For the best experience, open
https://m.suddione.com
on your mobile browser.
Advertisement

ದರ್ಶನ್ ಗೆ ಮನೆ ಊಟ, ಹಾಸಿಗೆ ಇಲ್ಲ : ಕೋರ್ಟ್ ನಲ್ಲಿ ಆಗಿದ್ದೇನು..?

01:41 PM Jul 10, 2024 IST | suddionenews
ದರ್ಶನ್ ಗೆ ಮನೆ ಊಟ  ಹಾಸಿಗೆ ಇಲ್ಲ   ಕೋರ್ಟ್ ನಲ್ಲಿ ಆಗಿದ್ದೇನು
Advertisement

ಬೆಂಗಳೂರು: ಜೈಲೂಟ ದೇಹಕ್ಕೆ ಹಿಡಿಸದೆ ದರ್ಶನ್ ಗೆ ವಾಂತಿ-ಬೇಧಿ ಆಗುತ್ತಿತ್ತಿದೆ ಎಂದು ಅವರ ಪರ ವಕೀಲರು ಮನೆ ಊಟ, ಹಾಸಿಗೆ, ಪುಸ್ತಕವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ದರ್ಶನ್ ಗೆ ಹಿನ್ನಡೆಯಾಗಿದೆ. ಮುಂದಿನ ವಿಚಾರಣೆ ತನಕ ಜೈಲಿನ ಎಲ್ಲಾ ಕೈದಿಗಳಿಗೂ ಸೌಲಭ್ಯ ಹೇಗಿರುತ್ತದೆಯೋ ಅದೇ ಥರ ದರ್ಶನ್ ಅವರಿಗೂ ಸೌಲಭ್ಯವನ್ನು ನೀಡಲಾಗುತ್ತದೆ.

Advertisement

ಜೈಲೂಟದಿಂದ ದರ್ಶನ್ ಸಾಕಷ್ಟು ತೂಕ ಕಳೆದುಕೊಳ್ಳುತ್ತಿದ್ದಾರೆ. ಹಾಸಿಗೆ, ಊಟ, ಪುಸ್ತಕ ನೀಡುವಂತೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಇಂದು ಕೋರ್ಟ್ ನಲ್ಲಿ ದರ್ಶನ್ ಪರ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು. ಜೈಲು ನಿಯಾಮಾವಳಿಗಳಲ್ಲಿ ಮನೆಯ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ ಅವರಿಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದು ವಾದ ಮಾಡಿದರು.

Advertisement

ಈ ವಾದ ಆಲಿಸಿದ್ದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರು, ಮನೆಯಿಂದ ಊಟ, ಹಾಸಿಗೆ, ಪುಸ್ತಕ ಪಡೆಯಲು ಕೋರಿದ್ದೀರಿ. ಈ ಬಗ್ಗೆ ಈ ಹಿಂದಿನ ಕೋರ್ಟ್ ತೀರ್ಪುಗಳಿವೆಯೇ..? ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ..? ಜೈಲು ಅಧಿಕಾರಿಗಳಿಗೆ ನೀವೂ ಮನವಿ ಮಾಡಿದ್ದೀರಿ. ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದೇ ಹೈಕೋರ್ಟ್ ಗೆ ಅರ್ಜಿ ಸಲಗಲಿಸಬಹುದೆ..? ಕೈದಿಗಳಿಗೆ ಇರುವ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದೆಲ್ಲವನ್ನು ಕೇಳಿದರು. ಇದನ್ನು ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು. ಕಾನೂ‌ನಿನ ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

Tags :
Advertisement