೇಶದ ಶಂಕರಾಚಾರ್ಯ ಪೀಠದ ಸ್ಚಾಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಂಕರಾಚಾರ್ಯರ ನಾಲ್ಕು ಪೀಠಗಳ ಪೈಕಿ ಮೂರು ಪೀಠಗಳು ರಮಾನಂದ ಸಂಪ್ರದಾಯದಂತೆ ಪ್ರತಿಷ್ಠಾಪನೆ ಮಾಡಲು ವಿರೋಧ ವ್ಯಕ್ತ ಪಡಿಸುತ್ತಿದೆ. ಆದರೆ ಶೃಂಗೇರಿ ಶಾರದಾ ಪೀಠದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ ಎಂದಿದ್ದಾರೆ. ನಾವೂ ಪ್ರಧಾನಿ ಮೋದಿ ವಿರೋಧಿಗಳಲ್ಲ. ಧರ್ಮದ ವಿರುದ್ಧವಾಗಿ ರಾಮ್ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಬಾರದು. ರಮಾನಂದ ಸಂಪ್ರದಾಯದ ಪ್ರಕಾರ ಮಾಡುವುದಾದರೇ ಚಂಪತ್ ರಾಯ್, ನೃಪೇಂದ್ರ ಮಿಶ್ರಾ ಟ್ರಸ್ಟ್ ನ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಉತ್ತರಾಖಂಡ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ‌.

ಪುರಿಯ ಶಂಕರಾಚಾರ್ಯ ಪೀಠದ ನಿಶ್ವಲಾನಂದ ಸ್ವಾಮೀಜಿ ಕೂಡ ಪ್ರಾಣ ಪ್ರತಿಷ್ಠಾಪನೆಗೆ ಗೈರಾಗಲಿದ್ದಾರೆ. ನಮಗೆ ಮಂದಿರ ಲೋಕಾರ್ಪಣೆಗೆ ಆಹ್ವಾನ ಬಂದಿದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ‌ನಾವು ಭಾಗಿಯಾಗಲ್ಲ. ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿಲ್ಲ. ಇದಕ್ಕೆ ನಮ್ಮ ಸಹಮತಿ ಇಲ್ಲ. ಶಾಸ್ತ್ರ, ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿ ನಡೆಯಬೇಕು ಎಂದಿದ್ದಾರೆ.

Advertisement
Tags :
argumentAyodhyaOppositionRamanandaShankaracharya Peethatraditionworshipಅಯೋಧ್ಯೆಪೂಜೆರಮಾನಂದ ಸಂಪ್ರದಾಯವಿರೋಧಶಂಕರಚಾರ್ಯ ಪೀಠ
Advertisement
Next Article