For the best experience, open
https://m.suddione.com
on your mobile browser.
Advertisement

ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ ಲೆಹೆಮ್‌ನಲ್ಲಿ " ಕ್ರಿಸ್ಮಸ್ ಟ್ರೀ ಇಲ್ಲ, ಸಂಭ್ರಮವಿಲ್ಲ | ನೇಟಿವಿಟಿ ಚರ್ಚ್ ನಲ್ಲಿ ನೀರವ ಮೌನ

03:25 PM Dec 25, 2023 IST | suddionenews
ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ ಲೆಹೆಮ್‌ನಲ್ಲಿ   ಕ್ರಿಸ್ಮಸ್ ಟ್ರೀ ಇಲ್ಲ  ಸಂಭ್ರಮವಿಲ್ಲ   ನೇಟಿವಿಟಿ ಚರ್ಚ್ ನಲ್ಲಿ ನೀರವ ಮೌನ
Advertisement

ಸುದ್ದಿಒನ್ :  ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಪ್ರವಾಸಿಗರು ಮತ್ತು ಯಾತ್ರಿಕರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಕ್ರಿಸ್ತನ ಜನ್ಮಸ್ಥಳವಾದ ಬೆತ್ಲೆಹೆಮ್ ಈ ವರ್ಷ ಜನಸಂದಣಿಯಿಲ್ಲದೆ  ಬಿಕೋ ಎನ್ನುತ್ತಿದೆ. 

Advertisement

ವೆಸ್ಟ್ ಬ್ಯಾಂಕ್‌ನಲ್ಲಿರುವ ಈ ಪ್ಯಾಲೇಸ್ಟಿನಿಯನ್ ಪಟ್ಟಣದಲ್ಲಿ ಈಗ ಯುದ್ಧದ ಕಾರಣದಿಂದಾಗಿ ನೀರವ ಮೌನ ತಾಂಡವವಾಡುತ್ತಿದೆ. ಬಾಂಬ್ ಸ್ಫೋಟದಿಂದ ಭಯಭೀತರಾದ ಸ್ಥಳೀಯರು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಮಾರಕ ಅಂಗಡಿಗಳನ್ನು ಮುಚ್ಚಿದ್ದಾರೆ. ಅಕ್ಟೋಬರ್ 7 ರಂದು, ಗಡಿ ಪ್ರದೇಶಗಳಲ್ಲಿ ಹಮಾಸ್ ಬಂದೂಕುಧಾರಿಗಳ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಇಸ್ರೇಲಿ ಸೇನೆಯು ಗಾಜಾದ ಮೇಲೆ ಉಗ್ರ ದಾಳಿ ನಡೆಸಿತು. ಇದರಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಭೀಕರ ಯುದ್ಧ ನಡೆಯುತ್ತಿದೆ.

Advertisement

ಯುದ್ಧದ ಹಿನ್ನೆಲೆಯಲ್ಲಿ ಪ್ರವಾಸಿಗರು, ಯಾತ್ರಾರ್ಥಿಗಳ ಆಗಮನ ಸ್ಥಗಿತಗೊಂಡಿದ್ದು, ಕನಿಷ್ಠ ಒಬ್ಬರೂ ಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಹೋಟೆಲ್ , ರೆಸ್ಟೋರೆಂಟ್ ಗಳ ಮಾಲೀಕರು. ಖಾಸಗಿ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಸ್ಥಳೀಯ ಅಲೆಕ್ಸಾಂಡರ್ ಹೋಟೆಲ್ ಮಾಲೀಕ ಜೋಯಿ ಕನವಟಿ ಮಾತನಾಡಿ, ನಾಲ್ಕು ತಲೆಮಾರುಗಳಿಂದ ಇಲ್ಲಿ ಹೊಟೇಲ್ ವ್ಯಾಪಾರ ನಡೆಸುತ್ತಿದ್ದು, ಈವರೆಗೆ ಇಂತಹ ಪರಿಸ್ಥಿತಿ ಎದುರಾಗಿಲ್ಲ. ಕ್ರಿಸ್‌ಮಸ್ ದಿನದಂದು ಬೆಥ್‌ಲೆಹೆಮ್ ಮೂಕವಿಸ್ಮಿತವಾಗಿದ್ದು, ಕ್ರಿಸ್‌ಮಸ್ ಟ್ರೀ ಹಾಕಲೂ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಬೆತ್ಲೆಹೆಮ್ ಯೇಸುವಿನ ಜನ್ಮಸ್ಥಳವಾಗಿರುವುದರಿಂದ ಅಲ್ಲಿನ ಚರ್ಚನ್ನು ಕ್ರೈಸ್ತರು  ನೇಟಿವಿಟಿ ಚರ್ಚ್ ಎಂದು ಕರೆಯುತ್ತಾರೆ. ವಿಶೇಷವಾಗಿ ಕ್ರಿಸ್ ಮಸ್ ವೇಳೆ ಇದನ್ನು ನೋಡಲು ಪ್ರಪಂಚದ ವಿವಿಧ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಅಕ್ಟೋಬರ್ 7 ರ ಮೊದಲು ಕ್ರಿಸ್‌ಮಸ್‌ಗಾಗಿ ತನ್ನ ಹೋಟೆಲ್ ಅನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿತ್ತು.  ಪ್ರವಾಸಿಗರಿಗೆ ಸಹಾಯ ಮಾಡಲು ಹೆಚ್ಚುವರಿಯಾಗಿ ಪಟ್ಟಣದಲ್ಲಿ ಬೇರೆಡೆ ಕೊಠಡಿಗಳನ್ನು ಹುಡುಕುತ್ತಿದ್ದೆ ಎಂದು ಕನವತಿ ಹೇಳಿದರು. ಯುದ್ಧ ಪ್ರಾರಂಭವಾದಾಗಿನಿಂದ ಮುಂದಿನ ವರ್ಷದ ವರೆಗೂ ಎಲ್ಲಾ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವಾಪು ಅಳಲು ತೋಡಿಕೊಂಡರು. ನಿತ್ಯ ರಾತ್ರಿ ಕನಿಷ್ಠ 120 ಮಂದಿ ಊಟ ಮಾಡುತ್ತಿದ್ದರು. ಆದರೆ ಈಗ ಯುದ್ಧದಿಂದಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

Tags :
Advertisement