'ಮೂಡಾ ಹಗರಣದಲ್ಲಿ ಸಿದ್ದರಾಮಯ್ಯಗೆ ನೋಟೀಸ್ ನೀಡುವ ಇಡಿ, ಕುಮಾರಸ್ವಾಮಿಗೆ ನೀಡಲ್ಲ : ಏನಿದು ಲಾಜಿಕ್..?'
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಮೂಡಾ ಹಗರಣದಲ್ಲಿ ಇಡಿ ಕೂಡ ನೋಟೀಸ್ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದಾರೆ. ಇಡಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಮೂಡಾ ಪ್ರಕರಣ ಮತ್ತು ಇಡಿಯ ನಡುವೆ ಎಲ್ಲಿಂದ ಸಂಬಂಧ..? ಮೂಡಾ ಪ್ರಕರಣದಲ್ಲಿ ಇಡಿ, ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಿದ್ದರಲ್ಲಿ ಯಾವ ಲಾಜಿಕ್ ಇದೆ ಎಂಬುದು ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯಗೆ ನೋಟೀಸ್ ಕೊಟ್ಟ ಇಡಿ, ಜಮೀನು ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿರುವ ಕುಮಾರಸ್ವಾಮಿ ಅವರಿಗೆ ಯಾಕೆ ನೋಟೀಸ್ ಕೊಡ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಎಲೆಕ್ಟ್ರೋ ಬಾಂಡ್ ನಲ್ಲಿ ಎಂಟೂವರೆ ಸಾವಿರ ಕೋಟಿ ಫ್ರಾಡ್ ಆಗಿದೆ. ಆದರೆ ಅಲ್ಲ್ಯಾರಿಗೂ ಇಡಿ ನೋಟೀಸ್ ಕೊಡಲ್ಲ. ಮೂಡಾ ಕೇಸ್ 2006ರಲ್ಲಿ ಅಲ್ಲಿ ಯಾವ ರೀತಿ ಹಣಕಾಸು ವ್ಯವಹಾರ ನಡೆದಿದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಅಲ್ಲಿ ಇಡೊ ಹೇಗೋಯ್ತು ಗೊತ್ತಿಲ್ಲ. ಇಡಿ ಅಂದ್ರೆ ಏನು ಅಂತ ಬಿಜೆಪಿ ಅವ್ರನ್ನ ಕೇಳಿ. ಲಾಜಿಕ್ ಕ್ವೆಷನ್ ಕೇಳಿ. ಇಡಿಗೆ ಮೂಡಾಗೂ ಏನು ಸಂಬಂಧ ಅಂತ ಕೇಳಿ. ಇಡಿಗೆ ಮೂಡಾಗೂ ಲಿಂಕ್ ಇದ್ಯೆನ್ರಿ. ಹಾಗಾದ್ರೆ ನಿವೇಶನ ತಗೊಂಡವ್ರಿಗೆಲ್ಲ ನೋಟೀಸ್ ಕೊಟ್ಟಿದೆಯಾ..? ಡಿನೋಟಿಫಿಕೇಷನ್ ಮಾಡಿದ್ದಾರಲ್ಲ ಕುಮಾರಸ್ವಾಮಿ ಅವರು ಅದ್ಯಾಕ್ಯಾಕೆ ಇಡಿ ನೋಟೀಸ್ ಹೋಗಬಾರದು ಮತ್ತೆ. ಡಿನೋಟಿಫಿಕೇಷನ್ ಆಗಿರೋದು ನಿಜ ತಾನೇ. ಮತ್ತೆ ಅದಕ್ಯಾಕೆ ನೋಟಿಫಿಕೇಷನ್ ಹೋಗಬಾರದು. ಈ ಪ್ರಶ್ನೆಯನ್ನ ಕೇಳಿ ಎಂದು ಸಚಿವ ಸಂತೋಷ್ ಲಾಡ್ ಒತ್ತಾಯಿಸಿದ್ದಾರೆ.