Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಳೆ ವಿಮೆ ಮಾಡಿಸಲು ರೈತರಿಗೆ ಅವಕಾಶ : ಯಾವೆಲ್ಲಾ ಬೆಳೆಗೆ ಡೆಡ್ಲೈನ್ ಯಾವಾಗ..?

08:36 PM Nov 07, 2024 IST | suddionenews
Advertisement

ರೈತರ ನಿರೀಕ್ಷಿಸಿದ ಬೆಳೆಯ ಫಸಲು ಕೆಲವೊಮ್ಮೆ ಕೈಗೆ ಸಿಗುವುದೇ ಕಷ್ಟವಾಗುತ್ತದೆ.‌ ಅದರಲ್ಲೂ ಈ ಮಳೆಗಾಲದಲ್ಲಿ ಬೆಳೆಯಿವ ಬೆಳೆಗಳು ಅಂದುಕೊಂಡಮಟ್ಟಿಗೆ ಲಾಭ ತಂದುಕೊಡಲ್ಲ. ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗುವುದೋ ಒಮ್ಮೊಮ್ಮೆ ಮಳೆಯೇ ಇಲ್ಲದೆ ಬರಗಾಲ ಬರುವುದೋ ಆಗುತ್ತದೆ. ಹೀಗಾಗಿ ಬೆಳೆ ವಿಮೆ ಇದ್ದರೆ ರೈತರು ನೆಮ್ಮದಿಯ ಉಸಿರಾಡಬಹುದು.

Advertisement

 

ಇದೀಗ ಹಿಂಗಾರು ಮಳೆಯ ಬೆಳೆ ವಿಮೆ ಮಾಡಿಸಲು ರೈತರಿಗೆ ಅವಕಾಶ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯಡಿ ಹಲವು ಬೆಳೆಗಳನ್ನು ಗುರುತಿಸಲಾಗಿದೆ. ಜೊತೆಗೆ ಬೆಳೆ ವಿಮೆಗೆ ಕೊನೆಯ ದಿನಾಂಕಗಳನ್ನು ಗುರುತಿಸಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಹಾಗೂ ಮುಂಗಾರು ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸಲು ಕರೆ ನೀಡಲಾಗಿದೆ. ಈ ಯೋಜನೆಗೆ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದೆ ಇರುವ ರೈತರು ಅರ್ಜಿ ಹಾಕಬಹುದು.

Advertisement

ಶೇಂಗಾ, ಭತ್ತ, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ, ಈರುಳ್ಳಿ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು. ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಕುಸುಮೆ ಬೆಳೆಗೆ ಡಿಸೆಂಬರ್ 16ರ ಒಳಗೆ ಅರ್ಜಿ ಹಾಕಬೇಕು. ಮಳೆಯಾಶ್ರಿತ ಬೆಳೆಯಾದ ಜೋಳಕ್ಕೆ ನವೆಂಬರ್ 15, ಕಡಲೆ ಡಿಸೆಂಬರ್ 31, ಈರುಳ್ಳಿ ನವೆಂಬರ್ 30 ಕೊನೆಯ ದಿನವಾಗಿದೆ. ಬೇಸಿಗೆ ಬೆಳೆಗಳಾದ ಭತ್ತ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳಿಗೆ 2025ರ ಫೆಬ್ರವರಿ 28ರ ತನಕ ನೋಂದಣಿಗೆ ಅವಕಾಶವಿದೆ. ರೈತರು ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್/ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.

Advertisement
Tags :
bengaluruchitradurgacrop insuranceOpportunity for farmerssuddionesuddione newsಚಿತ್ರದುರ್ಗಬೆಂಗಳೂರುಬೆಳೆ ವಿಮೆರೈತರಿಗೆ ಅವಕಾಶಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article