ಏರಿಕೆಯಾಗುತ್ತಿದೆ ಈರುಳ್ಳಿ.. 400 ಗಡಿಯಲ್ಲಿ ಬೆಳ್ಳುಳ್ಳಿ : ಹೇಗಿದೆ ಮಾರುಕಟ್ಟೆಯಲ್ಲಿ ಬೆಲೆ..?
ರಾಜ್ಯಕ್ಕೆ ಹೆಚ್ಚು ಈರುಳ್ಳಿ ಪೂರೈಕೆಯಾಗುವುದೇ ಉತ್ತರ ಕರ್ನಾಟಕ ಭಾಗದಿಂದ. ಆದರೆ ಇಉ ಬಾರಿಯ ಹೆಚ್ಚು ಮಳೆಯಾದ ಕಾರಣ, ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ ನಿರೀಕ್ಷಿಸಿದ ಮಟ್ಟಕ್ಕೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆ ಈರುಳ್ಳಿ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೆಜಿಗೆ 70-80 ರೂಪಾಯಿ ಆಗಿದೆ. ಎರಡ್ಮೂರು ಕೆಜಿ ಬರುತ್ತಿದ್ದ ಈರುಳ್ಳಿ ಈಗ ಬರೀ ಒಂದು ಕೆಜಿಗೆ ಅಷ್ಟೊಂದು ರೇಟ್ ಆಗಿರುವುದು ಕಂಡು ಗ್ರಾಹಕರು ಕಂಗಲಾಗಿದ್ದಾರೆ. ಇನ್ನು ಬೆಳ್ಳುಳ್ಳಿ ದರವೂ ಜಾಸ್ತಿಯಾಗುತ್ತಲೆ ಇದೆ.
ಪೂರೈಕೆಗಿಂತ ಬೇಡಿಕೆಯೇ ಜಾಸ್ತಿಯಾದ ಪರಿಣಾಮ ಬೆಲೆಯಲ್ಲಿ ಹೆಚ್ಚಳವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ. ಸಪ್ಲೈ ಆಗದ ಕಾರಣ ಬೆಲೆಯಲ್ಲಿ ಏರಿಕೆಯಾಗಿದೆ. ಮುಂದೆಯೂ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿನ ಈರುಳ್ಳಿ ಸಿಗದೆ ಇರುವ ಕಾರಣ ಪುಣೆ, ಮಹಾರಾಷ್ಟ್ರ ಭಾಗದಿಂದ ತರಿಸಿಕೊಳ್ಳಲಾಗುತ್ತಿದೆ. ಹೀಗಾಗಕ ದಸರಾ ವೇಳೆಗೆ ಇನ್ನು ಬೆಲೆ ಜಾಸ್ತಿಯಾಗಲಿದೆ.
ಈರುಳ್ಳಿ ಒಂದೇ ಅಲ್ಲ ಬೆಳ್ಳುಳ್ಳಿಯನ್ನು ನೋಡುವ ಹಾಗಿಲ್ಲ ಅಷ್ಟು ಬೆಲೆಯಾಗಿದೆ. ಬೆಳ್ಳುಳ್ಳಿ ಕೆಜಿಗೆ 400 ರೂಪಾಯಿ ಗಡಿ ದಾಟಿದೆ. ಎರಡ ಬೆಲೆಯನ್ನು ಕೇಳಿ ಗ್ರಾಹಕರು ಸುಸ್ತಾಗಿದ್ದಾರೆ. ಅದರಲ್ಲೂ ಪ್ರತಿನ ಅಡುಗೆಯಲ್ಲಿ ಬಹಳ ಮುಖ್ಯವಾಗಿ ಬೇಕಾಗುವಂತ ವಸ್ತುಗಳು ಇವಾಗಿವೆ. ಹೀಗಿರುವಾಗ ಎರಡು ಬೆಲೆಯಲ್ಲಿ ಇಷ್ಟೊಂದು ಏರಿಕೆಯಾದರೆ ಗೃಹಿಣಿಯರು ಅಡುಗೆ ಏನು ಮಾಡಬೇಕು ಎಂದು ತಲೆ ಮೇಲೆ ಕೈಹೊತ್ತು ಕೂರಬೇಕಾಗುತ್ತದೆ. ಶ್ರೀಮಂತರಿಗೆ ಇದೆಲ್ಲಾ ಅಷ್ಟೊಂದು ವ್ಯತ್ಯಾಸ ಎನಿಸಲ್ಲ. ಆದರೆ ಬಡವರಿಗೆ ಇಷ್ಟೊಂದು ಹಣ ಕೊಟ್ಟು ಕೊಳ್ಳುವುದು ಸುಲಭವೂ ಅಲ್ಲ.