ಯಾವುದೇ ಕಾರಣಕ್ಕೂ ಕ್ಷಮಿಸಲ್ಲ : ಸಿಟಿ ರವಿ ವಿರುದ್ಧ ಸಿಡಿದೆದ್ದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಸುವರ್ಣ ಸೌಧದಲ್ಲಿ ಸಿಟಿ ರವಿ ಅವರು ಆಡಿದ್ದ ಮಾತಿನ ಬಿಸಿ ಇನ್ನು ಹಾರಿಲ್ಲ. ಅಶ್ಲೀಲ ಪದ ಬಳಕೆಯ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಸಿಡಿದೆದ್ದಿದ್ದಾರೆ. ಆ ಸಂಬಂಧ ಎರಡು ವಿಡಿಯೋಗಳನ್ನು ಇಂದು ಹರಿಬಿಟ್ಟಿದ್ದಾರೆ. ಈ ವೇಳೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಕ್ಷಮಿಸೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಡಿ.19 ರಂದು ಎಂದು ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ. ಆ ಹೇಳಿಕೆಯ ವಿಡಿಯೋ ದಾಖಕೆಯನ್ನು ರಿಲೀಸ್ ಮಾಡುತ್ತಿದ್ದೇನೆ. ಅವರು ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಎಂದಿದ್ದಾರೆ. ತನ್ನ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ. ನೀವೂ ನನಗೆ ಆ ಪದ ಬಳಸಿದ್ದೀರಾ. ಬಹಳ ನೊಂದಿದ್ದೇನೆ. ಇಂತಹ ನೂರು ಸಿಟಿ ರವಿ ಬಂದರೂ ನಾನು ಎದುರಿಸಲು ಸಿದ್ಧ. ನನ್ನ ಬಳಿ ಎಲ್ಲಾ ದಾಖಲೆಗಳಿದಾವೆ. ಸಿಟಿ ರವಿಯನ್ನು ಕ್ಷಮಿಸೋಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಮಹಿಳಾ ಕುಲವನ್ನು ಅವಮಾನಿಸಿದ ಸಿಟಿ ರವಿ ವಿರುದ್ಧ ಹೋರಾಡುತ್ತೇನೆ.
ಸಿಟಿ ರವಿಗೆ ಶಿಕ್ಷೆ ಆಗುವವರೆಗೂ ಸುಮ್ಮನೆ ಕೂರುವುದಿಲ್ಲ. ನಾನು ಕೂಡ ಕಾನೂನು ಹೋರಾಟ ಮಾಡುತ್ತೇನೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತೇನೆ. ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರಿಗೆ ಪತ್ರ ಬರೆಯುತ್ತೇನೆ. ಬಿಜೆಪಿ ನಾಯಕರನ್ನು ನೋಡಿದರೆ ನನಗೆ ನಾಚಿಕೆಯಾಗುತ್ತದೆ. ಮಹಿಳೆಯನ್ನು ನಿಂದಿಸಿದ ವ್ಯಕ್ತಿಗೆ ಬೆಂಬಲ ನೀಡುತ್ತಿದ್ದಾರೆ. ಸಿಟಿ ರವಿಗೆ ತಾಯಿ, ಹೆಂಡತಿ ಆದರೂ ಸ್ವಲ್ಪ ಹೇಳಿ. ಆತ್ಮಸಾಕ್ಷಿ ಅಂತ ಇದ್ರೆ ತಮ್ಮ ತಪ್ಪಿನ ಅರಿವು ಮಾಡಿಕೊಳ್ಳಲಿ ಎಂದು ಗರಂ ಆಗಿದ್ದಾರೆ.