For the best experience, open
https://m.suddione.com
on your mobile browser.
Advertisement

ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಒಂದೂವರೆ ಲಕ್ಷದ ಫೋನ್ ಕಡಿಮೆ ಬೆಲೆಗೆ ಲಭ್ಯ..!

03:26 PM Sep 22, 2024 IST | suddionenews
ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಒಂದೂವರೆ ಲಕ್ಷದ ಫೋನ್ ಕಡಿಮೆ ಬೆಲೆಗೆ ಲಭ್ಯ
Advertisement

ಸ್ಮಾರ್ಟ್ ಫೋನ್ ಸೇರಿದಂತೆ ಹಲವು ಗೆಜೆಟ್ಸ್ ಗಳನ್ನು ಕೊಳ್ಳಲು ಬಹಳಷ್ಟು ಜನ ಅಮೇಜಾನ್ ಆಫರ್ ಗಳಿ ಕಾಯುತ್ತಾರೆ. ಅದರಲ್ಲೂ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಸಾಕಷ್ಟು ಕಡಿಮೆ ದರದಲ್ಲಿ ನಮಗೆ ಬೇಕಾದ ಮೊಬೈಲ್ ಫೋನ್ ಗಳು ಸಿಗುತ್ತವೆ. ಅಮೇಜಾನ್ ಇದೇ ಸೆಪ್ಟೆಂಬರ್ 27ರಿಂದ ಗ್ರೇಟ್ ಇಂಡಿಯನ್ ಫೆಸ್ಡಿವಲ್ ಆಚರಣೆ ಮಾಡಲಾಗುತ್ತಿದ್ದು, ತನ್ನ ಗ್ರಾಹಕರಿಗೆ ಒಳ್ಳೆಯ ಆಫರ್ ಗಳನ್ನೆ ಬಿಟ್ಟಿದೆ. ಅದರಲ್ಲೂ ಲಕ್ಷಾಂತರ ರೂಪಾಯಿ ಮೊಬೈಲ್ ಫೋನ್ ಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಐಫೋನ್ ಪ್ರಿಯರಿಗೂ ಇದು ಸಿಹಿ ಸುದ್ದಿಯಾಗಿದೆ.

Advertisement

ಐಫೋನ್ 13 ಫೋನ್ ಮೂಲ ಬೆಲೆ 79,900 ರೂಪಾಯಿ ಆಗಿದೆ. ಆದರೆ ಗ್ರೇಟ್ ಇಂಡಿಯನ್ ಫೆಸ್ಟ್ ನಲ್ಲಿ ಐಫೋನ್ 13 ಬೆಲೆ 49,900 ರೂಪಾಯಿ ಇದೆ. ಬ್ಯಾಂಕ್ ಗಳ ಕೊಡುಗೆಯಿಂದ ಮತ್ತೆ 13 ಸಾವಿರ ಕಡಿಮೆಯಾಗಲಿದ್ದು, ಫೈನಲ್ ಬೆಲೆ 37,900 ರೂಪಾಗಿಗೆ ಸಿಗಲಿದೆ.

ಇನ್ನು ಸ್ಯಾಮ್ ಸಾಂಗ್ ಗ್ಯಾಲಕ್ಸಿಯಲ್ಲೂ ಒಳ್ಳೆಯ ರಿಯಾಯಿತಿ ಪಡೆಯಬಹುದಾಗಿದೆ. ಸ್ಯಾಮ್‌ಸಾಂಗ್ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್ ಫೋನ್ ಮೂಲ ಬೆಲೆ ಬಂದು 1,49,900 ರೂಪಾಯಿ ಇದೆ. ಆದರೆ ನೀವೂ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ತೆಗೆದುಕೊಳ್ಳುವ ಪ್ಲ್ಯಾನ್ ಮಾಡಿದ್ದರೆ, ಆ ಫೋನ್ ಬೆಲೆ 69,900 ರೂಪಾಯಿ ಆಗಲಿದೆ. ಬ್ಯಾಂಕ್ ಹಾಗೂ ಕೂಪನ್ ಗಳು ಸೇರಿ. ಇನ್ನು ಶಿಯೋಮಿ 14 ಮೂಲ ಬೆಲೆ 69,900 ಇದೆ. ಆದರೆ‌ಈ ಬಾರಿಯ ಆಫರ್ ನಲ್ಲಿ 47,999ಕ್ಕೆ ಸಿಗಲಿದೆ. ಸೋ ನೀವೂ ಕೂಡ ದುಬಾರಿ ಸ್ಮಾರ್ಟ್ ಫೋನ್ ಅನ್ನು ಕೊಂಡುಕೊಳ್ಳಬೇಕು ಎಂದುಕೊಂಡು ಕಾಯುತ್ತಿದ್ದರೆ ಇದು ಸಕಾಲವಾಗಿದೆ ನೋಡಿ.

Advertisement

Advertisement
Advertisement
Tags :
Advertisement