For the best experience, open
https://m.suddione.com
on your mobile browser.
Advertisement

ಯಾರು ಅಡ್ಡಗಾಲು ಹಾಕುತ್ತಿದ್ದಾರೆಂದು ಕಾಲವೇ ಉತ್ತರ ಕೊಡಲಿದೆ : ಶಾಸಕ ಶಿವರಾಂ ಹೆಬ್ಬಾರ್

05:03 PM Feb 28, 2024 IST | suddionenews
ಯಾರು ಅಡ್ಡಗಾಲು ಹಾಕುತ್ತಿದ್ದಾರೆಂದು ಕಾಲವೇ ಉತ್ತರ ಕೊಡಲಿದೆ   ಶಾಸಕ ಶಿವರಾಂ ಹೆಬ್ಬಾರ್
Advertisement

Advertisement

ಶಿರಸಿ: ನಿನ್ನೆಯಷ್ಟೇ ರಾಜ್ಯಸಭಾ ಚುನಾವಣೆ ನಡೆದು, ಫಲಿತಾಂಶ ಕೂಡ ಹೊರ ಬಂದಿದೆ. ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಸಹ ರಾಜ್ಯಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ರಾಜ್ಯಸಭೆಗೆ ಎಂಟ್ರಿಯಾಗಿದ್ದಾರೆ. ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಹೀನಾಯವಾಗಿ ಸೋಲಾಗಿದೆ. ಇದರ ನಡುವೆ ನಿನ್ನೆ ಮತದಾನ ಮಾಡುವುದಕ್ಕೆ ಶಾಸಕ ಶಿವರಾಂ ಹೆಬ್ಬಾರ್ ಗೈರಾಗಿದ್ದರು. ಆ ಸಂಬಂಧ ಊಹಾಪೋಹಗಳು ಹರಿದಾಡಿವೆ.

ರಾಜ್ಯಸಭಾ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ. ಬಿಜೆಪಿ ಮೇಲಿನ ಮುನಿಸನ್ನು ಹೊರ ಹಾಕಿದ್ದಾರೆ. ಆದರೆ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮತ ಹಾಕುವುದಕ್ಕೂ ಬಾರದೆ, ಗೈರಾಗಿದ್ದಕ್ಕೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಸ್ವತಃ ಶಿವರಾಮ್ ಹೆಬ್ಬಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisement

ಯಲ್ಲಾಪುರದಲ್ಲಿ ಮಾತನಾಡಿದ ಶಿವರಾಂ ಹೆಬ್ಬಾರ್, ನನಗೆ ಆರೋಗ್ಯ ಸರಿಯಿರಲಿಲ್ಲ. ಅನಾರೋಗ್ಯದ ಕಾರಣಕ್ಕೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ. ವೈದ್ಯರ ಸಲಹೆಯಂತೆ 6 ಗಂಟೆಗೆ ಬರಬೇಕಾಗಿ ಬಂತು. ಅಸಮಾಧಾನವಿದ್ದರೆ ಅಡ್ಡ ಮತದಾನ ಮಾಡುವ ಅವಕಾಶವಿತ್ತು. ನಾನು ನಾಲ್ಕು ದಶಕಗಳಿಂದ ರಾಜಕಾರಣದಲ್ಲಿ ಇದ್ದೀನಿ. ನಾನು ಯಾರಿಗೋ ಹೆದರಿ ಮತದಾನಕ್ಕೆ ಹೋಗಿಲ್ಲ ಅನ್ನೋದು ಸುಳ್ಳು. ಮತದಾನಕ್ಕೆ ಹೋಗಿ ಅಡ್ಡಮತದಾನವಾದರೂ ಮಾಡಬಹುದಿತ್ತು, ಇಲ್ಲವೇ ಮತವನ್ನೇ ಹಾಕದೆಯೂ ಇರಬಹುದಿತ್ತು. ನನ್ನಗೆ ನನ್ನದೆ ಆದ ಅಸಮಾಧಾನವಿರುವುದು ನಿಜ. ಅದು ಜಿಲ್ಲಾಮಟ್ಟದಲ್ಲಿ ಅಸಮಾಧಾನವಿದೆ. ಕೇಂದ್ರ ಮತ್ತು ರಾಜ್ಯ ಮುಖಂಡರ ಮೇಲೆ ಅಸಮಾಧಾನವಿಲ್ಲ. ಸಮಸ್ಯೆ ಇರುವುದು ಜಿಲ್ಲಾ ಮಟ್ಟದ ನಾಯಕರಿಂದ ಮಾತ್ರ. ಯಾರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಕೊಡಲಿದೆ. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ ಎಂದಿದ್ದಾರೆ.

Tags :
Advertisement