Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚುನಾವಣಾ ಕರ್ತವ್ಯಕ್ಕಾಗಿ ಒಂದೂವರೆ ಕೋಟಿ ಸಿಬ್ಬಂದಿ ಬಳಕೆ :ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಸುದ್ದಿಗೋಷ್ಟಿ

03:49 PM Mar 16, 2024 IST | suddionenews
Advertisement

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿ ನಡೆಸಲಾಗಿದೆ. ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ. 543 ರಾಜ್ಯಗಳ ಲೋಕಸಭಾ ಚುನಾವಣೆಯ ದಿನಾಂಕ ಇಂದೇ ಘೋಷಣೆಯಾಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವ ಸನ್ನದ್ಧವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ. ಚುನಾವಣಾ ಕರ್ತವ್ಯಕ್ಕಾಗಿ ಒಂದೂವರೆ ಕೋಟಿ ಸಿಬ್ಬಂದು ಬಳಕೆ ಮಾಡಿಕೊಳ್ಳಲಾಗುತ್ತಿದೆ.

Advertisement

 

ದೇಶದಲ್ಲಿ 97 ಕೋಟಿ ಮತದಾರರಿದ್ದಾರೆ. ಮತದಾನಕ್ಕೆ 55 ಲಕ್ಷ ಇವಿಎಂ ಗಳ ವ್ಯವಸ್ಥೆ ಮಾಡಲಾಗಿದೆ. 10 ಲಕ್ಷದ 5 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1.8 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಮುಕ್ತ , ನ್ಯಾಯಸಮ್ಮತ, ಪಾರದರ್ಶ‌ ಚುನಾವಣೆಯೇ ನಮ್ಮ ಉದ್ದೇಶವಾಗಿದೆ.

Advertisement

 

85 ವರ್ಷ ಮೇಲ್ಪಟ್ಟವರಲ್ಲಿ 85 ಸಾವಿರ ಮತದಾರರಿದ್ದಾರೆ. 19.74 ಕೋಟಿಯಷ್ಟು ಯುವ ಮತದಾರರು ಈ ಬಾರಿ ಮತಚಲಾಯಿಸಲಿದ್ದಾರೆ. 12 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಪುರುಷ ಮತದಾರರಿಗಿಂದ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. 85 ಸಾವಿರ ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Advertisement
Tags :
Chief Electoral Officerelection dutynew DelhiOne and a half crore staffRajeev KumarRajiv Kumarಒಂದೂವರೆ ಕೋಟಿಚುನಾವಣಾ ಕರ್ತವ್ಯನವದೆಹಲಿಮುಖ್ಯ ಚುನಾವಣಾಧಿಕಾರಿರಾಜೀವ್ ಕುಮಾರ್ಸಿಬ್ಬಂದಿ ಬಳಕೆ
Advertisement
Next Article