ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಯನತಾರ : 'ಅನ್ನಪೂರ್ಣಿ' ಬಗ್ಗೆ ಹೇಳಿದ್ದೇನು..?
ಇತ್ತಿಚೆಗೆ 'ಅನ್ನಪೂರ್ಣಿ' ಸಿನಿಮಾ ಸಾಕಷ್ಟು ವಿವಾದಕ್ಕೆ ಸಿಲುಕಿತ್ತು. ಅಷ್ಟೇ ಯಾಕೆ ನೆಟ್ ಫ್ಲಿಕ್ಸ್ ನಿಂದ ಸಿನಿಮಾವನ್ನು ತೆಗೆದು ಹಾಕಲಾಗಿತ್ತು. ಜೀ ಸ್ಟುಡಿಯೋದವರು ಈ ಸಿನಿಮಾದ ವಿಚಾರಕ್ಕೆ ಕ್ಷಮೆಯನ್ನು ಕೇಳಿದ್ದರು. ಇದೀಗ ಈ ವಿಚಾರವಾಗಿ ನಟಿ ನಯನತಾರಾ ಬೇಸರ ಹೊರ ಹಾಕಿದ್ದಾರೆ. ನೋವಿನಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಅನ್ನಪೂರ್ಣಿ ಸಿನಿಮಾ ಮೂಲಕ ನಯನತಾರಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹಿಂದೂ ಮುಖಂಡರು ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಯನತಾರಾ ವಿರುದ್ಧ ದೂರು ನೀಡಿದ್ದರು. ಶ್ರೀರಾಮನನ್ನು ಮಾಂಸಾಹಾರಿ ಎಂದು ಕರೆಯಲಾಗಿದೆ. ಲವ್ ಜಿಹಾದ್ ವಿಚಾರಕ್ಕೆ ಸಿನಿಮಾದಲ್ಲಿ ಪ್ರೋತ್ಸಾಹ ನೀಡಲಾಗಿದೆ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನ್ನಪೂರ್ಣಿ, ಕುಟುಂಬದವರ ವಿರೋಧದ ನಡುವೆಯೂ ಮಾಂಸಾಹಾರ ಅಡುಗೆ ಮಾಡಲು ನಿರ್ಧರಿಸುತ್ತಾಳೆ. ಈ ವೇಳೆ ಮುಸ್ಲಿಂ ಹುಡುಗನ ಗೆಳೆತನ ಮಾಡುತ್ತಾಳೆ. ಆತ ಶ್ರೀರಾಮನು ಮಾಂಸಹಾರಿಯೇ ಎನ್ನುತ್ತಾನೆ. ಮಾಂಸಾಹಾರ ಅಡುಗೆ ಮಾಡುವಾಗ ಅನ್ನಪೂರ್ಣೇ ಹಿಜಾಬ್ ಧರಿಸುತ್ತಾಳೆ. ಅನ್ನಪೂರ್ಣಿ ಪಾತ್ರವನ್ನು ನಯನತಾರ ನಿಭಾಯಿಸಿದ್ದಾರೆ.
ಅನ್ನಪೂರ್ಣಿ ಚಿತ್ರವನ್ನು ಒಟಿಟಿಯಿಂದ ಡಿಲೀಟ್ ಮಾಡಿರುವುದಕ್ಕೆ ನಟಿ ನಯನತಾರಾ ಕ್ಷಮೆ ಕೇಳಿದ್ದಾರೆ. ವರ್ಷಪೂರ್ತಿ ದೇವರು, ದೇವಾಲಯಗಳನ್ನು ಸುತ್ತುವ ನಾನು ಉದ್ದೇಶಪೂರ್ವಕವಾಗಿ ಯಾರ ಭಾವನೆಗಳಿಗೂ ನೋವುಂಟು ಮಾಡಲ್ಲ. ಸಮಾಜಕ್ಕೆ ಸ್ಪೂರ್ತಿದಾಯಕ ಸಿನಿಮಾ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. ಈ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ. ನೆಟ್ ಫ್ಲಿಕ್ಸ್ ನಿಂದ ಸಿನಿಮಾ ತೆಗೆದಿರುವುದಕ್ಕೆ ನಟಿ ನಯನತಾರಾ ಬೇಸರ ಹಿರ ಹಾಕಿದ್ದಾರೆ.