Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರೇಣುಕಾಸ್ವಾಮಿ‌ ಕೊಲೆಯಾದ ದಿನ ದರ್ಶನ್ ಜೊತೆ ಪಾರ್ಟಿಯಲ್ಲಿದ್ದ ಚಿಕ್ಕಣ್ಣ : ಪೊಲೀಸರಿಂದ ವಿಚಾರಣೆ..!

09:10 PM Jun 17, 2024 IST | suddionenews
Advertisement

ಬೆಂಗಳೂರು: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ನೀಟಾಗಿ ಪ್ಲ್ಯಾನ್ ಮಾಡಿ ಬೆಂಗಳೂರಿಗೆ ಕರೆತಂದಿದ್ದ ದರ್ಶನ್ ಗ್ಯಾಂಗ್, ಚಿತ್ರ, ವಿಚಿತ್ರವಾಗಿ ಆ ವ್ಯಕ್ತಿಯನ್ನು ಕೊಂದು ಬಿಸಾಕಿತ್ತು. ಸುಮನಹಳ್ಳಿ ಮೋರಿಗೆ ಬಿಸಾಡಿದ್ದೀವಿ ಎಂದುಕೊಂಡ ಗ್ಯಾಂಗ್ ದಡದಲ್ಲಿಯೇ ಬಿಸಾಡಿ ಹೋಗಿತ್ತು. ಹೆಣ ಮೋರಿಗೆ ಬಿದ್ದಿದ್ದರೆ ಗ್ಯಾಂಗ್ ಅಷ್ಟು ಸುಲಭಕ್ಕೆ ಸಿಕ್ಕಿ ಬೀಳುತ್ತಾ ಇರಲಿಲ್ಲವೇನೋ. ಈ ಕೊಲೆ ಕೇಸಲ್ಲಿ ದಿನೇ ದಿನೇ ಟ್ವಿಸ್ಟ್ ಸಿಗುತ್ತಲೆ ಇದೆ. ಒಬ್ಬೊಬ್ಬರನ್ನೇ ಪೊಲೀಸರು ತಮ್ಮ ಅತಿಥಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

Advertisement

ಇಡೀ ಚಿತ್ರರಂಗ ಈ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದೆ. ದರ್ಶನ್ ಮಾಡಿದ್ದು ತಪ್ಪು, ಆ ಹೆಣ್ಣು ಮಗುವಿಗೆ ಅನ್ಯಾಯವಾಗಿದೆ, ನ್ಯಾಯ ಸಿಗಬೇಕು. ದರ್ಶನ್ ಗೆ ಶಿಕ್ಷೆಯಾಗಬೇಕು ಎಂದೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪೊಲೀಸರು ಕೂಡ ಈ ಕೇಸಿನ ಮೂಲೆ ಮೂಲೆಯಲ್ಲೂ ತನಿಖೆ ನಡೆಸುತ್ತಿದ್ದಾರೆ.

 

Advertisement

ಇದೀಗ ಇಂದು ಹಾಸ್ಯ ನಟ ಚಿಕ್ಕಣ್ಣ ಅವರಿಗೂ ಪೊಲೀಸ್ ನೋಟೀಸ್ ನೀಡಿದ್ದರು‌. ಯಾಕಂದ್ರೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದಿನ ದರ್ಶನ್ ಅಂಡ್ ಗ್ಯಾಂಗ್ ಪಾರ್ಟಿ ಮಾಡುತ್ತಿದ್ದರು. ಆರೋಪಿ ಸ್ಥಾನದಲ್ಲಿರುವ ವಿನಯ್ ಒಡೆತನದ ಸ್ಟೋನಿ ಬ್ರೂಕ್ ಪಬ್ ನಲ್ಲಿ ಎಲ್ಲರೂ ಸೇರಿ ವೀಕೆಂಡ್ ಪಾರ್ಟಿ ಮಾಡುತ್ತಿದ್ದರು. ಆ ಪಾರ್ಟಿಯಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಚಿಕ್ಕಣ್ಣ ಕೂಡ ಜೊತೆಗೆ ಇದ್ದರು. ಹೀಗಾಗಿ ಪೊಲೀಸರು ನೋಟೀಸ್ ನೀಡಿದ್ದರು. ಹೀಗಾಗಿ ನೋಟೀಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಪಬ್ ನಲ್ಲಿದ್ದಾಗ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಬಗ್ಗೆ ಏನಾದರೂ ಬಾಯ್ಬಿಟ್ರಾ ಎಂಬುದನ್ನು ವಿಚಾರಿಸಿದ್ದಾರೆ. ಸ್ಟೋನಿ ಬ್ರೂಕ್ ರೆಸ್ಟೊರೆಂಟ್ ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

Advertisement
Tags :
bengaluruChallenging star darshanChikannaChikkanachitradurgadarshanInterrogation by the policeRenukaswamy murder caseRenukaswamy's murdersuddionesuddione newsಚಿಕ್ಕಣ್ಣಚಿತ್ರದುರ್ಗದರ್ಶನ್ಪೊಲೀಸರಿಂದ ವಿಚಾರಣೆಬೆಂಗಳೂರುರೇಣುಕಾಸ್ವಾಮಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article