Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

NEET PG 2024 Postponed : ಇಂದು ನಡೆಯಬೇಕಿದ್ದ ನೀಟ್ -UG ಪರೀಕ್ಷೆ ದಿಢೀರ್ ಮುಂದೂಡಿಕೆ : ಆಕ್ರೋಶಗೊಂಡ ವಿದ್ಯಾರ್ಥಿಗಳು

08:27 AM Jun 23, 2024 IST | suddionenews
Advertisement

ನವದೆಹಲಿ : ನೀಟ್ -PG ಪರೀಕ್ಷೆಗೆ ಇಂದು ದಿನಾಂಕ ಫಿಕ್ಸ್ ಆಗಿತ್ತು. ಅದರಂತೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಎಲ್ಲಾ ರೀತಿಯ ತಯಾರಿಯನ್ನು ನಡೆಸಿದ್ದರು. ಶ್ರಮವಹಿಸಿ ಓದುತ್ತಿದ್ದ ಅದೆಷ್ಟೋ ವಿದ್ಯಾರ್ಥಿಗಳಿಗೆ ದಿಢೀರನೇ ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ನಿನ್ನೆ ರಾತ್ರಿ 10 ಸುಮಾರಿಗೆ ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಿದೆ ಕೇಂದ್ರ ಸರ್ಕಾರ.

Advertisement

ನೀಟ್-ಪಿಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಯಾಗಿತ್ತು. ಈ ಸಂಚಲನದ ನಡುವೆ ಇಂದು ನಡೆಯಬೇಕಿದ್ದ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಸಂಬಂಧ ಮಾಹಿತಿಯನ್ನು ನೀಡಿದೆ.

ಇಂದು ದೇಶದ 270 ಪರೀಕ್ಷಾ ‌ಕೇಂದ್ರಗಳಲ್ಲಿ 2.2 ಲಕ್ಷ ಅಭ್ಯರ್ಥಿಗಳು ನೀಟ್ – ಪಿಜಿ ಎಂಟ್ರೆನ್ಸ್ ಪರೀಕ್ಷೆ ಬರೆಯಬೇಕಾಗಿತ್ತು. ಪರೀಕ್ಷೆಯ ಪಾವಿತ್ರ್ಯತೆ ಹಾಗೂ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಟ್ವಿಟ್ಟರ್ ನಲ್ಲಿ ದಿನಾಂಕ ಮುಂದೂಡಿಕೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಆದರೆ ಮುಂದಿನ ದಿನಾಂಕ ಯಾವಾಗ ಎಂಬುದನ್ನು ಇನ್ನು ಘೋಷಣೆ ಮಾಡಿಲ್ಲ‌. ಪರೀಕ್ಷೆಗೆಂದು ತಯಾರಾಗಿದ್ದ ವಿದ್ಯಾರ್ಥಿಗಳಿಗೆ ಈಗ ತಾಳ್ಮೆಯಿಂದ ಕಾಯಲೇಬೇಕಾದ ಅನಿವಾರ್ಯತೆಯಾಗಿದೆ.

Advertisement

ಆದರೆ ಕೇಂದ್ರ ಸರ್ಕಾರದಿಂದ ಈ ಟ್ವೀಟ್ ನೋಡುತ್ತಿದ್ದಂತೆ ಸಾಕಷ್ಟು ಜನ ಆಕ್ರೋಶಗೊಂಡಿದ್ದಾರೆ. ಈಗಾಗಲೇ ಎಷ್ಟೋ ವಿದ್ಯಾರ್ಥಿಗಳು ಅರ್ಧ ದಾರಿ ಕ್ರಮಿಸಿದ್ದಾರೆ. ಈಗ ದಿಢೀರೆಂದು ಪರೀಕ್ಷೆ ರದ್ದು ಮಾಡಿದರೆ ಅವರ ಪಾಡೇನಾಗಬೇಕು ಎಂದು ಒಬ್ಬರು ಕೇಳಿದರೆ, ಈ ಪರೀಕ್ಷೆಗಾಗಿ ತಿಂಗಳಾನುಗಟ್ಟಲೇ ತಯಾರಿ ನಡೆಸಿಕೊಂಡಿರುತ್ತಾರೆ. ಈಗ ಪರೀಕ್ಷೆ ಕ್ಯಾನ್ಸಲ್ ಮಾಡಿದರೆ ಹೇಗೆ. ಮೊದಲೇ ಹೇಳಬಾರದಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement
Tags :
bengaluruchitradurgaNEET PG 2024 PostponedNEET-UG examNewdelhipostponedScheduledstudentssuddenlysuddionesuddione newsಆಕ್ರೋಶಚಿತ್ರದುರ್ಗದಿಢೀರ್ನವದೆಹಲಿನೀಟ್ -UG ಪರೀಕ್ಷೆಬೆಂಗಳೂರುಮುಂದೂಡಿಕೆವಿದ್ಯಾರ್ಥಿಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article