For the best experience, open
https://m.suddione.com
on your mobile browser.
Advertisement

ಸಿನಿಮಾ ರಂಗದಲ್ಲಿ ಮಾತ್ರವಲ್ಲ ರಾಜಕೀಯ ರಂಗದಲ್ಲೂ ಮೀಟೂ ಆತಂಕ : ರಚನೆಯಾಗುತ್ತಾ ಆಂತರಿಕ ಸಮಿತಿ..?

01:39 PM Sep 06, 2024 IST | suddionenews
ಸಿನಿಮಾ ರಂಗದಲ್ಲಿ ಮಾತ್ರವಲ್ಲ ರಾಜಕೀಯ ರಂಗದಲ್ಲೂ ಮೀಟೂ ಆತಂಕ   ರಚನೆಯಾಗುತ್ತಾ ಆಂತರಿಕ ಸಮಿತಿ
Advertisement

ಬೆಂಗಳೂರು: ಎಲ್ಲೆಡೆ ಸದ್ಯ ಚರ್ಚೆಯಾಗುತ್ತಿರುವುದು ಹೇಮಾ ಕಮಿಟಿ ವಿಚಾರ. ಕೇರಳದ ಚಿತ್ರರಂಗದಲ್ಲಿ ಹೇಮಾ ಕಮಿಟಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ದೊಡ್ಡ ದೊಡ್ಡವರ ತಲೆ ದಂಡವೇ ನಡೆದು ಹೋಗುತ್ತಿದೆ. ಅಲ್ಲಿನ ವರದಿಯ ಪರಿಣಾಮ ಎಲ್ಲೆಡೆ ಜೋರಾಗಿದೆ. ನಮ್ಮ ಚಿತ್ರರಂಗದಲ್ಲೂ ಸಮಿತಿಯೊಂದು ಬೇಕು ಎಂದು ತೆಲುಗು, ಕನ್ನಡ ಇಂಡಸ್ಟ್ರಿ ಕೂಡ ಬೇಡಿಕೆ ಇಟ್ಟಿದೆ.

Advertisement
Advertisement

ಈಗಾಗಲೇ ಫೈರ್ ಎಂಬ ಕನ್ನಡ ಸಂಸ್ಥೆ ಮುಖ್ಯಮಂತ್ರಿಗಳಿಗೆ‌ ಮನವಿಯೊಂದನ್ನು ಸಲ್ಲಿಸಿದ್ದಾರೆ. ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದರ ನಡುವೆ ಇಂಥದ್ದೊಂದು ಸಮಿತಿ ರಾಜಕಾರಣಕ್ಕೂ ಅವಶ್ಯಕತೆ ಇದೆ ಎಂಬ ಕೂಗು ಕೇಳಿ ಬರುತ್ತಿದೆ. ರಾಜಕಾರಣದಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ಇದೆ ಎಂಬ ಆರೋಪ ಕೇಳಿ ಬಂದಿದೆ. ಬರೀ ಸಿನಿಮಾರಂಗವಲ್ಲ ರಾಜಕೀಯದಲ್ಲೂ ಮೀಟೂ ಅಲೆಯ ಬಿಸಿ ತಾಗಿದೆ.

Advertisement

ಬಿಜೆಪಿ ಮಹಿಳಾ‌ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಸಿ.ಮಂಜುಳಾ ಸಮಿತಿಗೆ ಆಗ್ರಹಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಾತ್ರವಲ್ಲ, ರಾಜಕೀಯ ಪಕ್ಷಗಳಲ್ಲೂ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು. ರಾಜಕೀಯಕ್ಕೆ ಬರುವ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾದರೆ, ಯಾವುದೇ ಮುಲಾಜಿಲ್ಲದೆ ಬಹಿರಂಗವಾಗಿ ವಿರೋಧಿಸಬೇಕು‌. ರಾಜಕೀಯ ಪಕ್ಷಗಳು ಬೆಳೆಯುತ್ತಾ ಹೋದಂತೆ, ರಾಜಕೀಯ ಪಕ್ಷಗಳಿಗೆ ಬರುವ ಜನಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಆಗ ಎಲ್ಲಾ ರೀತಿಯ ಜನರು ಬರುತ್ತಾರೆ. ಆಗ ಶೋಷಣೆಯಾದರೆ ಮಹಿಳೆಯರು ಪ್ರತಿರೋಧ ಒಡ್ಡಬೇಕು. ಇಲ್ಲವಾದರೆ ತಮಗೆ ತಾವೇ ಮೋಸ ಮಾಡಿಕೊಂಡಂತೆ ಆಗುತ್ತದೆ ಎಂದಿದ್ದಾರೆ. ಈ ಮೂಲಕ ರಾಜಕೀಯ ರಂಗಕ್ಕೂ ಸಮಿತಿ ರಚಿಸಲು ಒತ್ತಾಯ ಕೇಳಿ ಬಂದಿದೆ.

Advertisement

Tags :
Advertisement